ನಟ ದರ್ಶನ್ ಅವರು ಕಳೆದ ವರ್ಷದಿಂದ ಅದೊಂದು ಕೇಸ್ ವಿಚಾರದಲ್ಲಿ ಎಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಎಂದು ನಮಗೆಲ್ಲಾ ಗೊತ್ತೇ ಇದೆ. 6 ತಿಂಗಳ ಅವಧಿಯಲ್ಲಿ ಎರಡೆರಡು ಸಾರಿ ಜೈಲುಗಳು ಟ್ರಾನ್ಸ್ಫರ್ ಆಗಿ, ಕೊನೆಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ದರ್ಶನ್ ಅವರಿಗೆ ಜಾಮೀನು ಸಿಕ್ಕಿತು. ಅದು ಸಿಕ್ಕಿದ್ದು ಆರೋಗ್ಯ ಸಮಸ್ಯೆ ಇದ್ದ ಕಾರಣಕ್ಕೆ. ಸರ್ಜರಿ ಮಾಡಿಸಬೇಕು, ಇಲ್ಲದೇ ಹೋದರೆ ಬೆನ್ನಿಗೆ ತುಂಬಾ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ಕೋರ್ಟ್ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿತು. ಬಳಿಕ ದರ್ಶನ್ ಅವರಿಗೆ ಪೂರ್ಣ ಪ್ರಮಾಣದಲ್ಲಿ ಜಾಮೀನು ಸಿಕ್ಕಿ, ಹೊರಗಡೆ ಬಂದರು. ಹೊರಗಡೆ ಬಂದ ನಂತರ ಒಂದಷ್ಟು ದಿವಸಗಳ ಕಾಲ ದರ್ಶನ್ ಅವರು ಎಲ್ಲಿಯೂ ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು.
ಮೈಸೂರಿನ ಫಾರ್ಮ್ ಹೌಸ್ ನಲ್ಲೇ ಹೆಚ್ಚು ದಿವಸ ಇದ್ದರು, ತಮ್ಮ ಕುಟುಂಬದವರನ್ನು ಬಿಟ್ಟು ಇನ್ಯಾರನ್ನು ಕೂಡ ಅವರು ಭೇಟಿ ಮಾಡುತ್ತಿರಲಿಲ್ಲ. ನಿಧಾನವಾಗಿ ಹೊರಗಡೆ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದರು. ದರ್ಶನ್ ಅವರಿಗೆ ಹೆಚ್ಚು ಹೊತ್ತು ನಿಲ್ಲಲು ಆಗುವುದಿಲ್ಲ, ಆರೋಗ್ಯ ಇನ್ನು ಕೂಡ ಸರಿ ಹೋಗಿಲ್ಲ ಎನ್ನುವ ಕಾರಣಕ್ಕೆ, ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳುವುದಕ್ಕೆ ಅವರಿಂದ ಸಾಧ್ಯ ಆಗಲೂ ಇಲ್ಲ. ಒಂದು ವಿಡಿಯೋ ಶೇರ್ ಮಾಡುವ ಮೂಲಕ, ಎಲ್ಲಾ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದರು. ಮೀಟ್ ಮಾಡಲು ಸಾಧ್ಯ ಆಗದೇ ಹೋದರು ಸಹ, ದರ್ಶನ್ ಅವರ ಫ್ಯಾನ್ಸ್ ಮಾತ್ರ ತಮ್ಮ ಡಿಬಾಸ್ ಬರ್ತ್ ಡೇ ಸೆಲೆಬ್ರೇಟ್ ಮಾಡದೇ ಹಾಗೆಯೇ ಬಿಡಲಿಲ್ಲ. ವಿಭಿನ್ನವಾಗಿ ಬಡವರಿಗೆ, ಹಿರಿಯರಿಗೆ, ಮಕ್ಕಳಿಗೆ ಸಹಾಯ ಮಾಡುವ ಮೂಲಕ ದರ್ಶನ್ ಅವರ ಬರ್ತ್ ಡೇ ಸೆಲೆಬ್ರೇಟ್ ಮಾಡಿದರು.

ಹಾಗೆಯೇ ದರ್ಶನ್ ಅವರಿಗೆ ಫ್ಯಾನ್ಸ್ ಅಂದ್ರೆ ಎಷ್ಟು ಪ್ರೀತಿ ಇದೆಯೋ, ಫ್ಯಾನ್ಸ್ ಗೆ ದರ್ಶನ್ ಅವರು ಅಂದ್ರೆ ಅದಕ್ಕಿಂತ ಡಬಲ್ ಪ್ರೀತಿ ಎಂದು ಹೇಳಿದರೆ ತಪ್ಪಲ್ಲ. ದರ್ಶನ್ ಅವರನ್ನು ಯಾವತ್ತಿಗೂ ಅವರ ಫ್ಯಾನ್ಸ್ ಬಿಟ್ಟುಕೊಟ್ಟಿಲ್ಲ. ಎಂಥಾ ಕಷ್ಟದ ಸಮಯದಲ್ಲೇ ಆದರೂ ದರ್ಶನ್ ಅವರ ಜೊತೆಗೆ ನಿಂತಿದ್ದು, ಅವರ ಪತ್ನಿ ಫ್ಯಾಮಿಲಿ ಹಾಗೂ ಅವರ ಫ್ಯಾನ್ಸ್. ಯಾರು ಏನೇ ಅಂದರು ಕೂಡ ದರ್ಶನ್ ಅವರ ಫ್ಯಾನ್ಸ್ ಮಾತ್ರ, ಡಿಬಾಸ್ ಅನ್ನು ಬಿಟ್ಟುಕೊಡುತ್ತಿರಲಿಲ್ಲ. ಯಾರಾದರೂ ದರ್ಶನ್ ಅವರ ಬಗ್ಗೆ ನೆಗಟಿವ್ ಆಗಿ ಮಾತನಾಡಿದರೆ, ಫ್ಯಾನ್ಸ್ ಅವರಿಗೆ ಉತ್ತರ ಕೊಡುತ್ತಿದ್ದರು. ಈ ಕಾರಣಕ್ಕೆ ದರ್ಶನ್ ಅವರಿಗೂ ಕೂಡ ಫ್ಯಾನ್ಸ್ ಅಂದ್ರೆ ಪ್ರಾಣ. ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫ್ಯಾನ್ಸ್ ಈ ರೀತಿ ಒಳ್ಳೆಯ ಕೆಲಸ ಮಾಡಿರುವ 100ಕ್ಕಿಂತ ಹೆಚ್ಚು ಪೋಸ್ಟ್ ಗಳನ್ನು ಶೇರ್ ಮಾಡಿದ್ದರು.
ದರ್ಶನ್ ಫ್ಯಾನ್ಸ್ ಸರಿ ಇಲ್ಲ ಎಂದು ಹೇಳುವ ಎಲ್ಲರಿಗೂ ಈ ಪೋಸ್ಟ್ ಗಳು ಸರಿಯಾದ ತಿರುಗೇಟು ನೀಡಿದ ಹಾಗಿತ್ತು ಎಂದರೂ ತಪ್ಪಲ್ಲ. ಅಭಿಮಾನಿಗಳನ್ನು ಅಷ್ಟು ಪ್ರೀತಿಸುವ ದರ್ಶನ್ ಅವರು ಈಗ ಅಭಿಮಾನಿಗಳಿಗಾಗಿ ಸಿನಿಮಾ ಮಾಡುತ್ತಿದ್ದಾರೆ. ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ದರ್ಶನ್ ಅವರು ಪಾಲ್ಗೊಂಡಿದ್ದಾರೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿದ್ದರು. ಈಗ ನಮ್ಮ ರಾಜ್ಯದಲ್ಲೇ ಶೂಟಿಂಗ್ ನಡೆಯುತ್ತಿದೆ. ಇದರ ಜೊತೆಗೆ ಡಿಬಾಸ್ ದರ್ಶನ್ ಅವರ ಬಗ್ಗೆ ಇದೀಗ ಮತ್ತೊಂದು ಹೊಸ ಸುದ್ದಿ ಸಿಕ್ಕಿದೆ. ಮುಂದೆ ದರ್ಶನ್ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಇದೀಗ ದರ್ಶನ್ ಅವರು ಕರ್ನಾಟಕ ಪ್ರಜಾ ಪಕ್ಷದಿಂದ, ಸಿಎಂ ಆಗಿದ್ದಾರೆ ಎನ್ನುವ ಫೋಟೋ ಒಂದು ವೈರಲ್ ಆಗಿದೆ.

ಆದರೆ ಇದು ಡೆವಿಲ್ ಸಿನಿಮಾ ಚಿತ್ರೀಕರಣ ಸಮಯದ ಫೋಟೋ ಆಗಿದೆ. ಇದರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ ಧನುಷ್ ರಾಜಶೇಖರ್ ಎಂದು ಬರೆಯಲಾಗಿದೆ. ದರ್ಶನ್ ಅವರ ಹೆಸರು ಧನುಷ್, ಸಿನಿಮಾದಲ್ಲಿ ಮುಖ್ಯಮಂತ್ರಿ ಎಂದು ತಿಳಿದುಬಂದಿದ್ದು, ಮೊದಲ ಬಾರಿಗೆ ದರ್ಶನ್ ಅವರು ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿರುವುದು ಬಹಳ ಸಂತೋಷದ ವಿಚಾರ ಆಗಿದೆ. ಇನ್ನು ವೈರಲ್ ಆಗಿರುವ ಫೋಟೋದಲ್ಲಿ ದರ್ಶನ್ ಅವರು ಕೈಮುಗಿದು ನಿಂತಿರುವುದನ್ನು ನೋಡಬಹುದು. ಡಿಬಾಸ್ ಅವರನ್ನು ಈ ರೀತಿ ಹೊಸ ಅವತಾರದಲ್ಲಿ ನೋಡಿ, ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಡೆವಿಲ್ ಸಿನಿಮಾದಲ್ಲಿ ದರ್ಶನ್ ಅವರು ಇನ್ನು ಯಾವ ರೀತಿಯ ವಿಶೇಷವಾದ ಶೇಡ್ ಗಳು ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ಇನ್ನು ದರ್ಶನ್ ಅವರು ಇತ್ತೀಚೆಗೆ ಧನವೀರ್ ಅವರ ವಾಮನ ಸಿನಿಮಾ ವೀಕ್ಷಣೆ ಮಾಡಿ, ಸಿನಿಮಾ ಬಗ್ಗೆ ಮಾಧ್ಯಮದ ಎದುರು ಮಾತನಾಡಿದರು. ತಮಗೂ ಲವ್ ಸೀನ್ ಗಳಲ್ಲಿ ನಟಿಸುವುದಕ್ಕೆ ಆಸೆ ಇದೆ, ಆದರೆ ಯಾರೂ ಬಿಡೋದಿಲ್ಲ ಎಂದಿದ್ದರು. ಡೆವಿಲ್ ಸಿನಿಮಾದಲ್ಲಿ ಆದರೂ ದರ್ಶನ್ ಅವರಿಗೆ ಲವ್ ಎಲಿಮೆಂಟ್ ಇದೆಯಾ ಎಂದು ಕಾದು ನೋಡಬೇಕಿದೆ. ಇನ್ನು ಇತ್ತೀಚೆಗೆ ದರ್ಶನ್ ಅವರು ಹೆಚ್ಚಾಗಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಪತ್ನಿ ಮತ್ತು ಮಗನ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಈ ಪರಿ ಶೂಟಿಂಗ್ ನಡೆಯುತ್ತಿರುವುದನ್ನು ನೋಡಿದರೆ, ಇದೇ ವರ್ಷ ಡೆವಿಲ್ ಸಿನಿಮಾ ತೆರೆಮೇಲೆ ಬರಬಹುದು ಎನ್ನಲಾಗಿದೆ. ಮಿಲನಾ ಪ್ರಕಾಶ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಬಗ್ಗೆ ಮುಂದಿನ ಅಪ್ಡೇಟ್ ಯಾವಾಗ ಸಿಗುತ್ತದೆ ಎಂದು ಡಿಬಾಸ್ ಫ್ಯಾನ್ಸ್ ಕಾಯುತ್ತಿದ್ದಾರೆ.