ನಟಿ ಗೌತಮಿ ಜಾಧವ್ ಅವರು ಬಿಗ್ ಬಾಸ್ ಇಂದ ಎಲಿಮಿನೇಟ್ ಆಗಿ ಕಳೆದ ಭಾನುವಾರ ಬಂದಿದ್ದಾರೆ. ಇವರು ಫಿನಾಲೆ ತಲುಪುತ್ತಾರೆ ಎನ್ನುವ ನಿರೀಕ್ಷೆ ಅವರ ಅಭಿಮಾನಿಗಳಲ್ಲಿ ಮತ್ತು ಜನರಲ್ಲಿ ಇತ್ತು. ಆದರೆ ಗೌತಮಿ ಅವರು ಫಿನಾಲೆ ವೀಕ್ ತಲುಪುವ ವೇಳೆ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಗೌತಮಿ ಜಾಧವ್ ಅವರು ಬಿಗ್ ಬಾಸ್ ಮನೆಯ ಒಳಗೆ ಇದ್ದಷ್ಟು ದಿವಸ ಪಾಸಿಟಿವ್ ಆಗಿ ಇರಬೇಕು ಎಂದು ಅದೇ ರೀತಿ ಇದ್ದರು. ಕೆಲವರು ಇದನ್ನು ಫೇಕ್ ಅಂತ ಕರೆದಿದ್ದು ಇದೆ. ಇದೆಲ್ಲಾ ಏನೇ ಆದರೂ ಗೌತಮಿ ಅವರು ಬಹಳಷ್ಟು ಜನರ ಅಭಿಮಾನಿಗಳ ಮನಸ್ಸನ್ನ ಗೆದ್ದಿರುವುದು ಅಂತೂ ಸುಳ್ಳಲ್ಲ. ಇಂಥ ಗೌತಮಿ ಅವರ ಬಗ್ಗೆ ಯಮುನಾ ಶ್ರೀನಿಧಿ ಒಂದು ಆರೋಪ ಮಾಡಿದ್ದರು.

ಗೌತಮಿ ಅವರು ಮರಾಠಿ ಹುಡುಗಿ, ಅವರಿಗೆ ಕನ್ನಡ ಓದೋಕೆ ಬರೋದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಇಂದ ಬರುವ ಪತ್ರಗಳನ್ನು ಓದುವುದಕ್ಕೆ ಬೇರೆಯವರಿಗೆ ಕೊಡುತ್ತಿದ್ದರು, ಅವರು ಓದುತ್ತಿರಲಿಲ್ಲ. ಬಿಗ್ ಬಾಸ್ ಮನೆಯ ಒಳಗೆ ಕನ್ನಡ ರಾಜ್ಯೋತ್ಸವದ ಆಚರಣೆ ನಡೆದಾಗ ಕೂಡ ಗೌತಮಿ ಅವರು ನಾಡಗೀತೆ ಹಾಡಲಿಲ್ಲ, ಬೇರೆ ಎಲ್ಲರೂ ಹಾಡಿದರು. ಹೊರ ದೇಶಕ್ಕೆ ಹೋಗಿ ಅಲ್ಲಿನ ಭಾಷೆಯ ಭಕ್ತಿಗೀತೆ ಬರದೇ ನಾವು ನಿಂತುಕೊಳ್ಳುತ್ತೇವೆಲ್ಲಾ ಗೌತಮಿ ಅವರು ಮಾಡಿದ್ದು ಆ ರೀತಿ ಇತ್ತು ಎಂದು ಯಮುನಾ ಶ್ರೀನಿಧಿ ಅವರು ಒಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೀಗ ಗೌತಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ಗೌತಮಿ ಜಾಧವ್ ಅವರು ಕಳೆದ ಭಾನುವಾರ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ಇವರ ಕುಟುಂಬದವರು ಮತ್ತು ಸ್ನೇಹಿತರು ಗೌತಮಿ ಅವರನ್ನು ಬಹಳ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಇನ್ನು ಗೌತಮಿ ಅವರು ಬಿಗ್ ಬಾಸ್ ಮನೆಯಿಂದ ಬರುತ್ತಿದ್ದ, ತಾವು ಆರಾಧಿಸುವ ವನದೇವಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಬಂದಿದ್ದಾರೆ. ಹಾಗೆಯೇ ಹಲವು ಸಂದರ್ಶನಗಳಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ. ಗೌತಮಿ ಅವರು ಒಂದು ಸಂದರ್ಶನದಲ್ಲಿ ಯಮುನಾ ಅವರು ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ಗೌತಮಿ ಅವರು ಹೇಳಿದ್ದೇನು ಎಂದರೆ..

“ನನಗೆ ಕನ್ನಡ ಚೆನ್ನಾಗಿ ಬರುತ್ತದೆ, ಓದಲು ಕೂಡ ಬರುತ್ತದೆ. 10ನೇ ತರಗತಿ ವರೆಗು ಕನ್ನಡ ಓದಿದ್ದೇನೆ, ಅಭಿನಯ ಮಾಡಿದ್ದು ಕನ್ನಡದಲ್ಲೇ, ಕನ್ನಡ ಸ್ಕ್ರಿಪ್ಟ್ ಓಡಿಕೊಂಡೇ ಪಾತ್ರ ಮಾಡುತ್ತಿದ್ದದ್ದು. ಎಲ್ಲರೂ ನನಗೆ ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಎಂದೇ ಹೇಳುತ್ತಿದ್ದರು. ನೀವು ಮಾತನಾಡುವ ಶೈಲಿ ಇಷ್ಟ ಅಂತ ಹೇಳುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಕನ್ನಡ ಯಾಕೆ ಓದುತ್ತಿರಲಿಲ್ಲ ಅಂದರೆ ನನಗಿಂತ ಚೆನ್ನಾಗಿ ಓದುವ ಸ್ಪರ್ಧಿಗಳು ಇದ್ರು ಅಂತ. ನಾನು ಓದಿ ಏನಾದರೂ ತಪ್ಪಾಗಿ ಮನೆಯ ಎಲ್ಲಾ ಸ್ಪರ್ಧಿಗಳು ದಾರಿ ತಪ್ಪೋದು ಬೇಡ ಎಂದು ನಾನು ಆ ಯಾವುದೇ ಪತ್ರಗಳನ್ನು ಓದುತ್ತಿರಲಿಲ್ಲ. ಚೆನ್ನಾಗಿ ಓದುವವರಿಗೆ ಕೊಡುತ್ತಿದ್ದ.
ಅದರಿಂದ ಎಲ್ಲಾ ಸ್ಪರ್ಧಿಗಳಿಗೂ ಚೆನ್ನಾಗಿ ಅರ್ಥ ಆಗಲಿ ಎಂದು. ನನ್ನ ತಂದೆ ಮರಾಠಿಯವರು ಹಾಗಾಗಿ ಮನೆಯಲ್ಲಿ ಮರಾಠಿ ಮಾತಾಡ್ತೀವಿ. ಕನ್ನಡ ರಾಜ್ಯೋತ್ಸವ ದಿವಸ ನಡೆದಿದ್ದು ಬೇರೆ ಎಲ್ಲಾ ಸ್ಪರ್ಧಿಗಳು ಹಾಡುವಾಗ, ಚೆನ್ನಾಗಿ ಹಾಡು ಬರೋರು ಜೋರಾಗಿ ಹಾಡ್ತಾರೆ, ಶಿಶಿರ್ ಹಾಗೆ ಮಾಡಿದ್ದು, ಪೂರ್ತಿ ಹಾಡು ಬರದೆ ಇರುವವರು ಮೆಲ್ಲಗೆ ಹಾಡುತ್ತಾರೆ. ಅಲ್ಲಿ ಆಗಿದ್ದು ಕೂಡ ಅಷ್ಟೇ. ಯಮುನಾ ಶ್ರೀನಿಧಿ ಅವರು ಯಾಕೆ ಹೀಗೆಲ್ಲಾ ಮಾತಾಡ್ತಾ ಇದ್ದಾರೆ ಗೊತ್ತಿಲ್ಲ..” ಎಂದು ಹೇಳಿದ್ದಾರೆ ಗೌತಮಿ. ಮುಂದಿನ ದಿನಗಳಲ್ಲಿ ಹೊಸ ಪ್ರಾಜೆಕ್ಟ್ ಗಳ ಜೊತೆಗೆ ವೀಕ್ಷಕರನ್ನು ರಂಜಿಸಲು ಬರುತ್ತಾರೆ ಗೌತಮಿ ಜಾಧವ್.



