ನಟ ದರ್ಶನ್ ಅವರು ರೇಣುಕಾಸ್ವಾಮಿ ಸ್ವಾಮಿ ಕೇಸ್ ನಲ್ಲಿ ಜೈಲು ವಾಸ ಮಾಡಿ, ಈಗಷ್ಟೇ ಜಾಮೀನು ಪಡೆದು ಹೊರಬಂದಿದ್ದಾರೆ ಎಂದು ನಮಗೆಲ್ಲ ಗೊತ್ತೇ ಇದೆ. ದರ್ಶನ್ ಅವರು 6 ತಿಂಗಳ ನಂತರ ಹೊರಗಡೆ ಬಂದರೆ, ಪೂರ್ತಿ ಜಾಮೀನು ಸಿಗುವುದಕ್ಕಿಂತ ಮೊದಲೇ ದರ್ಶನ್ ಅವರಿಗೆ ಕೋರ್ಟ್ ಇಂದ ಮಧ್ಯಂತರ ಜಾಮೀನು ಸಿಕ್ಕಿತ್ತು. ಅವರಿಗೆ ಅನಾರೋಗ್ಯ ಉಂಟಾಗಿದೆ, ಸರ್ಜರಿ ಆಗಬೇಕು ಎನ್ನುವ ಕಾರಣಕ್ಕೆ ದರ್ಶನ್ ಅವರಿಗೆ ಜಾಮೀನು ನೀಡಲಾಗಿತ್ತು. ಆ ಅವಧಿ ಮುಗಿಯುವ ವೇಳೆಗೆ ಇದೀಗ ಜಾಮೀನು ಸಿಕ್ಕಿದೆ. ದರ್ಶನ್ ಅವರಿಗೆ ಮಾತ್ರವಲ್ಲ, ಆರೋ*ಪಿಗಳಾಗಿ ಬಂಧಿತರಾಗಿದ್ದ ಎಲ್ಲರಿಗೂ ಈಗ ಜಾಮೀನು.
ದರ್ಶನ್ ಅವರಿಗೆ ಅವರ ತಮ್ಮ ದಿನಕರ್ ತೂಗುದೀಪ್ ಹಾಗು ನಟ ಧನವೀರ್ ಇಬ್ಬರು ಶ್ಯೂರಿಟಿ ನೀಡಿ ಬಿಡಿಸಿಕೊಂಡು ಹೋಗುತ್ತಾರೆ. ಪವಿತ್ರಾ ಗೌಡ ಅವರಿಗೂ ಇಬ್ಬರು ಜಾಮೀನು ಕೊಟ್ಟಿದ್ದು ಅವರು ಕೂಡ ಹೊರಬಂದಿದ್ದಾರೆ. ಆದರೆ ಎ6 ಆರೋಪಿ ಜಗದೀಶ್ ಅವರಿಗೆ ಯಾರು ಕೂಡ ಶ್ಯೂರಿಟಿ ಕೊಡದ ಕಾರಣ, ಜಾ*ಮೀನು ಸಿಕ್ಕಿದ್ದರು ಸಹ ಅವರು ಇನ್ನು ಜೈ *ಲಿನಲ್ಲೇ ಇದ್ದಾರೆ. ಜಗದೀಶ್ ಅವರ ತಾಯಿ ಕಷ್ಟದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಹೌದು, ಜಗದೀಶ್ ಅವರ ತಾಯಿ ಮಾಧ್ಯಮಗಳ ಜೊತೆಗೆ ಮಾತನಾಡಿ, ತಮಗೆ ಆಗುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡು ಹಾಕಿದ್ದು, ದರ್ಶನ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಜಗದೀಶ್ ದರ್ಶನ್ ಅವರ ದೊಡ್ಡ ಅಭಿಮಾನಿ ಆಗಿದ್ದು, ದರ್ಶನ್ ಅವರ ಮಾತು ಕೇಳಿ, ಅವರ ಮಾತನ್ನು ನಂಬಿ, ಜೀವನವನ್ನು ಈ ರೀತಿ ಮಾಡಿಕೊಂಡಿದ್ದಾರೆ ಎಂದು ಅವರ ತಾಯಿ ಕಣ್ಣೀರು ಹಾಕಿದ್ದಾರೆ. ಯಾರು ಕೂಡ ತಮಗೆ ಇಷ್ಟ, ಅಭಿಮಾನಿ ಎಂದು ನಿಮ್ಮ ಹೀರೋಗಳನ್ನ ನಂಬಿ, ಅವರು ಹೇಳಿದ್ದನ್ನೆಲ್ಲಾ ಕೇಳಬೇಡಿ, ಜೀವನವನ್ನೇ ಹಾಳು ಮಾಡಿಕೊಳ್ತೀರಾ ಎಂದು ಜಗದೀಶ್ ಅವರ ತಾಯಿ ಕಣ್ಣೀರು ಹಾಕಿದ್ದಾರೆ. ತಮ್ಮ ಮಗ ದರ್ಶನ್ ಅವರನ್ನು ನಂಬಿ ಇಡೀ ಜೀವನವನ್ನೇ ಹಾಳು ಮಾಡಿಕೊಂಡ ಎಂದಿದ್ದಾರೆ. ಫ್ರೆಂಡ್ಸ್ ಹಾಗೂ ಸಂಬಂಧಿಕರ ಪೈಕಿ ಯಾರು ಕೂಡ ಶ್ಯೂರಿಟಿ ಕೊಡೋದಕ್ಕೆ ರೆಡಿ ಇಲ್ಲವಂತೆ.

ಶ್ಯೂರಿಟಿ ಕೊಡಿ ಅಂತ ಯಾರನ್ನೇ ಕೇಳಿದರು ಅವರು ಹಿಂದೇಟು ಹಾಕುತ್ತಿದ್ದಾರಂತೆ. ಹಾಗಾಗಿ ಜಗದೀಶ್ ಅವರಿಗೆ ಶ್ಯೂರಿಟಿ ಇಲ್ಲದೇ, ಹೊರಗಡೆ ಬರಲು ಸಾಧ್ಯ ಆಗುತ್ತಿಲ್ಲ ಎಂದಿದ್ದಾರೆ. ಈಗ ಕೋರ್ಟ್ ಇಂದ ಜಾ*ಮೀನು ಸಿಕ್ಕಿದ್ದರು ಸಹ ಪಾಪ ಅವರಿಗೆ ಹೊರಗಡೆ ಬರಲು ಆಗುತ್ತಿಲ್ಲ. ಹಾಗೆಯೇ ಇದುವರೆಗೂ ನಟ ದರ್ಶನ್ ಅವರ ಕಡೆಯಿಂದ ಒಂದೇ ಒಂದು ಸಣ್ಣ ಸಹಾಯ ಕೂಡ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ದರ್ಶನ್ ಅವರೇ ಈಗ ಶ್ಯೂರಿಟಿ ಕೊಟ್ಟು ನನ್ನ ಮಗನನ್ನ ಹೊರಗೆ ಕರೆದುಕೊಂಡು ಬರಬೇಕು, ನನ್ನ ಮಗ ಈ ಸ್ಥಿತಿಗೆ ಬಂದಿರೋದಕ್ಕೆ ಅವರೇ ಕಾರಣ ಎಂದು ಜಗದೀಶ್ ಅವರ ತಾಯಿ ಕಣ್ಣೀರು ಹಾಕಿದ್ದಾರೆ.
ಈ ಕೇಸ್ ನಲ್ಲಿ ದರ್ಶನ್ ಹಾಗೂ ಪವಿತ್ರಾ ಅವರನ್ನು ಹೊರತುಪಡಿಸಿ ಪೊಲೀಸರ ವಶಕ್ಕೆ ಹೋದ ಬೇರೆ ಎಲ್ಲರೂ ಮಧ್ಯಮ ವರ್ಗದ ಅಥವಾ ಕಷ್ಟದ ಕುಟುಂಬದವರಾಗಿದ್ದು, ಅವರ ಬಳಿ ಬೇಕಾದ್ದು ಮಾಡೋಕೆ ದುಡ್ಡು ಇರುವುದಿಲ್ಲ. ಇಂಥ ಜನರು ಕೂಡ ಇಲ್ಲಿ ಸಿಕ್ಕಿಹಾಕಿ ಕೊಂಡಿರುವುದು ಬೇಸರದ ವಿಷಯ. ಬಹಳಷ್ಟು ಜನರು ಬದುಕನ್ನೇ ಬೀದಿ ಪಾಲು ಮಾಡಿಕೊಂಡಿದ್ದಾರೆ. ಇನ್ಮುಂದೆ ಇಂಥ ಘಟನೆಗಳು ನಡೆಯದೇ ಇರುವುದು ಒಳ್ಳೆಯದು. ಇನ್ನು ಜಗದೀಶ್ ಅವರಿಗೆ ಶ್ಯೂರಿಟಿ ಕೊಟ್ಟು ಯಾರು ಅವರನ್ನು ಹೊರಗೆ ಕರೆದುಕೊಂಡು ಬರುತ್ತಾರೆ ಎಂದು ಕಾಡುನೋಡಬೇಕಿದೆ.