ಬಿಗ್ ಬಾಸ್ ಶೋ ಗೆಲ್ಲೋದು ಸುಲಭದ ವಿಷಯ ಅಂತೂ ಅಲ್ಲ. ಒಂದು ಸಾರಿ ಬಿಗ್ ಬಾಸ್ ವಿನ್ನರ್ ಆದರೆ, ಅವರಿಗೆ ಹೆಚ್ಚು ಗೌರವ, ಪ್ರೀತಿ, ಜನರ ವಿಶ್ವಾಸ, ಸಪೋರ್ಟ್, ಫ್ಯಾನ್ಸ್ ಎಲ್ಲವೂ ಸಿಗುತ್ತದೆ. ಆ ಶೋ ಕೊಡೋ ಜನಪ್ರಿಯತೆಯೇ ಬೇರೆ ಬಿಡಿ, ಎಷ್ಟೋ ಸಿನಿಮಾಗಳನ್ನು ಮಾಡಿರುವವರಿಗೆ ಸಿಗದ ಹೆಸರು ಮತ್ತು ಜನಪ್ರಿಯತೆ ಬಿಗ್ ಬಾಸ್ ಮನೆಯ ಒಳಗೆ ಕೆಲವು ವಾರಗಳ ಕಾಲ ಇದ್ದರೆ, ಸಿಕ್ಕಿಬಿಡುತ್ತದೆ. ಇದು ಸೋಷಿಯಲ್ ಮೀಡಿಯಾ ಯುಗ, ಇಲ್ಲಿ ಎಲ್ಲವು ಫಿಂಗರ್ ಟಚ್ ನಲ್ಲೇ ಸಿಗುತ್ತದೆ. ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಸಿಗುತ್ತಾರೆ. ಬಿಗ್ ಬಾಸ್ ಶೋಗೆ ಕೂಡ ಇಷ್ಟು ಪಾಪ್ಯುಲಾರಿಟಿ ಸಿಕ್ಕಿರೋದು ಸೋಷಿಯಲ್ ಮೀಡಿಯಾ ಎಂದರು ತಪ್ಪಲ್ಲ. ಈಗ ಈ ಜನಪ್ರಿಯತೆ ಬಳಸಿಕೊಂಡು, ಸಿನಿಮಾ ತಾರೆಯಿಂದ ಉದ್ಯಮಿ ಕಾರ್ತಿಕ್ ತಮ್ಮ ಹೊಸ ಪ್ರಯತ್ನವನ್ನು ಶೋ ಮೂಲಕ ಶ್ರೇಣೀಬದ್ಧಗೊಳಿಸುತ್ತಿದ್ದಾರೆ. ಶೋ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳೋ ಜನರಿಂದಲೇ ಈ ಶೋ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಬಿಗ್ ಬಾಸ್ ಅಂದ್ರೆ ಜನರಿಗೆ ಅಷ್ಟು ಹುಚ್ಚು. ಬಿಗ್ ಬಾಸ್ ಮನೆಯಲ್ಲಿ ಒಳ್ಳೇತನದಲ್ಲಿ ಇದ್ದವರಿಗೆ ಹೆಚ್ಚು ಅಭಿಮಾನಿಗಳು ಅವರನ್ನು ಫಾಲೋ ಮಾಡುವುದಕ್ಕೆ ಶುರು ಮಾಡುತ್ತಾರೆ. ಜಗಳ ಆಡುತ್ತಾ, ವಿವಾದಗಳಿಗೆ ಸಿಕ್ಕಿ ಕೊಂಡವರು ಬೇರೆ ರೀತಿಯಲ್ಲಿ ಸುದ್ದಿಯಾಗುತ್ತಾರೆ. ಒಟ್ಟಿನಲ್ಲಿ ಸುದ್ದಿ ಆಗುವುದಂತೂ ತಪ್ಪಲ್ಲ. ಜನಪ್ರಿಯತೆ ಸಿಗುವುದಂತೂ ಕಡಿಮೆ ಆಗುವುದಿಲ್ಲ. ಪ್ರತಿ ಸೀಸನ್ ನಲ್ಲಿ ನಡೆಯುತ್ತಿರುವುದು ಇದೆ.. ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 11ಮುಗಿದಿದೆ, ಜನರ ಆಸೆಯಂತೆ ಕುರಿ ಕಾಯೋ ಹುಡುಗ, ಉತ್ತರ ಕರ್ನಾಟಕದ ಮಗ ಹನುಮಂತ 5.2 ಕೋಟಿ ವೋಟ್ಸ್ ಪಡೆದು, ಬಿಗ್ ಬಾಸ್ ಕಪ್ ಜೊತೆಗೆ 50 ಲಕ್ಷ ಬಹುಮಾನವನ್ನು ಕೂಡ ಗೆದ್ದಿದ್ದಾನೆ. ಹನುಮಂತ ಗೆದ್ದಿದ್ದು ಇಡೀ ಕರ್ನಾಟಕಕ್ಕೆ ಹೆಮ್ಮೆ ತಂದಿದೆ ಎಂದರು ತಪ್ಪಲ್ಲ.

ಇನ್ನು ಕಳೆದ ಸಹ ಇದಕ್ಕಿಂತ ಹೆಚ್ಚಿನ ಕ್ರೇಜ್ ಹೊಂದಿತ್ತು. ಬಿಬಿಕೆ10 ಮರೆಯಲು ಸಾಧ್ಯವೇ..? ಸಂಗೀತ ಶೃಂಗೇರಿ ವಿನಯ್ ಗೌಡ ನಡುವಿನ ವಾರ್ ಗಳನ್ನು ಇನ್ನು ಯಾರು ಮರೆತಿಲ್ಲ. ಇನ್ನು ಕಳೆದ ಸೀಸನ್ ನ ಪ್ರತಿಯೊಬ್ಬ ಸ್ಪರ್ಧಿ ಸಹ ತಮ್ಮದೇ ಶೈಲಿಯಲ್ಲಿ ಜನರಿಗೆ ತುಂಬಾ ಇಷ್ಟವಾಗಿದ್ದರು. ಬಿಬಿಕೆ10 ವಿನ್ನರ್ ಆದವರು ಕಾರ್ತಿಕ್ ಮಹೇಶ್. ಇವರು ಗೆದ್ದಿದ್ದಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಬಂದಿತ್ತು, ಆದರೆ ಕಾರ್ತಿಕ್ ಮಹೇಶ್ ಅವರು ಗೆಲುವಿಗೆ ಅರ್ಹರು ಎನ್ನುವ ಕಾರಣಕ್ಕೆ ಗೆದ್ದಿದ್ದಾರೆ ಎನ್ನುವುದು ಹಲವರ ವಾದ ಆಗಿತ್ತು. ಕಾರ್ತಿಕ್ ಅದ್ಭುತವಾದ ನಟ, ಬಿಗ್ ಬಾಸ್ ಮನೆಯೊಳಗೆ ಟಾಸ್ಕ್ ಗಳಲ್ಲಿ ಕೂಡ ಉತ್ತಮವಾಗಿ ಪರ್ಫಾರ್ಮ್ ಮಾಡಿದ್ದರು, ಕೊನೆಯವರೆಗೂ ಛಲ ಬಿಟ್ಟುಕೊಡದೆ ಒಳ್ಳೆ ರೀತಿಯಲ್ಲಿ ಇದ್ದಿದ್ದಕ್ಕೆ ಗೆದ್ದಿದ್ದಾರೆ ಕಾರ್ತಿಕ್. ಗೆದ್ದ ಮೇಲೆ ಹಲವು ಅಪ್ಡೇಟ್ಸ್ ಗಳನ್ನಹ್ ಸಹ ಕೊಟ್ಟಿದ್ದಾರೆ.

ಬಿಬಿಕೆ10 ಮುಗಿದು 1 ವರ್ಷ ಆಗಿದೆ. ಬಿಗ್ ಬಾಸ್ ಬಳಿಕ ಸುದೀಪ್ ಅವರ ಜೊತೆಗೆ ಹಾಗೂ ಇನ್ನೆಲ್ಲರ ಜೊತೆಗೂ ಒಳ್ಳೆಯ ಬಾಂಡಿಂಗ್ ಇಟ್ಟುಕೊಂಡಿದ್ದಾರೆ ಕಾರ್ತಿಕ್. ಇತ್ತೀಚೆಗೆ ಇವರು ನಾಯಕನಾಗಿ ಅಭಿನಯಿಸಲಿರುವ ಎರಡು ಸಿನಿಮಾಗಳು ಕೂಡ ಅನೌನ್ಸ್ ಆಗಿದೆ. ಕಾರ್ತಿಕ್ ಅವರು ರಾಮರಸ ಸಿನಿಮಾದಲ್ಲಿ ಮತ್ತು ರಿಚ್ ರಿಚ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಎರಡು ಸಿನಿಮಾ ಮೇಲೆ ನಿರೀಕ್ಷೆ ಇದೆ. ಹಾಗೆಯೇ ಒಳ್ಳೆಯ ಟೀಮ್ ಸಹ ಕಾರ್ತಿಕ್ ಅವರಿಗೆ ಸಿಕ್ಕಿದೆ. ರಾಮರಸ ಸಿನಿಮಾವನ್ನು ಖ್ಯಾತ ನಿರ್ದೇಶಕ ಗುರು ದೇಶಪಾಂಡೆ ಅವರು ನಿರ್ದೇಶನ ಮಾಡುತ್ತಿದ್ದು, ಖ್ಯಾತ ನಟಿ ನಾಯಕಿಯಾಗಿದ್ದಾರೆ. ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ಶರಣ್ ಅವರು ಸಹ ಈ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ ಆಗಿದೆ.

ಇನ್ನು ರಿಚ್ ರಿಚ್ ಸಿನಿಮಾ ಇನ್ನೊಂದು ತರದಲ್ಲಿ ಸಿಕ್ಕಾಪಟ್ಟೆ ಸ್ಪೆಷಲ್. ಈ ಸಿನಿಮಾವನ್ನು ಸಿಂಪಲ್ ಸುನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸುನಿ ಅವರ ಸಿನಿಮಾ ಅಂದ್ರೆ ವಿಶೇಷವಾಗಿ ಹೇಳೋ ಹಾಗೆ ಇಲ್ಲ. ಸಿನಿಮಾ ತುಂಬಾ ಚೆನ್ನಾಗಿಯೇ ಮೂಡಿ ಬರುತ್ತದೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಆಪರೇಷನ್ ಅಲಮೇಲಮ್ಮ, ಅವತಾರ ಪುರುಷ, ಒಂದು ಸರಳ ಪ್ರೇಮಕಥೆ ಈ ಎಲ್ಲಾ ಸಿನಿಮಾಗಳಲ್ಲಿ ಒಳ್ಳೇ ಕಥೆ ಇದೆ. ಹಾಗಾಗಿ ಸುನಿ ಅವರ ಸಿನಿಮಾಗಳು ವೀಕ್ಷಕರಿಗೆ ತುಂಬಾ ಇಷ್ಟವಾಗುತ್ತದೆ. ಕಾರ್ತಿಕ್ ಅವರು ಸುನಿ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಅದು ಹೆಚ್ಚು ಜನರಿಗೆ ತಲುಪಿ, ಗೆಲ್ಲುವುದರಲ್ಲಿ ಸಂಶಯವಿಲ್ಲ. ಇದು ಕಾರ್ತಿಕ್ ಮಹೇಶ್ ಅವರಿಗೆ ಸಿಕ್ಕಿರುವ ಒಂದು ಅದ್ಭುತವಾದ ಅವಕಾಶ. ಈ ಸಿನಿಮಾ ಶೀಘ್ರದಲ್ಲೇ ಶೂಟಿಂಗ್ ಶುರು ಮಾಡಲಿದೆ. ಇದರ ಜೊತೆಗೆ ಕಾರ್ತಿಕ್ ಅವರಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ..
ಹೌದು, ಸಿನಿಮಾ ಬಿಗ್ ಬಾಸ್ ಇದೆಲ್ಲದರ ಜೊತೆಗೆ ಕಾರ್ತಿಕ್ ಮಹೇಶ್ ಇದೀಗ ಹೊಸ ಬ್ಯುಸಿನೆಸ್ ಶುರು ಮಾಡಲಿದ್ದಾರೆ. ಹೌದು, ಇದರ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಕಾರ್ತಿಕ್. “ಇವಳು ಗೆದ್ದಾಗ ಹಿಗ್ಗಲಿಲ್ಲ..ಸೋತಾಗ ಕುಗ್ಗಲು ಬಿಡಲಿಲ್ಲ.. ಪ್ರತಿಯೊಂದು ಹೆಜ್ಜೆಯಲ್ಲೂ ಮುನ್ನುಗ್ಗು ಮಗನೇ ಎಂದು ಧೈರ್ಯ ತುಂಬುವಳು.. ಮುಂದಿನ ಹೆಜ್ಜೆಯಲ್ಲೂ ಜೊತೆಯಾಗಿದ್ದಾಳೆ ..
ನನ್ನ ಮೊದಲ ಟೀಚರ್ …ನನ್ನ ಮೊದಲ ಚಿಯರ್ ಲೀಡರ್ …
ದಿನದ ಆರಂಭ , ಕೊನೆ ಎಲ್ಲವೂ…. ಪ್ರಸ್ತುತ ಪಡಿಸುತ್ತಿದ್ದೇನೆ GOLIFY.. with ಅಮ್ಮ 😍 ಆದಷ್ಟು ಬೇಗ ಮಾರುಕಟ್ಟೆಗೆ ❤” ಎಂದು ಬರೆದು ತಮ್ಮ ಅಮ್ಮನ ಫೋಟೋ ಶೇರ್ ಮಾಡಿ, ಬ್ಯುಸಿನೆಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾರ್ತಿಕ್ ಅವರು ಶುರು ಮಾಡುತ್ತಿರುವುದು ಸೋಡಾ ಬ್ಯುಸಿನೆಸ್. ತಮ್ಮದೇ ಹೊಸ ಬ್ರ್ಯಾಂಡ್ ಶುರು ಮಾಡಿದ್ದಾರೆ..
ಹೌದು, ಗೋಲಿಫೈ ಹೆಸರಿನಲ್ಲಿ ಹೊಸ ಬ್ರ್ಯಾಂಡ್ ಶುರು ಮಾಡಿದ್ದು, ಶೀಘ್ರದಲ್ಲೇ ಕಾರ್ತಿಕ್ ಅವರ ಬ್ರ್ಯಾಂಡ್ ಮಾರುಕಟ್ಟೆಗೆ ಬರಲಿದೆ. ನಟನೆ ಜೊತೆಗೆ ಹೋಸ ಉದ್ಯಮ ಶುರು ಮಾಡುತ್ತಿರುವ ಕಾರ್ತಿಕ್ ಅವರಿಗೆ ಶುಭವಾಗಲಿ ಅಂತಿದ್ದಾರೆ ಫ್ಯಾನ್ಸ್. ಬಿಗ್ ಬಾಸ್ ಗೆದ್ದಾಗ ಬಂದ ಹಣದಲ್ಲಿ ತಮ್ಮ ತಾಯಿಗೋಸ್ಕರ ಸ್ವಂತ ಮನೆ ಕಟ್ಟಬೇಕು, ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ಕಾರ್ತಿಕ್ ಅವರ ಆಸೆ ಆಗಿತ್ತು. ಅದರ ಜೊತೆಗೆ ಈಗ ಹೊಸ ಬ್ಯುಸಿನೆಸ್ ಸಹ ಶುರು ಮಾಡಿದ್ದಾರೆ. ಕಾರ್ತಿಕ್ ಅವರಿಗೆ ಅಭಿಮಾನಿಗಳ ಸಪೋರ್ಟ್ ಕೂಡ ಇದೆ. ಮುಂದಿನ ದಿನಗಳಲ್ಲಿ ಒಳ್ಳೇ ಸಿನಿಮಾಗಳಲ್ಲಿ ನಟಿಸಿ, ಎಲ್ಲವೂ ಒಳ್ಳೆಯದಾಗಲಿ, ಇವರ ಬ್ರ್ಯಾಂಡ್ ಹೆಚ್ಚು ಹೆಸರು ಮಾಡಲಿ ಎಂದು ನಾವು ಕೂಡ ಹಾರೈಸೋಣ. ಇದರ ಜೊತೆಗೆ ಒಳ್ಳೇ ಸಿನಿಮಾಗಳ ಅವಕಾಶ ಕೂಡ ಕಾರ್ತಿಕ್ ಅವರಿಗೆ ಸಿಗಲಿ.