ರೆಬೆಲ್ ಸ್ಟಾರ್ ಅಂಬರೀಶ್ ಅವರ ಕುಟುಂಬದಲ್ಲಿ ಇಂದು ಸಡಗರವೋ ಸಡಗರ. ಅಂಬರೀಶ್ ಅವರ ಮೊಮ್ಮಗುವಿನ ನಾಮಕರಣ ಇಂದು ಅದ್ಧೂರಿಯಾಗಿ ನಡೆದಿದೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದಪ ದಂಪತಿಯ ಮುದ್ದಿನ ಗಂಡು ಮಗುವಿಗೆ ಇಂದು ಹೆಸರಿಟ್ಟಿದ್ದು, ಅಂಬರೀಶ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಅಭಿಷೇಕ್ ಅಂಬರೀಷ್ ಅವರಿಗೆ ತಂದೆ ಅಂದ್ರೆ ಎಷ್ಟು ಪ್ರೀತಿ ಎಂದು ನಮಗೆಲ್ಲಾ ಗೊತ್ತೇ ಇದೆ. ಇದೀಗ ತಮ್ಮ ಮಗುವಿಗೆ ತಂದೆಯ ಹೆಸರನ್ನೇ ಅಭಿಷೇಕ್ ಇಟ್ಟಿದ್ದಾರೆ. ಇದನ್ನ ಕೇಳೋಕೆ ಎಷ್ಟು ಖುಷಿ ಅನ್ಸತ್ತೆ ಅಲ್ವಾ. ಅಭಿಷೇಕ್ ಅವರು ತಂದೆಯ ಹೆಸರನ್ನು ಇಟ್ಟಿದ್ದಾರೆ, ಹಾಗಿದ್ರೆ ಆ ಹೆಸರು ಏನು? ಮಗುವಿಗೆ ಹೆಸರನ್ನ ಹೇಗೆ ಸೆಲೆಕ್ಟ್ ಮಾಡಿದ್ರು? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ.. ಬಹಳ ಸ್ಪೆಷಲ್ ಆಗಿದೆ ಮರಿ ರೆಬೆಲ್ ಸ್ಟಾರ್ ಹೆಸರು..

ರೆಬೆಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನ ಬಿಟ್ಟು ಹೋಗಿ ಒಂದಷ್ಟು ವರ್ಷಗಳು ಕಳೆದು ಹೋಗಿದ್ದರು ಸಹ, ಅವರು ನಮ್ಮ ಜೊತೆಗೆ ಇದ್ದಾರೆ ಎನ್ನುವುದು ಅಭಿಮಾನಿಗಳ ನಂಬಿಕೆ. ಫ್ಯಾನ್ಸ್ ಯಾವತ್ತಿಗೂ ಅಂಬರೀಷ್ ಅವರನ್ನು ಬಿಟ್ಟುಕೊಟ್ಟಿಲ್ಲ. ಅಂಬರೀಶ್ ಅವರನ್ನ ಮರೆತಿಲ್ಲ. ಇವತ್ತಿಗೂ ಅವರ ಹಾಡುಗಳು, ಸಿನಿಮಾಗಳನ್ನ ಜನರು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಅಭಿಮಾನಿಗಳಿಗೆ ಅಂತೂ ಇದು ಅಚ್ಚುಮೆಚ್ಚು. ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಾತಾಡೋ ಶೈಲಿ ಅಂತೂ ನಮಗೆಲ್ಲಾ ಗೊತ್ತೇ ಇದೆ. ಮಾತು ಒರಟು, ಆದರೆ ಮನಸ್ಸಲ್ಲಿರೋ ಪ್ರೀತಿ ಮಾತ್ರ ಎವರ್ ಗ್ರೀನ್. ರೆಬೆಲ್ ಸ್ಟಾರ್ ಅಂಬರೀಶ್ ಅವರು ಇಂದು ಭೌತಿಕವಾಗಿ ನಮ್ಮ ಜೊತೆ ಇಲ್ಲದೇ ಹೋದರು, ಅವರ ಮಗನಲ್ಲಿ ಅಂಬಿ ಅವರನ್ನು ಕಾಣುತ್ತಿದ್ದಾರೆ ಅಭಿಮಾನಿಗಳು. ಇತ್ತೀಚೆಗೆ ಮರಿ ರೆಬೆಲ್ ಸ್ಟಾರ್ ಆಗಮನ ಕೂಡ ಆಗಿದೆ.

2023ರಲ್ಲಿ ಅಭಿಷೇಕ್ ಅಂಬರೀಶ್ ಅವರು ಅವಿವಾ ಬಿದಪ ಅವರ ಜೊತೆಗೆ ಮದುವೆಯಾದರು. ಇವರಿಬ್ಬರದ್ದು ಲವ್ ಮ್ಯಾರೇಜ್. ಬಹಳಷ್ಟು ವರ್ಷಗಳ ಪ್ರೀತಿಸಿ ಮದುವೆಯಾದ ಜೋಡಿ. ಸುಮಲತಾ ಅಂಬರೀಶ್ ಅವರು ಹಾಗೂ ಅವಿವಾ ಅವರ ಕುಟುಂಬದವರು ಇವರಿಬ್ಬರ ಪ್ರೀತಿಯನ್ನು ಒಪ್ಪಿ ಜೋರಾಗಿಯೇ ಮದುವೆ ಮಾಡಿದರು. ಇಬ್ಬರ ಮದುವೆ ಎಷ್ಟು ಚೆನ್ನಾಗಿ ನಡೆಯಿತು ಎಂದು ನಾವೆಲ್ಲರೂ ನೋಡಿದ್ದೇವೆ. ದಕ್ಷಿಣ ಭಾರತ ಚಿತ್ರರಂಗದ ಗಣ್ಯಾತಿಗಣ್ಯರು ಅಭಿಷೇಕ್ ಅಂಬರೀಷ್ ಮದುವೆಗೆ ಬಂದು ಹೊಸ ದಂಪತಿಗೆ ಶುಭ ಕೋರಿದ್ದರು. ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳು ಸಹ ಬಂದಿದ್ದರು. ಆ ಮದುವೆ ನಿಜಕ್ಕೂ ಒಂದು ಕನಸಿನ ಮದುವೆಯ ಹಾಗೆಯೇ ಇತ್ತು. ಇದೆಲ್ಲವೂ ಒಂದು ಕನಸು ಎನ್ನುವಂತೆಯೇ ಇತ್ತು.

ಮದುವೆಯ ನಂತರ ಮಂಡ್ಯದಲ್ಲಿ ನಡೆದ ಬೀಗರೂಟವನ್ನು ಮರೆಯುವ ಹಾಗಿಲ್ಲ. ಮಂಡ್ಯದ ಜನತೆಗೆ ಅಂಬಿ ಅಣ್ಣನ ಫ್ಯಾನ್ಸ್ ಗಾಗಿ ಭರ್ಜರಿ ಬಾಡೂಟವನ್ನು ಹಾಕಿಸಿದ್ದರು. ಅಂಬರೀಶ್ ಅವರು ಇದ್ದಾಗ ಜನರಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರು ಎನ್ನುವುದು ಗೊತ್ತೇ ಇದೆ. ಅವರ ಮಗ ಕೂಡ ಅದೇ ರೀತಿ ತಂದೆಯ ಫ್ಯಾನ್ಸ್ ಅನ್ನು ನೋಡಿಕೊಂಡರು. ಇದರಿಂದ ಎಲ್ಲರಿಗೂ ಬಹಳ ಸಂತೋಷ ಆಗಿತ್ತು. ಮದುವೆಯಾಗಿ ಒಂದು ವರ್ಷದ ನಂತರ ತಾವಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಅಭಿಷೇಕ್ ಅವಿವಾ ದಂಪತಿ ಗುಡ್ ನ್ಯೂಸ್ ನೀಡಿದ್ದರು. ಮರಿ ರೆಬೆಲ್ ಸ್ಟಾರ್ ಆಗಮನ ಆಗುತ್ತದೆ ಎಂದು ಅಭಿಮಾನಿಗಳು ಸಹ ಬಹಳ ಸಂತೋಷ ಪಟ್ಟಿದ್ದರು. ಜ್ಯೂನಿಯರ್ ರೆಬೆಲ್ ಸ್ಟಾರ್ ಆಗಮನ ಕಳೆದ ವರ್ಷ ಆಗಿದೆ.

2024ರ ನವೆಂಬರ್ 12 ರಂದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದಪ ದಂಪತಿಗೆ ಗಂಡು ಮಗು ಜನಿಸಿತು. ಅಂಬರೀಶ್ ಅವರ ಕುಟುಂಬಕ್ಕೆ ಹಾಗೂ ಅಂಬರೀಶ್ ಅವರ ಫ್ಯಾನ್ಸ್ ಗೆ ಇದಕ್ಕಿಂತ ಸಂತೋಷ ಇನ್ನೇನಿದೆ ಹೇಳಿ. ಮರಿ ರೆಬೆಲ್ ಸ್ಟಾರ್ ಆಗಮನ ಆಗಿದೆ ಎಂದು ಫ್ಯಾನ್ಸ್ ಜೋರಾಗಿ ಸೆಲೆಬ್ರೇಟ್ ಮಾಡಿದ್ದರು. ಈಗ ಆ ಮುದ್ದಾದ ಮಗುವಿಗೆ ನಾಮಕರಣ ಶಾಸ್ತ್ರ ಮಾಡಲಾಗಿದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೊಮ್ಮಗನಿಗೆ ಬಹಳ ವಿಶೇಷವಾದ ಹೆಸರನ್ನೇ ಇಡಲಾಗಿದೆ. ಅಂಬರೀಷ್ ಅವರ ಹೆಸರನ್ನೇ ವಿಶೇಷವಾಗಿ ಮಗುವಿಗೂ ಕೂಡ ಇಡಲಾಗಿದೆ. ತಾತನ ಹೆಸರನ್ನೇ ಮೊಮ್ಮಗನಿಗೆ ಇಟ್ಟಿರುವುದು ಅಭಿಮಾನಿಗಳಿಗೆ ಸಹ ಬಹಳ ಸಂತೋಷವಾಗಿದೆ. ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ಅಂಬರೀಶ್ ಅವರ ಮೊಮ್ಮಗುವಿಗೆ ಹೆಸರನ್ನು ಇಡಲಾಗಿದೆ.

ಇಂದು ಬೆಂಗಳೂರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಅಭಿಷೇಕ್ ಅವಿವಾ ದಂಪತಿಯ ಮಗುವಿಗೆ ನಾಮಕರಣ ಶಾಸ್ತ್ರ ಮಾಡಲಾಗಿದೆ. ಸುಮಲತಾ ಅಂಬರೀಶ್ ಅವರು, ಅಭಿಷೇಕ್ ಅವಿವಾ ದಂಪತಿ ಹಾಗೂ ಅವರ ಮಗು, ಜೊತೆಗೆ ಕುಟುಂಬದ ಕೆಲವೇ ಕೆಲವರು, ಹಾಗೂ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಕಿಚ್ಚ ಸುದೀಪ್ ಅವರು ಹಾಗೂ ಚಿತ್ರರಂಗದ ಕೆಲವು ಗಣ್ಯರು ಮಾತ್ರ ನಾಮಕರಣ ಶಾಸ್ತ್ರದಲ್ಲಿ ಭಾಗವಹಿಸಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಅಭಿಷೇಕ್ ಅವಿವಾ ದಂಪತಿಯ ಮಗುವಿಗೆ ಅಂಬರೀಶ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಮಗುವಿಗೆ ಇಟ್ಟಿರುವ ಹೆಸರು ಏನು ಎಂದರೆ, “ರಾಣಾ ಅಮರ್ ಅಂಬರೀಶ್”ಎಂದು ಹೆಸರನ್ನು ಇಡಲಾಗಿದೆ. ಇದು ಅಂಬರೀಶ್ ಅವರ ಹೆಸರು ಕೂಡ ಎನ್ನುವುದು ಸಂತೋಷದ ವಿಷಯ.
ಅಂಬರೀಶ್ ಅವರ ನಿಜವಾದ ಹೆಸರು ಅಮರನಾಥ್, ಅ ಅಕ್ಷರದಿಂದ ತಮ್ಮ ಮಗುವಿಗೆ ಕೂಡ ಹೆಸರು ಇಡಬೇಕು ಎಂದು ಅಭಿಷೇಕ್ ಹಾಗೂ ಅವಿವಾ ಡಿಸೈಡ್ ಮಾಡಿದ್ದರಂತೆ. ಅದೇ ರೀತಿ ರಾಣಾ ಎನ್ನುವ ಹೆಸರಿನ ಜೊತೆಗೆ ತಂದೆಯ ಹೆಸರನ್ನು ಸಹ ಸೇರಿಸಿ, ನಾಮಕರಣ ಮಾಡಿದ್ದಾರೆ. ಅಂಬರೀಶ್ ಅವರ ಹೆಸರನ್ನೇ ಮಗುವಿಗೆ ಇಟ್ಟಿರುವುದು ಅಂಬಿ ಅಣ್ಣನ ಫ್ಯಾನ್ಸ್ ಗೆ ಇನ್ನು ಹೆಚ್ಚು ಸಂತೋಷ ಆಗಿದೆ. ಒಟ್ಟಿನಲ್ಲಿ ಅಪ್ಪನ ಹೆಸರನ್ನು ಮಗನಿಗೆ ಇಟ್ಟು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ ಅಭಿಷೇಕ್ ಅಂಬರೀಶ್. ಈ ಮಗು ತನ್ನ ತಂದೆಯ ಹಾಗೆ, ತಾತನ ಹಾಗೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ, ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲಿ ಎಂದು ನಾವು ಕೂಡ ಹಾರೈಸೋಣ. ಅಂಬರೀಶ್ ಅಣ್ಣನ ನೆನಪು ಸದಾ ಹೀಗೆ ಇರಲಿ.