‘ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ದೇವರಿಲ್ಲ, ಆಕೆಯ ಎದೆ ಹಾಲಿಗಿಂತ ಮಿಗಿಲು ಅಮೃತವಿಲ್ಲ’ ಎನ್ನುವ ಮಾತಿದೆ. ಆದರೆ ಕೆಲವೊಮ್ಮೆ ತಾಯಂದಿರಾದ ಮಹಿಳೆಯರಿಗೆ ಎದೆ ಹಾಲು ಬಾರದೆ ಸಮಸ್ಯೆಯಾಗುತ್ತದೆ ಅಥವಾ ಮಗು ಹುಟ್ಟಿದಾಗ ತಾಯಿ ಸಾವಿಗೀಡಾಗಿ ಮಗುವಿಗೆ ಹಾಲು ಇಲ್ಲದಂತಾಗುತ್ತದೆ. ಇಂತಹ ಸಮಯದಲ್ಲಿ ಕೆಲ ತಾಯಂದಿರು ಎದೆ ಹಾಲು ದಾನ ಮಾಡುತ್ತಾರೆ. ಇದೀಗ ದಾಖಲೆ ಮಟ್ಟದಲ್ಲಿ ಎದೆ ಹಾಲು ದಾನ ಮಾಡಿರುವ ಮಹಿಳೆಯೊಬ್ಬಳು, ಅದೇ ವಿಚಾರಕ್ಕೆ ಗಿನ್ನೆಸ್ ದಾಖಲೆ ಬರೆದಿದ್ದಾಳೆ.

ಎರಡು ಮಕ್ಕಳ ತಾಯಿಯಾಗಿರುವ ಅಮೆರಿಕಾ ಮೂಲದ ಎಲಿಜಬೆತ್ ಆ್ಯಂಡ್ರರ್ಸನ್ ಎಂಬ ಮಹಿಳೆಯೇ ಈ ಮಹಾತಾಯಿ. ಈಕೆ ತನ್ನ ಎದೆ ಹಾಲಿನ ಮೂಲಕ ಸಾವಿರಾರು ಮಕ್ಕಳನ್ನು ಬೆಳೆಸಿದ್ದಾಳೆ. ಜೊತೆಗೆ ಅಕಾಲಿಕಾ ಶಿಶುಗಳಿಗೆ ಮರು ಜೀವ ನೀಡಿದ್ದಾಳೆ. 2015 ರಿಂದ 2018ರ ವರಗೂ ಒಟ್ಟಾರೆಯಾಗಿ 1,600 ಲೀಟರ್ ಎದೆ ಹಾಲನ್ನು ಈಕೆ ದಾನ ಮಾಡಿದ್ದಾಳೆ. ಜಗತ್ತಿನಲ್ಲಿ ಯಾವ ತಾಯಿಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಎದೆ ಹಾಲನ್ನು ಮಾರಿದ ಉದಾಹರಣೆ ಇಲ್ಲ.
ಎಲಿಜಬೆತ್ ಅವರೇ ಹೇಳುವ ಪ್ರಕಾರ, ‘ನಾನು ಸರಿಸುಮಾರು 9 ವರ್ಷಗಳಲ್ಲಿ ಬರೋಬ್ಬರಿ 10,300 ಲೀಟರ್ ಎದೆ ಹಾಲನ್ನು ದಾನ ಮಾಡಿದ್ದೇನೆ. ಮೊದ ಮೊದಲು ಹೆಚ್ಚಿದ್ದ ಹಾಲನ್ನು ಎಸೆಯುತ್ತಿದ್ದೆ. ಆದರೆ ಅದನ್ನು ಸರಿಯಾಗಿ ಬಳಸಿದ್ದರೆ ಜಗತ್ತಿನ ಇನ್ನಷ್ಟು ಮಕ್ಕಳು ಬದುಕುತ್ತಿದ್ದರು ಎಂದೆನಿಸಿ ಎದೆ ಹಾಲು ದಾನ ಮಾಡಲು ಆರಂಭಿಸಿದೆ. ದಿನವೊಂದಕ್ಕೆ 6 ಲೀಟರ್ ಎದೆ ಹಾಲು ತೆಗೆದು ಪ್ಯಾಕ್ ಮಾಡಿ ಹಾಲಿನ ಬ್ಯಾಂಕ್ ಗೆ ಹಾಕುತ್ತೇನೆ’ ಎಂದಿದ್ದಾರೆ. ಸದ್ಯ, ಈಕೆಯ ಸಾಧನೆ ಗಿನ್ನೆಸ್ ದಾಖಲೆಯ ಪುಟ ಸೇರಿದೆ.