ಒಂದೇ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೈದರಾಬಾದ್ ಮೂಲದ ಪೊಲೀಸ್ ದಂಪತಿಗಳು ತಮ್ಮ ಪ್ರಿ ವೆಡ್ಡಿಂಗ್ ಶೂಟ್ನಲ್ಲಿ ಇಲಾಖೆಯ ಸಮವಸ್ತ್ರವನ್ನು ಬಳಸಿಕೊಂಡಿದಲ್ಲದೆ. ಇಲಾಖೆ ಕಾರುಗಳನ್ನು ಕೂಡ ದುರ್ಬಳಕೆ ಮಾಡಿಕೊಂಡಿದ್ದು ಇದೀಗ ಬೆಳಕಿಗೆ ಬಂದಿದೆ. ಸದ್ಯ, ಈ ಪ್ರಿ ವೆಡ್ಡಿಂಗ್ ಶೂಟ್ ವಿಡಿಯೋ ಎಲ್ಲ ಕಡೆ ವೈರಲ್ ಆಗಿದ್ದು, ಈ ಬಗ್ಗೆ ಎಲ್ಲೆಡೆ ಸಾಕಷ್ಟು ಚರ್ಚೆ ಆರಂಭವಾಗಿದೆ.
ಸದ್ಯ, ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಗಳಿಬ್ಬರು ಪ್ರತ್ಯೇಕ ಪೊಲೀಸ್ ಕಾರಿನಲ್ಲಿ ಬಂದು ಠಾಣೆಯ ಮುಂದೆ ಇಳಿಯುತ್ತಾರೆ, ನಂತರ ಸ್ವಲ್ಪ ಸಮಯದವರೆಗೆ ಸಂಭಾಷಣೆ ನಡೆಯುತ್ತದೆ . ಇದಕ್ಕೆ ಎರಡು ನಿಮಿಷಗಳ ಬ್ಯಾಗ್ರೌಂಡ್ ಮ್ಯೂಸಿಕ್ ಹಾಕಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಇನ್ನು ವಿಡಿಯೋವನ್ನು ನೋಡಿ ಹಿರಿಯ ಅಧಿಕಾರಿಗಳು ಅಸಮಾಧನಗೊಂಡಿದ್ದಾರೆ. ವಿಡಿಯೋದಲ್ಲಿರುವುದು ಐಪಿಎಸ್ ಅಧಿಕಾರಿ ಸಿವಿ ಆನಂದ್ ಹಾಗೂ ಅವರ ಭಾವಿ ಪತ್ನಿ ಎನ್ನಲಾಗಿದೆ.
ಈ ಡಿಫರೆಂಟ್ ಫ್ರಿ ವೆಡ್ಡಿಂಗ್ ಶೂಟ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಜೊತೆಗೆ ಈ ಬಗ್ಗೆ ಸಾರ್ವಜನಿಕ ವಲಯದಿಂದ ಆಕ್ಷೇಪ ಕೇಳಿ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ‘ಪೊಲೀಸ್ ದಂಪತಿಗಳು ನಮ್ಮ ಇಲಾಖೆಯ ಕಾರು ಮತ್ತು ಸಮಸ್ತ್ರವನ್ನು ಫೋಟೋ ಶೂಟ್ಗೆ ಬಳಸಿರುವುದರಲ್ಲಿ ಯಾವುದೇ ತೊಂದರೆ ಇಲ್ಲ, ನಮ್ಮ ಅನುಮತಿ ಪಡೆದು ಈ ಶೂಟಿಂಗ್ಮಾಡಿದ್ದಾರೆ’ ಎಂದಿದ್ದಾರೆ. ಸದ್ಯ, ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.