ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ಬಯಸುವವರಿಗೆ ಮುಜರಾಯಿ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದೆ… ಪ್ಯಾಕೆಜ್ ಅಲ್ಲಿ ಹೊಸ ಕ್ಷೇತ್ರಗಳ ಜೊತೆಗೆ ದಿನ ವಿಸ್ತರಣೆ ಮಾಡಲಾಗಿದೆ. ಅದರ ಜೊತೆ ಜೊತೆಗೆ ಸಹಾಯ ಧನ ಮೊತ್ತವನ್ನು ಕೂಡ ಹೆಚ್ಚಳ ಮಾಡಲಾಗಿದೆ. ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ರೈಲು ಯಾತ್ರೆಯ ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಯಲ್ಲಿ ಈ ಬಾರಿ ಬಿಹಾರದ ಗಯಾ ಕ್ಷೇತ್ರದ ದರ್ಶನವನ್ನು ಸೇರ್ಪಡೆಗೊಳಿಸಲಾಗಿದೆ.

ಅಷ್ಟೇ ಅಲ್ಲ 8 ದಿನಗಳ ಪ್ರವಾಸವನ್ನು 9 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಸದರಿ ಪ್ಯಾಕೇಜ್ ಗೆ ಈ ಹಿಂದೆ ನಿಗದಿ ಮಾಡಲಾಗಿದ್ದ ಸಹಾಯ ಧನ ಕೂಡ ಏರಿಕೆ ಮಾಡಲಾಗಿದೆ. ಸರ್ಕಾರದಿಂದ ನೀಡಲಾಗುವ ಸಹಾಯ ಧನ ರೂ.5000 ಗಳ ಮೊತ್ತವನ್ನು 7500ಕ್ಕೆ ಹೆಚ್ಚಿಸಲು ಮುಜರಾಯಿ ಇಲಾಖೆ ನಿರ್ಧರ ಮಾಡಿದೆ. ಜೊತೆಗೆ ಈ ಪ್ಯಾಕೇಜ್ ಯೋಜನೆಯಲ್ಲಿ ಹೊಸದಾಗಿ LHB ಕೋಚ್ ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಸಜ್ಜಿತವಾದ ಅಡುಗೆ ಮನೆ ಹಾಗೂ ಇಬ್ಬರು ವೈದ್ಯರು ಸಹ ಯಾತ್ರಾರ್ಥಿಗಳ ಜೊತೆಯಲ್ಲಿ ಸೇವಾ ನಿರತರಾಗಿರುತ್ತಾರೆ. ಅನುಕೂಲಕರವಾಗಿ ಪುಣ್ಯ ಕ್ಷೇತ್ರಗಳ ದರ್ಶನ ಮಾಡಬಹುದು.
ಜೊತೆಗೆ ಆಗಸ್ಟ್ ಮಾಹೆಯಲ್ಲಿ ಹೊರಡಲಿರುವ 5ನೇ ಟ್ರಿಪ್ ದಿನಾಂಕ 29.08.2023 ರಂದು ನಿರ್ಗಮನವಾಗಿ ದಿನಾಂಕ 06.09.2023 ರಂದು ಆಗಮನವಾಗುತ್ತೆ. ಅಂತೆಯೇ ಸೆಪ್ಟೆಂಬರ್ ಮಾಹೆಯಲ್ಲಿ ಹೊರಡಲಿರುವ 6ನೇ ಟ್ರಿಪ್ ದಿನಾಂಕ 23.09.2023 ರಂದು ನಿರ್ಗಮನವಾಗಿ ದಿನಾಂಕ 02.10.2023 ರಂದು ಆಗಮನವಿರುತ್ತದೆ. ಇನ್ನೂ ಈ ಯಾತ್ರೆಗೆ ತುಮಕೂರಿನಲ್ಲಿ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿರುತ್ತದೆ.. ಅಯೋಧ್ಯೆಗೆ ಭೇಟಿ ನೀಡುವ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಭವನ ವಸತಿ ಸಂಕೀರ್ಣ ನಿರ್ಮಾಣ ಮಾಡಲು ಚರ್ಚೆ ನಡೆಸಲಾಗಿದೆ..
ಈ ಸಂಬಂಧ ಉತ್ತರ ಪ್ರದೇಶದ ಮುಖ್ಯಮಂತ್ರಿಯವರಿಗೆ ಸುಮಾರು 5 ಎಕರೆ ಭೂಮಿ ಮಂಜೂರು ಮಾಡುವಂತೆ ಪತ್ರ ಬರೆದು ಕೋರಲಾಗುವುದು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮುಜರಾಯಿ ಇಲಾಖೆರವರು ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಅಂತ ಮುಜರಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಇದೆಲ್ಲವುದರ ಜೊತೆಗೆ ರಾಜ್ಯದ ಅರ್ಚಕರು ಇತ್ತೀಚೆಗೆ ಒಂದು ವಿಶೇಷ ಮನವಿಯನ್ನು ಸಚಿವರ ಬಳಿ ಮಾಡಿದ್ರು.
ರಾಜ್ಯದಲ್ಲಿ ನಮ್ಮ ಹಣ ನಾವು ಪಡೆಯಲು ಕಮಿಷನ್ ಕೊಡಬೇಕು ಅಂತ ಬಾಂಬ್ ಸಿಡಿಸಿದ್ರು. ಈ ತರ ಕಮಿಷನ್ ಕೊಟ್ರೆ ನಾವು ಬದುಕು ನಡೆಸುವುದು ಕಷ್ಟ ಆಗುತ್ತೆ ಅಂತ ನೋವು ತೋಡಿ ಕೊಂಡಿದ್ರು. ಸದ್ಯ ಅರ್ಚಕರ ಮನವಿಗೆ ಸ್ಪಂದಿಸಿದ ಸಚಿವರು ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯ ಇತ್ಯಾದಿಗಳ ಕೆಲಸಕ್ಕೆಂದು ಸರ್ಕಾರ ಬಿಡುಗಡೆ ಮಾಡುವ ʼತಸ್ತಿಕ್ʼ ಹಣವನ್ನು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚನೆ ಕೊಟ್ಟಿದ್ದಾರೆ. ಈ ಮೂಲಕ ಅರ್ಚಕರ ವೃಂದಕ್ಕೆ ಕೂಡ ಶುಭ ಸುದ್ದಿ ಸಿಕ್ಕಿದೆ..