ಸ್ಯಾಂಡಲ್ವುಡ್ನ ಪ್ರಮುಖ ನಟಿಯರಲ್ಲಿ ನಟಿ ರಚಿತಾ ರಾಮ್ ಕೂಡ ಒಬ್ಬರು. ಆರಂಭದಿಂದಲೇ ಸ್ಟಾರ್ ನಟರೊಂದಿಗೆ ಅವಕಾಶ ಗಿಟ್ಟಿಸಿಕೊಂಡ ಈ ಡಿಂಪಲ್ ಕ್ವೀನ್ ತಮ್ಮ ನಟನೆಯಿಂದ ಲಕ್ಷಾಂತಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಕಟ್ಟಾ ಅಭಿಮಾನಿಯೊಬ್ಬ ತನ್ನ ಬೆನ್ನ ಮೇಲೆ ರಚಿತಾ ರಾಮ್ ಫೋಟೋವನ್ನು ಟ್ಯಾಟೊ ಹಾಕಿಸಿಕೊಂಡಿದ್ದಾನೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ರಚಿತಾ ರಾಮ್ ಫೋಟೊವನ್ನು ಅಭಿಮಾನಿಯೊಬ್ಬ ತನ್ನ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಗುತ್ತಿರುವ ನಟಿ “ನಮ್ಮನೆ ದೇವರು ರಚಿತಾ ರಾಮ್” ಎಂದು ಬರೆಸಿಕೊಂಡಿದ್ದಾರೆ. ಈ ವಿಡಿಯೋವನ್ನು ಅಭಿಮಾನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ರಚ್ಚು ಅಭಿಮಾನಿಗಳು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು ಖುಷಿಯಿಂದ ಶೇರ್ ಮಾಡುತ್ತಿದ್ದಾರೆ.
ಕನ್ನಡದ ಸ್ಟಾರ್ ನಾಯಕರಾದ ದರ್ಶನ್, ಸುದೀಪ್, ಯಶ್, ಶಿವಣ್ಣ, ಪುನೀತ್ ಅಭಿಮಾನಿಗಳು ಈ ರೀತಿ ಟ್ಯಾಟೂ ಹಾಕಿಸಿಕೊಂಡಿರುವ ಫೋಟೊ, ವಿಡಿಯೋಗಳು ಈ ಹಿಂದೆ ವೈರಲ್ ಆಗಿತ್ತು. ಆದರೆ ನಟಿಯೊಬ್ಬರ ಫೋಟೊ ಟ್ಯಾಟೂವನ್ನು ಅಭಿಮಾನಿ ಹಾಕಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಈ ವಿಡಿಯೋ ರಚಿತಾರಾಮ್ ನೋಡುವ ತನಕ ಅಭಿಮಾನಿಯ ಟ್ಯಾಟೊ ವಿಡಿಯೋ ಶೇರ್ ಮಾಡುತ್ತಿದ್ದಾರೆ.