ಸತ್ಯ ಧಾರಾವಾಹಿ ಮೂಲಕ ಬಿಗ್ ಬಾಸ್ ಮನೆಯ ಒಳಗಡೆ ಹೋದ ಗೌತಮಿ ಜಾಧವ್ ಅವರು ಫಿನಾಲೆ ವರೆಗು ಬರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಇವರು ಗೆಲ್ಲುವ ಅರ್ಹತೆ ಹೊಂದಿರುವ ಸ್ಪರ್ಧಿ ಎಂದು ಸಹ ಅಪೇಕ್ಷೆ ಇಟ್ಟುಕೊಂಡಿದ್ದರು ಫ್ಯಾನ್ಸ್. ಆದರೆ ಗೌತಮಿ ಅವರು ಫಿನಾಲೆ ವೀಕ್ ಶುರುವಾಗುವ ವೇಳೆ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು. ಇವರಿಗೆ ಜನರ ಪ್ರೀತಿ ಮತ್ತು ವಿಶ್ವಾಸ ಸಿಕ್ಕಿರುವುದಂತೂ ನಿಜ. ಆದರೆ ಇದೀಗ ಗೌತಮಿ ಅವರ ಕುಟುಂಬದ ಬಗ್ಗೆ ಕೆಲವು ವಿಚಾರಗಳು ಸದ್ದು ಮಾಡುತ್ತಿದೆ. ಇವರ ಕುಟುಂಬದಲ್ಲಿ ಏನಾದರೂ ಸಮಸ್ಯೆ ಇದೆಯೇ ಎನ್ನುವ ಪ್ರಶ್ನೆ ಶುರುವಾಗಿದೆ.

ಗೌತಮಿ ಅವರು ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಹಕರಾಗಿ ಗುರುತಿಸಿಕೊಂಡಿರುವ ಅಭಿಷೇಕ್ ಕಾಸರಗೋಡು ಅವರ ಜೊತೆಗೆ ಮದುವೆಯಾಗಿದ್ದಾರೆ. ಈ ಜೋಡಿಯ ವಿವಾಹ ವಾರ್ಷಿಕೋತ್ಸವ ಬಿಗ್ ಬಾಸ್ ಮನೆಯಲ್ಲಿ ನಡೆಯಿತು. ಇಬ್ಬರು ಬಹಳ ಸಂತೋಷವಾಗಿ ಸಮಯ ಕಳೆದರು. ಗೌತಮಿ ಅವರಿಗೆ ಒಂದಷ್ಟು ಬುದ್ದಿವಾದ ಹೇಳಿ ಹೊರಟರು ಅಭಿಷೇಕ್. ಈ ಜೋಡಿ ಎಲ್ಲರಿಗೂ ಇಷ್ಟ ಆಗಿದ್ದಂತೂ ನಿಜ. ಆದರೆ ಇವರ ಕುಟುಂಬ ಅಂದರೆ ಅಭಿಷೇಕ್ ಅವರ ತಂದೆ ತಾಯಿ ಜೊತೆಗೆ ಗೌತಮಿ ಅವರ ಸಂಬಂಧ ಅಷ್ಟೇನು ಚೆನ್ನಾಜಿಲ್ಲಾ ಎನ್ನುವ ಹಾಗೆ ಕಾಣುತ್ತಿದೆ. ಈ ಅನುಮಾನ ಶುರುವಾಗಲು ಗೌತಮಿ ಅವರ ಮಾವನ ಪೋಸ್ಟ್ ಕಾರಣ.

ಅಭಿಷೇಕ್ ಅವರ ತಂದೆ ಗಣೇಶ್ ಕಾಸರಗೋಡು ಅವರು. ಇವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಜರ್ನಲಿಸ್ಟ್. ಹಾಗೆಯೇ ಇವರು ಬರಹಗಾರರು ಕೂಡ ಹೌದು. ಹಲವು ಪುಸ್ತಕಗಳನ್ನು ಬರೆದಿದ್ದಾರೆ.. ಗಣೇಶ್ ಕಾಸರಗೋಡು ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈ ಹಿಂದೆ ಹಳೆಯ ಸಂದರ್ಶನ ಒಂದರಲ್ಲಿ ಗೌತಮಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು. ಆದರೆ ಗೌತಮಿ ಅವರು ಬಿಗ್ ಬಾಸ್ ಇಂದ ಎಲಿಮಿನೇಟ್ ಆದ ನಂತರ ಇವರ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
“ಅನ್ಯಾಯದ ಬೇಡಿಕೆಯ ಪ್ರಾರ್ಥನೆಯನ್ನು ಮುಲಾಜಿಲ್ಲದೇ ಧಿಕ್ಕರಿಸುವ, ತಿರಸ್ಕರಿಸುವ ನಮ್ಮಮ್ಮ ವನದುರ್ಗೆಗೆ ನಮೋ ನಮಃ…🙏..” ಎಂದು ಕ್ಯಾಪ್ಶನ್ ಬರೆದು ವನದುರ್ಗೆ ದೇವಿಯ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದವರಿಗೆ ಗೌತಮಿ ಅವರು ಸೋತು ಎಲಿಮಿನೇಟ್ ಆಗಿ ಹೊರಬಂದಿರುವುದನ್ನು ಅವರ ಮಾವ ಸಂಭ್ರಮಿಸುತ್ತಿದ್ದಾರೆ ಎಂದು ಅನ್ನಿಸುವುದಕ್ಕೆ ಶುರುವಾಗಿದ್ದು, ಕೆಲವರು ಕಾಮೆಂಟ್ಸ್ ಗಳ ಮೂಲಕ ಸಹ ಗಣೇಶ್ ಕಾಸರಗೋಡು ಅವರನ್ನು ಕೂಡ ಕೇಳಿದ್ದಾರೆ. ಅದಕ್ಕೆ ಅವರು ನೆಗಟಿವ್ ಎನರ್ಜಿ ನಡೆಯೋದಿಲ್ಲ ಎಂದು ರಿಪ್ಲೈ ಮಾಡಿದ್ದಾರೆ. ಇನ್ನು ಸಂದರ್ಶನ ಒಂದರಲ್ಲಿ ಗೌತಮಿ ಅವರಿಗೂ ಈ ಬಗ್ಗೆ ಪ್ರಶ್ನೆ ಕೇಳಲಾಗಿದೆ.

ನಿಮ್ಮ ಮಾವನವರು ಈ ರೀತಿ ಪೋಸ್ಟ್ ಮಾಡಿದ್ದಾರೆ ಎಂದು ಕೇಳಿರುವುದಕ್ಕೆ ಗೌತಮಿ ಅವರು ಕೌಟುಂಬಿಕ ವಿಷಯವನ್ನ ಬಿಟ್ಟುಕೊಟ್ಟಿಲ್ಲ. ಕುಟುಂಬದ ವಿಷಯ ನಾಲ್ಕು ಗೋಡೆಗಳ ನಡುವೆ ಇದ್ದರೆ ಒಳ್ಳೆಯದು ಎಂದು ಹೇಳಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅವರ ಮಾವ ಹಾಕಿರುವ ಪೋಸ್ಟ್ ವೈರಲ್ ಆಗುತ್ತಿದೆ. ಹಾಗಿದ್ದರೆ ಮನೆಯಲ್ಲಿ ಗೌತಮಿ ಹಾಗೂ ಅವರ ಅತ್ತೆ ಮಾವನ ಜೊತೆಗೆ ಭಿನ್ನಾಭಿಪ್ರಾಯ ಶುರುವಾದ ಕಾರಣಕ್ಕೆ ಅವರು ಗಂಡನ ಜೊತೆಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಶುರುವಾಗಿದೆ.