ಬಿಗ್ ಬಾಸ್ ಮನೆ ಅನ್ನೋದು ಸ್ಪರ್ಧಿಗಳಿಗೆ ಹೊರಗಡೆ ಒಳ್ಳೆಯ ಪಾಪ್ಯುಲಾರಿಟಿ ತಂದುಕೊಡುವ ಜಾಗ ಎಂದು ಹೇಳಿದರೆ ತಪ್ಪಲ್ಲ. ಈ ಮನೆಗೆ ಹೋಗೋ ಸ್ಪರ್ಧಿಗಳಿಗೆ ಆಟೊಮ್ಯಾಟಿಕ್ ಆಗಿ ಅಭಿಮಾನಿಗಳು ಹೆಚ್ಚಾಗುತ್ತಾರೆ. ಇರೋದು ಕೆಲವೇ ದಿನ ಆದರೂ, ಹೆಚ್ಚು ದಿನ ಆದರೂ, ಅಭಿಮಾನಿಗಳು ಹೆಚ್ಚಾಗೋದರಲ್ಲಿ ಸಂಶಯವಿಲ್ಲ. ಈ ಬಾರಿ ಅಂತು ಬಹುತೇಕ ಎಕ್ಕಾ ಸ್ಪರ್ಧಿಗಳಿಗೆ ಜನಪ್ರಿಯತೆ, ಜನರ ಪ್ರೀತಿ ಎಲ್ಲವೂ ಸಿಕ್ಕಿದೆ. ಹೀಗೆ ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳ ಪೈಕಿ ಭವ್ಯ ಗೌಡ ಸಹ ಒಬ್ಬರು. ಇವರು ಫಿನಾಲೆವರೆಗು ತಲುಪು, 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಎಲಿಮಿನೇಟ್ ಆದರು. ಇದೀಗ ಭವ್ಯ ಗೌಡ ಅವರಿಗೆ ಅಭಿಮಾನಿಗಳಿಂದ ಹೆಚ್ಚು ಪ್ರೀತಿ ಸಿಕ್ಕಿದೆ. ಭವ್ಯ ಅವರಿಗೆ ಒಂದು ಗಿಫ್ಟ್ ಸಹ ಕೊಟ್ಟಿದ್ದಾರೆ ಅವರ ಫ್ಯಾನ್ಸ್. ಏನು ಗೊತ್ತಾ ಆ ಸ್ಪೆಷಲ್ ಗಿಫ್ಟ್?
ಬಿಗ್ ಬಾಸ್ ಶೋನಲ್ಲಿ ಫಿನಾಲೆ ವರೆಗು ಬಂದ ಸ್ಪರ್ಧಿಗಳಲ್ಲಿ ಒಬ್ಬರು ಭವ್ಯ ಗೌಡ. ಗೀತಾ ಧಾರಾವಾಹಿ ಮೂಲಕ ಇವರಿಗೆ ಸಿಕ್ಕಾಪಟ್ಟೆ ಪಾಪ್ಯುಲಾರಿಟಿ ಇತ್ತು. ಸೋಶಿಯಲ್ ಮೀಡಿಯಾದಲ್ಲಿ ಸಹ ಭವ್ಯ ಅವರಿಗೆ ಫಾಲೋವರ್ಸ್ ಹಾಗೂ ಫ್ಯಾನ್ಸ್ ಇದ್ದರು. ಈ ಧಾರಾವಾಹಿ ಮುಗಿದ ಬಳಿಕ ಭವ್ಯ ಗೌಡ ಅವರು ಕಾಣಿಸಿಕೊಂಡಿದ್ದು ಬಿಗ್ ಬಾಸ್ ಶೋ ನಲ್ಲಿ. ಮೊದಲ ದಿನ ಗೊಂಬೆಯ ಹಾಗೆ ಬಂದ ಭವ್ಯ ಗೌಡ, ಫಿನಾಲೆ ವರೆಗು ಬರುತ್ತಾರೆ ಎಂದು ಹೆಚ್ಚು ನಿರೀಕ್ಷೆ ಮಾಡಿರಲಿಲ್ಲ. ಆದರೆ ಭವ್ಯ ಗೌಡ ಫಿನಾಲೆ ವರೆಗು ತಲುಪಿದರು. ಇವರು ಹೆಚ್ಚಾಗಿ ಗುರುತಿಸಿಕೊಂಡಿದ್ದು, ತ್ರಿವಿಕ್ರಂ ಅವರ ಜೊತೆಗಿನ ಫ್ರೆಂಡ್ಶಿಪ್ ಇಂದ ಎಂದು ಹೇಳಿದರು ತಪ್ಪಲ್ಲ. ಭವ್ಯ ತ್ರಿವಿಕ್ರಂ ಫ್ರೆಂಡ್ಶಿಪ್ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಯಿತು. ಇವರಿಬ್ಬರು ಬಹಳ ಕ್ಲೋಸ್ ಆಗಿರುತ್ತಿದ್ದರು.

ಹೆಚ್ಚು ಸಮಯ ಜೊತೆಯಾಗಿ ಕಳೆಯುತ್ತಿದ್ದರು. ಭವ್ಯ ಗೌಡ ಅವರು ಬಿಗ್ ಬಾಸ್ ಜರ್ನಿಯಲ್ಲಿ ಕೆಲವು ಜನರ ಜೊತೆಗೆ ಬಹಳ ಜಗಳ ಆಡಿದ್ದು ಇದೆ. ಮಂಜಣ್ಣ ಅವರ ಜೊತೆಗೆ, ಚೈತ್ರಾ ಅವರ ಜೊತೆಗೆ, ಗೌತಮಿ ಅವರ ಜೊತೆಗೆ ಇವರೆಲ್ಲರ ಜೊತೆಗೆ ಜಗಳದ ಕಾರಣಕ್ಕೆ. ಆದರೆ ಇವರು ಟಾಸ್ಕ್ ಗಳಲ್ಲೂ ಸಹ ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಿದ್ದ ಕಾರಣ ಹೊರಗಿನ ಅಭಿಮಾನಿಗಳಿಗೆ ಇಷ್ಟವಾಗಿದ್ದರು. ಬಿಗ್ ಬಾಸ್ ಮನೆಯ ಒಳಗೆ ಅತಿ ಹೆಚ್ಚು ಕಣ್ಣೀರು ಹಾಕಿದ ಸ್ಪರ್ಧಿ ಭವ್ಯ ಎಂದು ಹೇಳಿದರು ಸಹ ತಪ್ಪಲ್ಲ. ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ಏನನ್ನಾದರೂ ಹೇಳಿದರು ಸಹ, ಕಣ್ಣೀರು ಹಾಕುತ್ತಿದ್ದರು. ಇದರಿಂದ ಕೆಲವರಿಗೆ ಕಿರಿಕಿರಿ ಉಂಟಾಗಿದ್ದು ಇದೆ. ಒಟ್ಟಿನಲ್ಲಿ ಭವ್ಯ ಗೌಡ ಫಿನಾಲೆ ವರೆಗು ತಲುಪಿದರು, 6ನೇ ಸ್ಥಾನಕ್ಕೆ ಎಲಿಮಿನೇಟ್ ಆಗಿ ಹೊರಬಂದರು.
ಭವ್ಯ ಗೌಡ ಬಿಗ್ ಬಾಸ್ ಮನೆಯ ಒಳಗೆ ಇದ್ದಿದ್ದು 118 ದಿನಗಳ ಕಾಲ. ಹೌದು, ಇದು ಬಹಳ ಕಷ್ಟವೇ, ಇಷ್ಟು ದಿವಸಗಳ ಕಾಲ ಬಿಗ್ ಬಾಸ್ ಮನೆಯ ಒಳಗಿರುವುದು ಸುಲಭ ಅಲ್ಲ. ಇನ್ನು ಭವ್ಯ ಗೌಡ ಇಷ್ಟು ದಿವಸಗಳ ಕಾಲ ಇದ್ದಿದ್ದು, ನಿಜಕ್ಕೂ ಮೆಚ್ಚುಗೆ ಸೂಚಿಸುವ ವಿಷಯ. ಇನ್ನು ಭವ್ಯ ಅವರಿಗೆ ಹೊರಗಡೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ಈಗ ಭವ್ಯ ಗೌಡ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದು, ಅವರ ಅಭಿಮಾನಿಗಳು ಭವ್ಯ ಅವರಿಗೆ ಒಂದು ಸುಂದರವಾದ ಗಿಫ್ಟ್ ನೀಡಿದ್ದರು. ಈ ಗಿಫ್ಟ್ ಬಗ್ಗೆ ಭವ್ಯ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಭವ್ಯ ಗೌಡ ಅವರ ಫ್ಯಾನ್ಸ್ ತಮ್ಮ ನೆಚ್ಚಿನ ಟಾಸ್ಕ್ ಕ್ವೀನ್ ಗಾಗಿ, ದೊಡ್ಡ ಫೋಟೋ ಫ್ರೇಮ್ ಒಂದನ್ನು ಗಿಫ್ಟ್ ಆಗಿ ನೀಡಿದ್ದು, ಈ ಫೋಟೋ ತುಂಬಾ ಸುಂದರವಾಗಿದೆ.
ಅಭಿಮಾನಿಗಳು ಈ ಗಿಫ್ಟ್ ಅನ್ನು ನೇರವಾಗಿ ಭವ್ಯ ಅವರಿಗೆ ಕೊಡಬೇಕು ಎಂದು ಮನೆಗೆ ನೇರವಾಗಿ ಹೋಗಿದ್ದಾರೆ, ಆದರೆ ಆ ವೇಳೆ ಭವ್ಯ ಅವರು ಮನೆಯಲ್ಲಿ ಇಲ್ಲದ ಕಾರಣ ಅವರ ಮನೆಯವರ ಕೈಗೆ ಗಿಫ್ಟ್ ಕೊಟ್ಟು ಹೋಗಿದ್ದಾರೆ. ಮನೆಗೆ ಬಂದ ನಂತರ ಭವ್ಯ ಅವರು ಈ ಗಿಫ್ಟ್ ಅನ್ನು ನೋಡಿದ್ದು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ, ನಿಮ್ಮನ್ನೆಲ್ಲ ಬಗಳ ಬೇಗ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ ಭವ್ಯ ಗೌಡ. ಅಭಿಮಾನಿಗಳು ಇವರನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ. ಭವ್ಯ ಅವರು ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುವುದಕ್ಕೆ ಬರಲಿದ್ದಾರೆ.