ಹಿಂದಿಯ ‘ಮಾಶಾಅಲ್ಲಾಹ್’ ಹಿಟ್ ಟ್ರ್ಯಾಕ್ಗೆ ಯುವತಿಯೊಬ್ಬಳು ಬೆಲ್ಲೀ ಡ್ಯಾನ್ಸ್ ಮಾಡಿದ್ದು ಭಾರೀ ವೈರಲ್ ಆಗುತ್ತಿದೆ. ನೆಟ್ಟಿಗರು ಈಕೆಯ ನೃತ್ಯದ ಬೆರಗನ್ನು ಕಂಡು ಶ್ಲಾಘಿಸುತ್ತಿದ್ದಾರೆ. ನೃತ್ಯಗಾತಿ ಜೂಹಿ ಶೇಖ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದು, ತಿಳಿಹಸಿರು ಬಣ್ಣದ ಹಸಿಬಿಸಿ ಉಡುಪಿನಲ್ಲಿ ಇವರು ಆಕರ್ಷಕವಾಗಿ ಕಾಣುತ್ತಿದ್ದಾರೆ. ಸದ್ಯ, ಈ ವಿಡಿಯೋ ಸಕ್ಕತ್ ಟ್ರೆಂಡಿಂಗ್ ನಲ್ಲಿದೆ.

‘ಮಾಶಾಅಲ್ಲಾಹ್’ ಹಾಡಿಗೆ ಡ್ಯಾನ್ಸರ್ ಜೂಹಿ ಶೇಕ್ ಸಕ್ಕತ್ ಬೆಲ್ಲೀ ಡ್ಯಾನ್ಸ್ ಮಾಡಿದ್ದು, ಈಕೆಯ ಸೊಂಟ ಬಳುಕುವಿಕೆ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಕಂಡಿರುವ ಈ ವಿಡಿಯೋ ಸದ್ಯ, ಟ್ರೆಂಡಿಂಗ್ ನಲ್ಲಿದೆ. ವಿಡಿಯೋ ನೋಡಿದವರೆಲ್ಲ ಜೂಹಿ ಶೇಕ್ ಅವರನ್ನು, ಅವರ ನೃತ್ಯ ಪಾಂಡಿತ್ಯವನ್ನು ಹಾಡಿ ಹೊಗಳುತ್ತಿದ್ದಾರೆ.
ವಿಡಿಯೋ ಕಂಡಿರುವ ಕೆಲವರು, ‘ಬೆಲ್ಲೀ ಡ್ಯಾನ್ಸ್ ನೋಡುವುದರಿಂದ ಇಷ್ಟು ವರ್ಷವೂ ಅದ್ಯಾಕೋ ದೂರ ಇದ್ದೆ. ಅರೆಬರೆ ಬಟ್ಟೆಯಲ್ಲಿ ಅದೇನಂಥ ನರ್ತಿಸುತ್ತಾರೋ ಎಂದು ಬೇಸರಿಸಿಕೊಳ್ಳುತ್ತಿದ್ದೆ. ಆದರೆ ಈ ವಿಡಿಯೋ ನೋಡಿದ ಮೇಲೆ ಈಕೆಯ ಕೌಶಲ ನೋಡಿ ಬೆಲ್ಲಿ ಡ್ಯಾನ್ಸ್ ಬಗ್ಗೆ ಇದ್ದ ಇರಿಸುಮುರುಸು ಕಡಿಮೆಯಾಯಿತು’ ಎಂದಿದ್ದಾರೆ. ಏಕ್ ಥಾ ಟೈಗರ್ ಸಿನಿಮಾದ ಮಾಶಾಅಲ್ಲಹ್ ಹಾಡು ಇದೀಗ ಮತ್ತೆ ಈ ಬೆಲ್ಲೀ ಡ್ಯಾನ್ಸ್ ಮೂಲಕ ಟ್ರೆಂಡಿಂಗ್ ನಲ್ಲಿದೆ.