ಚಂದನವನದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಛಾಪು ಮೂಡಿಸಿ, ಯಶಸ್ವಿ ಆಗಿರುವವರು ನಟ ಪ್ರಜ್ವಲ್ ದೇವರಾಜ್. ಕನ್ನಡದ ಹಿರಿಯ ನಟ ದೇವರಾಜ್ ಅವರ ಮಗ, ಪ್ರಜ್ವಲ್ ದೇವರಾಜ್ ಅವರು ಬಹಳ ಚಿಕ್ಕ ವಯಸ್ಸಿಗೆ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಇಂದು ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. ವೈಯಕ್ತಿಕ ಜೀವನದಲ್ಲಿ ಸಹ, ಇವರು ಮದುವೆಯಾಗಿ ಸಂತೋಷವಾಗಿದ್ದಾರೆ. ಇವರ ಪತ್ನಿ ರಾಗಿಣಿ ಖ್ಯಾತ ಡ್ಯಾನ್ಸರ್ ಆಗಿದ್ದಾರೆ. ಇವರಿಬ್ಬರದ್ದು ಲವ್ ಮ್ಯಾರೇಜ್. ರಾಗಿಣಿ ಪ್ರಜ್ವಲ್ ಜೋಡಿ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ, ಇವರು ಶೇರ್ ಮಾಡೋ ಡ್ಯಾನ್ಸ್ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಜೋಡಿ ಮದುವೆಯಾಗಿ ಇನ್ನೇನು 10 ವರ್ಷ ತುಂಬುತ್ತದೆ. ಆದರೆ ಇಬ್ಬರಿಗೂ ಇನ್ನು ಕೂಡ ಮಗುವಾಗಿಲ್ಲ. ಈ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡುತ್ತಿದೆ. ಅದಕ್ಕೆ ಒಂದು ಉತ್ತರವನ್ನು ಖುದ್ದು ರಾಗಿಣಿ ಅವರೇ ನೀಡಿದ್ದಾರೆ.
ನಟ ಪ್ರಜ್ವಲ್ ದೇವರಾಜ್ ಅವರು ಚಿಕ್ಕ ವಯಸ್ಸಿನಿಂದ ಕನ್ನಡ ಚಿತ್ರರಂಗದ ಕಲಾವಿದರ ಜೊತೆಗೆ ಬೆಳೆದಿರುವವರು, ಡಾ. ರಾಜ್ ಕುಮಾರ್ ಅವರು, ಡಾ. ವಿಷ್ಣುವರ್ಧನ್ ಅವರು, ಡಾ. ಅಂಬರೀಶ್ ಅವರು ಇವರೆಲ್ಲರೂ ಸಹ ದೇವರಾಜ್ ಅವರಿಗೆ ಆಪ್ತರು, ಈ ಹಿರಿಯ ನಟರ ಮಾರ್ಗದರ್ಶನ, ಆಶೀರ್ವಾದದಲ್ಲಿ ಬೆಳೆದ ಹುಡುಗ ಪ್ರಜ್ವಲ್ ದೇವರಾಜ್. ಇವರು ಒಂದೆರಡು ಸಿನಿಮಾಗಳಲ್ಲಿ ಬಾಲನಟನಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದು ಸಹ ಬಹಳ ಬೇಗ, 16ನೇ ವಯಸ್ಸಿಗೆ 10ನೇ ತರಗತಿ ಪರೀಕ್ಷೆ ಮುಗಿಯುತ್ತಿದ್ದ ಹಾಗೆಯೇ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಚಂದನವನದ ಯಂಗೆಸ್ಟ್ ಹೀರೋಗಳಲ್ಲಿ ಇವರು ಕೂಡ ಒಬ್ಬರು. ಪ್ರಜ್ವಲ್ ಅವರ ಮೊದಲ ಸಿನಿಮಾ ಸಿಕ್ಸರ್. ಪ್ರಜ್ವಲ್ ಬಹಳ ಚಿಕ್ಕವರೇ ಆದರೂ ಸಹ, ಮೊದಲ ಸಿನಿಮಾದಲ್ಲೇ ಭರವಸೆಯ ನಟ ಎನ್ನುವ ಛಾಪು ಮೂಡಿಸಿದ್ದರು.

ಹೀಗೆ, ಮೊದಲ ಸಿನಿಮಾದಲ್ಲಿ ನಾಯಕನಾಗಿ ಎಂಟ್ರಿ ಕೊಟ್ಟ ಪ್ರಜ್ವಲ್ ಅವರು, ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು. ಕೆಲವು ಮಲ್ಟಿ ಸ್ಟಾರರ್ ಸಿನಿಮಾಗಳಲ್ಲಿ ಕೂಡ ನಟಿಸಿದರು ಪ್ರಜ್ವಲ್. ಇವರು ಉತ್ತಮ ನಟ, ಒಳ್ಳೆಯ ಡ್ಯಾನ್ಸರ್ ಸಹ ಹೌದು. ಪ್ರಜ್ವಲ್ ಅವರ ಡ್ಯಾನ್ಸ್ ಗೆ ಹೆಚ್ಚು ಫ್ಯಾನ್ಸ್ ಇದ್ದಾರೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಒಳ್ಳೆಯ ಟ್ಯಾಲೆಂಟ್ ಇದ್ದರೂ ಸಹ, ಪ್ರಜ್ವಲ್ ಅವರಿಗೆ ಒಬ್ಬ ಸ್ಟಾರ್ ಆಗುವಂಥ ಲಕ್ಷಣ ಇದ್ದರೂ ಸಹ, ಅದೃಷ್ಟ ಇರಲಿಲ್ಲ ಅಥವಾ ಅಂಥಾ ಒಳ್ಳೆಯ ಅವಕಾಶಗಳು ಬರಲಿಲ್ಲ ಎಂದು ಹೇಳಿದರೆ ತಪ್ಪಲ್ಲ. ಆದರೆ ಪ್ರಜ್ವಲ್ ಅವರ ಸಿನಿಮಾಗಳು ತಕ್ಕಮಟ್ಟಿಗೆ ಜನರಿಗೆ ಇಷ್ಟವಾಗಿದೆ, ಇವರನ್ನು ಇಷ್ಟಪಡುವ ಯಂಗ್ ಅಭಿಮಾನಿಗಳ ಬಳಗ ಸಹ ಇದೆ. ಇವರ ಇಡೀ ಫ್ಯಾಮಿಲಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ.

ಪ್ರಜ್ವಲ್ ಅವರ ತಂದೆ ದೇವರಾಜ್ ಅವರು 4 ದಶಕದಿಂದ ಚಂದನವನದಲ್ಲಿ ಸಕ್ರಿಯವಾಗಿರುವ ಸ್ಟಾರ್ ನಟ. ನಾಯಕನಾಗಿ, ಪೋಷಕ ಪಾತ್ರಗಳಲ್ಲಿ, ವಿಲ್ಲನ್ ಆಗಿ ಹೀಗೆ ಎಲ್ಲಾ ಥರದ ಪಾತ್ರಗಳಲ್ಲಿ ಸಹ ನಟಿಸಿ, ಮಿಂಚಿದವರು ನಟ ದೇವರಾಜ್. ಇನ್ನು ಪ್ರಜ್ವಲ್ ಅವರ ತಾಯಿ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡವರು, ಇವರು ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಬಳಿಕ ದೇವರಾಜ್ ಅವರ ಜೊತೆಗೆ ಇವರ ಮದುವೆ ನಡೆದು ಹೋಯಿತು. ಮದುವೆ ಬಳಿಕ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದು ಬಿಟ್ಟರು. ಇನ್ನು ಪ್ರಜ್ವಲ್ ದೇವರಾಜ್ ಅವರ ತಮ್ಮ ಪ್ರಣಾಮ್ ಅವರು ಸಹ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಜ್ವಲ್ ಅವರ ಪತ್ನಿ ರಾಗಿಣಿ ಡ್ಯಾನ್ಸರ್ ಆಗಿದ್ದು, ಅವರು ಸಹ ಈಗಾಗಲೇ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಪ್ರಜ್ವಲ್ ಹಾಗೂ ರಾಗಿಣಿ ಇವರಿಬ್ಬರದ್ದು ಅಪ್ಪಟ ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ರಾಗಿಣಿ ಅವರನ್ನು ಪ್ರೀತಿಸಿ, ಪ್ರಜ್ವಲ್ ಅವರೇ ಪ್ರೊಪೋಸ್ ಮಾಡಿದ್ದರಂತೆ. ಇವರಿಬ್ಬರ ಲವ್ ಗೆ ತಮ್ಮ ಕೂಡ ಜೊತೆಯಲ್ಲಿ ಇರುತ್ತಿದ್ದರಂತೆ. ಇವರಿಬ್ಬರಿಗೂ ಚೈಲ್ಡ್ ಹುಡ್ ಇಂದಲೇ ಪರಿಚಯ, ಇಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿದ್ದರಂತೆ. ಬಳಿಕ ಇಬ್ಬರ ನಡುವೆ ಪ್ರೀತಿ ಕೂಡ ಶುರುವಾಯಿತು. ಈ ಜೋಡಿಯ ಪ್ರೀಯಿಯನ್ನು ಮನೆಯವರು ಒಪ್ಪಿ, ಇಬ್ಬರಿಗೂ ಮದುವೆ ಮಾಡಿದರು. ರಾಗಿಣಿ ಹಾಗೂ ಪ್ರಜ್ವಲ್ ಜೋಡಿ ಮದುವೆಯಾಗಿ ಇನ್ನೇನು 10 ವರ್ಷ ಕಳೆಯುತ್ತಿದೆ. ಇವರಿಬ್ಬರು ಮದುವೆಯಾಗಿದ್ದು 2015ರ ಅಕ್ಟೊಬರ್ ತಿಂಗಳಿನಲ್ಲಿ. ಈ ವರ್ಷಕ್ಕೆ ಮದುವೆಯಾಗಿ 10 ವರ್ಷ ತುಂಬುತ್ತದೆ. ಆದರೆ ಇನ್ನೂ ಕೂಡ ಇವರಿಬ್ಬರಿಗೆ ಮಕ್ಕಳಾಗಿಲ್ಲ. ಈ ಒಂದು ಪ್ರಶ್ನೆ ಅವರಿಬ್ಬರ ಅಭಿಮಾನಿಗಳಲ್ಲಿ ಇದೆ.
ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಜೋಡಿ ನೋಡೋದಕ್ಕೆ ಸಿಕ್ಕಾಪಟ್ಟೆ ಕ್ಯೂಟ್. ಇವರಿಬ್ಬರು ಡ್ಯಾನ್ಸಿಂಗ್ ಜೋಡಿ ಎಂದರು ತಪ್ಪಲ್ಲ. ಇಬ್ಬರು ಸಖತ್ ಆಗಿ ಡ್ಯಾನ್ಸ್ ಮಾಡುತ್ತಾರೆ, ಜೊತೆಯಾಗಿ ಡ್ಯಾನ್ಸ್ ಮಾಡುತ್ತಿರುವ ವರ್ಕೌಟ್ ಮಾಡುತ್ತಿರುವ ವಿಡಿಯೋಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಾರೆ. ಇಂಥಾ ಮುದ್ದಾಗಿರುವ ಜೋಡಿಗೆ ಇನ್ನು ಯಾಕೆ ಮಕ್ಕಳಾಗಿಲ್ಲ ಅನ್ನೋದು ಅವರ ಅಭಿಮಾನಿಗಳಲ್ಲಿ ಹಾಗೂ ನೆಟ್ಟಿಗರಲ್ಲಿ ಕಾಡುತ್ತಿರುವ ಪ್ರಶ್ನೆ. ಮಗು ಬೇಡ ಅಂತ ನಿರ್ಧಾರ ಮಾಡಿದ್ದಾರಾ? ಇದರ ಹಿಂದಿನ ಕಾರಣ ಏನು? ಗುಡ್ ನ್ಯೂಸ್ ಯಾವಾಗ ಕೊಡ್ತೀರಾ ಎಂದು ಸೋಷಿಯಲ್ ಮೀಡಿಯಾ ಮೂಲಕ ನೆಟ್ಟಿಗರು ಇವರಿಬ್ಬರನ್ನು ಕೇಳಿದ್ದಾರೆ. ಅದಕ್ಕೆ ಈ ಜೋಡಿ ಉತ್ತರವನ್ನು ಸಹ ಕೊಟ್ಟಿದ್ದಾರೆ. ರಾಗಿಣಿ ಅವರು ಮಗು ವಿಚಾರಕ್ಕೆ ಉತ್ತರ ಕೊಟ್ಟಿದ್ದು. ಅವರು ಹೇಳಿರೋದೇನು ಎಂದು ತಿಳಿಯೋಣ..

“ಕೆಲ ವರ್ಷಗಳ ಹಿಂದೆ ನಾನು ಒಂದು ಡ್ಯಾನ್ಸ್ ಕ್ಲಾಸ್ ಶುರು ಮಾಡಿ, ಈಗ ಅದರಲ್ಲಿ 200 ಸ್ಟುಡೆಂಟ್ಸ್/ಮಕ್ಕಳು ಇದ್ದಾರೆ. ನನಗೆ ಅಮ್ಮ ಆಗಬೇಕು ಅಂತ ತುಂಬಾ ಆಸೆ ಇದೆ, ಖಂಡಿತ ಅಮ್ಮ ಆಗ್ತೀನಿ. ನಮ್ಮಿಬ್ಬರಿಗೂ ಮಗುವಿನ ಬಗ್ಗೆ ಆಸೆ ಇದೆ. ಆದರೆ ಎಲ್ಲದಕ್ಕೂ ಸರಿಯಾದ ಟೈಮ್ ಬರಬೇಕು. ನಾವಿಬ್ಬರು ಮನಸ್ಸು ಮಾಡಿದಾಗ ಖಂಡಿತ ಆಗುತ್ತೆ. ಎಲ್ಲರ ಹಾಗೆ ನಮಗೂ ಮಕ್ಕಳು ಅಂದ್ರೆ ತುಂಬಾ ಇಷ್ಟ. ನಮಗೆ ಮಕ್ಕಳಾಗೋದಿಲ್ಲ ಅಥವಾ ಮಕ್ಕಳು ಬೇಡ ಅಂತ ನಿರ್ಧಾರ ಮಾಡಿದ್ದೀವಿ ಅನ್ನೋದೆಲ್ಲಾ ಸುಳ್ಳು. ಎಲ್ಲರಿಗೂ ಅವರದ್ದೇ ಆದ ಪರ್ಸನಲ್ ಜರ್ನಿ ಇರುತ್ತದೆ, ಅವರ ಪ್ರಯಾರಿಟಿಸ್ ಇರುತ್ತದೆ. ನಮಗೆ ಸ್ವಲ್ಪ ನಮ್ಮ ಟೈಮ್ ಬೇಕಿತ್ತು..” ಎಂದಿದ್ದಾರೆ ರಾಗಿಣಿ. ಪ್ರಜ್ವಲ್ ಅವರಿಗೆ ಈಗ 37 ವರ್ಷ ವಯಸ್ಸು. ಮಗುವಿನ ವಿಚಾರಕ್ಕೆ ರಾಗಿಣಿ ಅವರು ಕೊಟ್ಟಿರುವ ಉತ್ತರ ಇದು.