ರಕ್ಷಾ ಬಂಧನ ಅನ್ನುವುದು ಅಣ್ಣ ತಂಗಿಯ ಬಾಂಧವ್ಯವನ್ನು ಬೆಸೆಯುವ ಹಬ್ಬ. ದೇಶದೆಲ್ಲೆಡೆ ತಂಗಿಯರು ತಮ್ಮ ಪ್ರೀತಿಯ ಅಣ್ಣನಿಗೆ ರಕ್ಷೆ ಕಟ್ಟಿ ಸಂಭ್ರಮಿಸುತ್ತಾರೆ. ಆದರೆ ಇಲ್ಲೊಂದು ಕಡೆ ಒಬ್ಬ ಶಿಕ್ಷಕನಿಗೆ ಬರೋಬ್ಬರಿ 7 ಸಾವಿರ ಜನ ಯುವತಿಯರು ರಾಖಿ ಕಟ್ಟಿದ್ದಾರೆ. ಅಷ್ಟಕ್ಕೂ ಇಷ್ಟೊಂದು ಜನ ಒಬ್ಬ ವ್ಯಕ್ತಿಗೆ ರಾಖಿ ಕಟ್ಟಿದ್ದು ಯಾಕೆ?, ಯಾರು ಈ ಶಿಕ್ಷಕ? ನೋಡೋಣ ಬನ್ನಿ.

ಪಾಟ್ನಾದ ಟ್ಯೂಷನ್ ಸೆಂಟರ್ನ ಶಿಕ್ಷಕ ಖಾನ್ ಎಂಬಾತನಿಗೆ ರಕ್ಷಾ ಬಂಧನ ಸಮಾರಂಭದಲ್ಲಿ 7 ಸಾವಿರ ತಂಗಿಯರು ರಾಖಿ ಕಟ್ಟಿದ್ದಾರೆ. ಜನರಿಂದ ಕಿಕ್ಕಿರಿದಿದ್ದ ಹಾಲ್ ನಲ್ಲಿ ನೂಕುನುಗ್ಗಲು ಉಂಟಾಗದಿರಲಿ ಎಂದು ಖಾನ್ ಯುವತಿಯರಿದ್ದಲ್ಲಿಗೆ ಹೋಗಿ ರಾಖಿ ಕಟ್ಟಿಸಿಕೊಂಡಿದ್ದಾರೆ. 10 ಸಾವಿರ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ 7 ಸಾವಿರ ವತಿಯರು ರಾಖಿ ಕಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿಕ್ಷಕ ಖಾನ್, ‘ನನಗೆ ಸ್ವಂತ ಸಹೋದರಿಯರಿಲ್ಲ. ಈ ವಿದ್ಯಾರ್ಥಿನಿಯರನ್ನೇ ನಾನು ಸಹೋದರಿಯರೆಂದು ಭಾವಿಸುತ್ತೇನೆ. ಖಂಡಿತವಾಗಿಯು ಜಗತ್ತಿನಲ್ಲಿ ಯಾರಿಗೂ ಇಷ್ಟೊಂದು ಮಂದಿ ರಾಖಿ ಕಟ್ಟುವುದಿಲ್ಲ. ಇದೊಂದು ರೀತಿಯ ದಾಖಲೆ ಎಂದು ಅವರು ತಿಳಿಸಿದ್ದಾರೆ. ಇನ್ನು ಯುವತಿಯರು, ‘ಖಾನ್ ಸರ್ ಅತ್ಯುತ್ತಮ ಗುರು. ಜೊತೆಗೆ ಉತ್ತಮ ಸಹೋದರ ಕೂಡ. ಅವರಿಗೆ ಜೀವನ ಪೂರ್ತಿ ರಾಖಿ ಕಟ್ಟಬೇಕೆಂದಿದ್ದೇವೆ ಎಂದು ಕೆಲವು ವಿದ್ಯಾರ್ಥಿನಿಯರು ಸಂತಸ ಹಂಚಿಕೊಂಡಿದ್ದಾರೆ. ಸದ್ಯ, ಈ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.