ಮದುವೆ ಅನ್ನುವ ಸುಂದರ ಸಂಬಂಧಕ್ಕೆ ಇಂದಿನ ತಲೆಮಾರು ನೀಡಿರುವ ವ್ಯಾಖ್ಯಾನವೇ ವಿಚಿತ್ರವಾದುದು. ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ರೀತಿಯಲ್ಲಿ ವಿವಾಹಗಳು ನಡೆಯುತ್ತಿವೆ. ಮೊನ್ನೆ ಮೊನ್ನೆಯಷ್ಟೇ ವಿದೇಶಿ ಯವತಿಯೊಬ್ಬಳು ತನ್ನನ್ನೇ ತಾನಿ ವಿವಾಹವಾಗಿ ಸುದ್ದಿಯಾಗಿದ್ದಳು. ಇದೀಗ, ಮೆಕ್ಸಿಕೋದ ಮೇಯರ್ ಒಬ್ಬ ಮೊಸಳೆಯೊಂದನ್ನು ವಿವಾಹವಾಗಿದ್ದಾನೆ. ಅಷ್ಟೇ ಅಲ್ಲದೆ ಮೊಸಳೆಯೊಂದಿಗಿನ ಮದುವೆ ಹಾಗೂ ಕಿಸ್ಸಿಂಗ್ ಫೋಟೋಗಳನ್ಜು ಹಂಚಿಕೊಂಡು, ನೋಡುಗರನ್ನು ಅವಕ್ಕಾಗುವಂತೆ ಮಾಡಿದ್ದಾನೆ.

ಹೌದು, ದಕ್ಷಿಣ ಮೆಕ್ಸಿಕೋ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗ್ ಸೋಸಾ ಎಂಬಾತ ಅಡ್ರಿಯಾನಎಮಬ ಹೆಸರಿನ ಹೆಣ್ಣು ಮೊಸಳೆಯೊಂದನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಜೊತೆಗೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ‘ನಾನು ನನ್ನ ಪೂರ್ವಜರ ಆಚರಣೆಗಳಿಗೆ ಮರು ಜೀವ ನೀಡಿದ್ದೇನೆ’ ಎಂದು ಬರೆದುಕೊಂಡಿದ್ದಾನೆ.ಈ ಅಚ್ಚರಿಯ ವಿವಾಹಕ್ಕೆ ಮೆಕ್ಸಿಕೋದ ಟೆಹುವಾಂಟೆಪೆಕ್ ಗ್ರಾಮದ ಸಹಸ್ರಾರು ಜನ ಸಾಕ್ಷಿಯಾಗಿದ್ದು, ಅದ್ದೂರಿಯಾಗಿ ವಿವಾಹ ನಡೆಸಿದ್ದಾರೆ.
ಈ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡಿರುವ ಮೊಸಳೆಯ ಗಂಡ ಮೇಯರ್, ‘ನಾನು ಈ ಮೊಸಳೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದೇನೆ. ಪ್ರೀತಿ ಎಂಬುದಕ್ಕೆ ಗಡಿಗಳಿಲ್ಲ. ಆದ್ದರಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪ್ರೀತಿ ಇಲ್ಲದೆ ಈ ಮದುವೆಯಾಗಲು ಸಾಧ್ಯವೂ ಇಲ್ಲ. ನಾನು ವಿವಾಹವಾಗಿರುವುದು ಮೊಸಳೆಯನ್ನಲ್ಲ ರಾಜ ಕುಮಾರಿಯನ್ನು ಎಂಬ ಭಾವನೆ ನನ್ನದು. ಈ ವಿವಾಹಕ್ಕೆ ನನ್ನ ಗ್ರಾಮದ ಜನರೂ ಕೂಡ ಸಾಕ್ಷಿ ಹಾಗೂ ಸಂತಸಪಟ್ಟಿದ್ದಾರೆ’ ಎಂದಿದ್ದಾನೆ.
ಮೆಕ್ಸಿಕೋದಲ್ಲಿ ವಾಸಿಸುವ ಎರಡು ಸ್ಥಳೀಯ ಜನಾಂಗದ ಜನರು ಸಮಾಜದಲ್ಲಿ ಶಾಂತಿ ಸ್ಥಾಪನೆಗಾಗಿ ಈ ರೀತಿ ಸರೀಸೃಪಗಳನ್ನು ವಿವಾಹವಾಗುವುದು ನೂರಾರು ವರ್ಷಗಳಿಂದಲೂ ಅಲ್ಲಿ ಚಾಲ್ತಿಯಲ್ಲಿದೆಯಂತೆ.ಇದೇ ಕಾರಣಕ್ಕೆ ಇದೀಗ ಅಲ್ಲಿನ ಮೇಯರ್ ಮೊಸಳೆಯನ್ನು ವಿವಾಹವಾಗಿದ್ದಾನೆ. ಇವರು ಸರೀಸೃಪಗಳೊಂದಿಗೆ ಅದ್ದೂರಿಯಾಗಿ ಮದುವೆಯಾಗುವುದಲ್ಲದೇ, ಅವುಗಳಿಗೂ ಕೂಡ ಹೊಸ ಬಟ್ಟೆ, ಬಣ್ಣ ಹಾಕಿ ಶೃಂಗಾರ ಮಾಡುತ್ತಾರೆ. ಸದ್ಯ, ಮೇಯರ್-ಮೊಸಳೆಯ ಫೋಟೋಗಳು ವೈರಲ್ ಆಗುತ್ತಿವೆ.