ಇದು ಡಿಜಿಟಲ್ ಯುಗ, ಇಲ್ಲಿ ನಾವು ಹಣ ಸಂಪಾದನೆ ಮಾಡುವುದಕ್ಕೆ ಹಲವಾರು ದಾರಿಗಳಿದೆ. ಸುಲಭವಾಗಿ ಹಣ ಸಂಪಾದನೆ ಮಾಡಬಹುದು. ಇಡೀ ದಿನ, ಇಡೀ ತಿಂಗಳು ಕಷ್ಟಪಟ್ಟರು ಸಿಗದಷ್ಟು ಹಣ ಹಲವರಿಗೆ ಒಂದು ಯೂಟ್ಯೂಬ್ ಚಾನೆಲ್ ಮೂಲಕ ಸಿಗುತ್ತದೆ. ಇದನ್ನು ನಾವು ಮರೆಯುವ ಹಾಗಿಲ್ಲ. ಹಲವಾರು ಜನ ಯೂಟ್ಯೂಬರ್ ಗಳು, ಇದನ್ನೇ ನಂಬಿದ್ದಾರೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ನಾವು ಹೀಗೆ ಸಂಪಾದನೆ ಮಾಡಬಹುದು ಎನ್ನುವ ಜೋಶ್ ಹಲವರಲ್ಲಿ ಇರುತ್ತದೆ. ಅದೇ ನಿಟ್ಟಿನಲ್ಲಿ ಸ್ವಂತ ಯೂಟ್ಯೂಬ್ ಚಾನಲ್ ಅನ್ನು ಶುರು ಮಾಡುತ್ತಾರೆ, ಆದರೆ ಎಲ್ಲರಿಗೂ ಆ ಯಶಸ್ಸು ಸಿಗುವುದಿಲ್ಲ.

ಹೌದು, ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಪಟ್ಟರೂ ಸಹ, ನಾವು ಅಂದುಕೊಂಡ ಹಾಗೆ ಯಾವುದು ನಡೆಯುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡುವುದರ ಜೊತೆಗೆ ಅದೃಷ್ಟವೂ ಇರಬೇಕು. ಹಾಗೆಯೇ ಸೋಶಿಯಲ್ ಮೀಡಿಯಾವನ್ನು ಬಳಸಿಕೊಳ್ಳುವುದು ಹೇಗೆ ಎನ್ನುವುದು ಸಹ ಗೊತ್ತಿರಬೇಕು. ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿರುವ ಹಲವು ಯೂಟ್ಯೂಬರ್ ಗಳ ನಡುವೆ ಎಷ್ಟೇ ಪ್ರಯತ್ನಪಟ್ಟರು ವಿಫಲರಾಗುವ ಕೆಲವು ಯೂಟ್ಯೂಬರ್ ಗಳು ಇದ್ದಾರೆ. ಇಂದು ಅಂಥ ಒಬ್ಬ ಮಹಿಳೆ ಇದ್ದಾರೆ, 3 ವರ್ಷದಿಂದ ಪ್ರಯತ್ನಪಟ್ಟು ವಿಫಲವಾಗಿ, ಕೊನೆಗೆ ತಮ್ಮ ಯೂಟ್ಯೂಬ್ ಚಾನೆಲ್ ಅನ್ನೇ ಡಿಲೀಟ್ ಮಾಡಿದ್ದಾರೆ.
ಹೌದು, ಈ ಮಹಿಳೆಯ ಹೆಸರು ನಳಿನಿ ಉನಗರ್. ಇವರು 3 ವರ್ಷಗಳ ಹಿಂದೆ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ, ಇವರ ಯೂಟ್ಯೂಬ್ ಚಾನೆಲ್ ಹೆಸರು ನಳಿನಿ ಉನಗರ್. ತಮ್ಮ ಯೂಟ್ಯೂಬ್ ಚಾನೆಲ್ ಶುರು ಮಾಡೋದಕ್ಕೆ ಬೇಕಾದ ಕಿಚನ್ ಸೆಟಪ್, ಕ್ಯಾಮೆರಾಗಳು ಹಾಗೂ ಇನ್ನಿತರ ಉಪಕರಣಗಳನ್ನು ಖರೀದಿ ಮಾಡಿ, ಯೂಟ್ಯೂಬ್ ಗಾಗಿ ಕಿಚನ್ ಸೆಟಪ್ ಮಾಡುವುದಕ್ಕೆ ಇವರು ಸುಮಾರು 8 ಲಕ್ಷ ಖರ್ಚು ಮಾಡಿದ್ದಾರಂತೆ. ಆದರೆ ಯೂಟ್ಯೂಬ್ ಇಂದ ಒಂದೇ ಒಂದು ರೂಪಾಯಿ ಸರಿಯಾದ ಆದಾಯ ಕೂಡ ಬಂದಿಲ್ಲ. ಇವರಿಗೆ 11 ಸಾವಿರ ಅಷ್ಟೇ ಯೂಟ್ಯೂಬ್ ಚಂದಾದಾರರು ಸಿಕ್ಕಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಅದರ ಸಂಖ್ಯೆ ಹೆಚ್ಚಾಗಿಲ್ಲ, ಜೊತೆಗೆ ಇವರು ಅಪ್ಲೋಡ್ ಮಾಡುವ ವಿಡಿಯೋಗಳಿಗೆ ಹೆಚ್ಚು ವೀಕ್ಷಣೆ ಕೂಡ ಬಂದಿಲ್ಲ. ಇದುವರೆಗೂ ಸುಮಾರು 250 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನ ಕೂಡ ಆಗಿಲ್ಲ, ಒಂದು ರೂಪಾಯಿ ಆದಾಯ ಕೂಡ ಸಿಕ್ಕಿಲ್ಲ. ಹಾಗಾಗಿ ನಳಿನಿ ಅವರು ಬೇಸರದಿಂದ ತಾವು ಅಪ್ಲೋಡ್ ಮಾಡಿರುವ 250 ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ, ಜೊತೆಗೆ ತಮ್ಮ ಯೂಟ್ಯೂಬ್ ಚಾನೆಲ್ ಅನ್ನೇ ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಅಕೌಂಟ್ ನಲ್ಲಿ ಒಂದು ಪೋಸ್ಟ್ ಸಹ ಮಾಡಿದ್ದಾರೆ. ನಳಿನಿ ಅವರು ತಾವು ತಮ್ಮ ಯೂಟ್ಯೂಬ್ ಚಾನೆಲ್ ಗಾಗಿ ಬಳಸಿದ ಕಿಚನ್ ಸೆಟಪ್ ಉಪಕರಣಗಳು ಮತ್ತು ಕ್ಯಾಮೆರಾ ಉಪಕರಣಗಳು ಇದೆಲ್ಲದರ ಫೋಟೋ ಶೇರ್ ಮಾಡಿದ್ದಾರೆ.
I failed in my YouTube career, so I’m selling all my kitchen accessories and studio equipment. If anyone is interested in buying, please let me know. pic.twitter.com/3ew6opJjpL
— Nalini Unagar (@NalinisKitchen) December 18, 2024
“ಈ ಯೂಟ್ಯೂಬ್ ಕೆಲಸದಲ್ಲಿ ನಾನು ಸೋತು ಹೋಗಿದ್ದೇನೆ. ಹಾಗಾಗಿ ಸ್ಟುಡಿಯೋ ಉಪಕರಣಗಳು ಮತ್ತು ಕಿಚನ್ ಉಪಕರಣಗಳು ಇದೆಲ್ಲವನ್ನು ಸಹ ನಾನು ಮಾರುತ್ತಿದ್ದೇನೆ. ಖರೀದಿ ಮಾಡುವುದಕ್ಕೆ ಯಾರಿಗಾದರೂ ಆಸಕ್ತಿ ಇದ್ದರೆ, ದಯವಿಟ್ಟು ತಿಳಿಸಿ..” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ 2 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಬಂದಿದ್ದು, ಜನರಿಗೆ ಇವರಿಗೆ ಧೈರ್ಯ ತುಂಬಿದ್ದಾರೆ. ಕೆಲವರು ನೀವು ಯೂಟ್ಯೂಬ್ ಚಾನೆಲ್ ಗಿಂತ ಒಂದು ರೆಸ್ಟೋರೆಂಟ್ ಶುರು ಮಾಡಿ ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಕೆಲಸದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ, ಅದನ್ನೆಲ್ಲಾ ಮರೆತು ಮುಂದಕ್ಕೆ ಸಾಗಿ ಎಂದು ಕೂಡ ಸಲಹೆ ನೀಡಿದ್ದಾರೆ.