ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಬಂದು, ಎಲ್ಲರಿಗು ಬಹಳ ಇಷ್ಟವಾದ ಸ್ಪರ್ಧಿಗಳಲ್ಲಿ ಅನುಷಾ ರೈ ಸಹ ಒಬ್ಬರು. ಅನುಷಾ ರೈ ಅವರು ಬಿಗ್ ಬಾಸ್ ಮನೆಯ ಒಳಗೆ ಇದ್ದಷ್ಟು ದಿವಸ ಬಹಳ ಒಳ್ಳೆತನದಲ್ಲಿ ಇದ್ದರು. ಯಾರ ಜೊತೆಗೂ ಜಗಳ ಮಾಡಿಕೊಳ್ಳದೇ, ತಾವಾಯಿತು ತಮ್ಮ ಪಾಡಾಯ್ತು ಎನ್ನುತ್ತಲೇ ಇರುತ್ತಿದ್ದರು. ಇವರು ಇನ್ನಷ್ಟು ದಿವಸ ಬಿಗ್ ಬಾಸ್ ಮನೆಯ ಒಳಗೆ ಇರಬೇಕು ಎನ್ನುವುದು ಇವರ ಅಭಿಮಾನಿಗಳ ಆಸೆ ಆಗಿತ್ತು. ಆದರೆ ಅದು ಸಾಧ್ಯ ಆಗಲಿಲ್ಲ. ಬಿಗ್ ಬಾಸ್ ಇಂದ ಹೊರಬಂದ ನಂತರ ಅನುಷಾ ಅವರು ಕೆಲ ದಿನಗಳ ಕಾಲ ಇಂಟರ್ವ್ಯೂ ಗಳಲ್ಲಿ ಬ್ಯುಸಿ ಆಗಿದ್ದರು. ಈಗ ಪ್ರವಾಸದಲ್ಲಿ ಬ್ಯುಸಿ ಆಗಿದ್ದಾರೆ..

ಅನುಷಾ ಅವರು ಬಹಳ ಕ್ಯೂಟ್ ಆದ ಹುಡುಗಿ, ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ಇವರ ಮತ್ತು ಧರ್ಮ ಕೀರ್ತಿ ರಾಜ್ ಅವರ ಫ್ರೆಂಡ್ಶಿಪ್ ಎಲ್ಲರಿಗೂ ಸಹ ಬಹಳ ಇಷ್ಟವಾಗಿತ್ತು. ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡಿದ್ದಾರೆ. ಜನರಿಗೂ ಸಹ ಇವರ ಜೋಡಿ ತುಂಬಾ ಇಷ್ಟವಾಗಿದ್ದು, ಧರ್ಮ ಕೀರ್ತಿ ರಾಜ್ ಅವರು ಹೊರಗಡೆ ಬಂದ ಮುಂದಿನ ವಾರವೇ ಅನುಷಾ ರೈ ಸಹ ಎಲಿಮಿನೇಟ್ ಆಗಿ ಹೊರಗಡೆ ಬಂದರು. ಹೊರಗಡೆ ಬಂದ ನಂತರ ಇವರಿಗೆ ಜನರಿಂದ ಒಳ್ಳೆಯ ಸಪೋರ್ಟ್ ಸಿಗುತ್ತಿದೆ. ಜನರ ಪ್ರೀತಿ ಸಹ ಸಿಕ್ಕಿದೆ. ಇದನ್ನು ಅನುಷಾ ತುಂಬಾ ಎಂಜಾಯ್ ಸಹ ಮಾಡಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಇರುವ ಅನುಷಾ ಅವರು ಈಗ ಟ್ರಿಪ್ ನಲ್ಲಿದ್ದಾರೆ.
ಅನುಷಾ ಅವರು ಟ್ರಿಪ್ ಗೆ ಹೋಗಿರುವುದು ಚೈನಾಗೆ. ಚೈನಾಗೆ ಸೇರಿದ ಹಾಂಗ್ ಕಾಂಗ್ ನಲ್ಲಿ ಅನುಷಾ ಅವರು ಟ್ರಿಪ್ ನಲ್ಲಿದ್ದು, ಅಲ್ಲಿಂದಲೇ ಜನರಿಗೆ ಅಪ್ಡೇಟ್ ಮಾಡಿದ್ದಾರೆ. ಚೈನಾದಲ್ಲಿ ಈಗ hmpv ವೈರಸ್ ವಿಷಯ ಭಾರಿ ಚರ್ಚೆಗೆ ಕಾರಣವಾಗಿದೆ. ಆ ವೈರಸ್ ತೀವ್ರತೆ ಇಲ್ಲ, ಕೋವಿಡ್ ಅಷ್ಟು ಡೇಂಜರಸ್ ಅಲ್ಲ ಎಂದು ವೈದ್ಯಕೀಯ ಇಲಾಖೆ ತಿಳಿಸಿದ್ದರು ಸಹ, ಎಲ್ಲರಿಗೂ ಒಂದು ರೀತಿ ಭಯವಿದೆ. ಏನಾಗುತ್ತೋ, ಮತ್ತೆ ಪ್ಯಾಂಡಮಿಕ್ ಆಗುವ ಸಾಧ್ಯತೆ ಇದೆಯಾ ಎನ್ನುವ ಭಯ, ಆತಂಕ ಜನರಲ್ಲಿ ಕಾಡುತ್ತಿದೆ. ಭಾರತದಲ್ಲಿ ಸಹ hmpv ಕೇಸ್ ಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಜನರಲ್ಲಿ ಆತಂಕ ಜಾಸ್ತಿಯಾಗಿತ್ತು.
ಆದರೆ ಅನುಷಾ ಅವರು ಹಾಂಗ್ ಕಾಂಗ್ ಇಂದ ವಿಡಿಯೋ ಮಾಡಿದ್ದು, ಇಲ್ಲಿ ಎಲ್ಲವೂ ನಾರ್ಮಲ್ ಆಗಿದೆ, ಪ್ಯಾಂಡಮಿಕ್ ಅನ್ನೋ ಹಾಗೆ ಭಯದ ವಾತಾವರಣ ಇಲ್ಲ, ಯಾರು ಆತಂಕ ಪಡಬೇಡಿ. ನಾವು ಇಂಡಿಯನ್ಸ್ ಎಲ್ಲೇ ಇದ್ರು ಸೇಫ್ ಆಗಿರ್ತೀವಿ. ನಮಗೆ ಏನು ಆಗೋದಿಲ್ಲ. ಎಲ್ಲರೂ ಸೇಫ್ ಆಗಿರೋಣ ಎಂದು ಹೇಳಿ, ಅಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ ಎಂದು ತಿಳಿಸಿಕೊಟ್ಟಿದ್ದಾರೆ. ಹಾಗಾಗಿ ನಾವು ಸಹ ಪಡುವ ಹಾಗಿಲ್ಲ. ಇನ್ನು ಅನುಷಾ ರೈ ಅವರು ಹಾಂಗ್ ಕಾಂಗ್ ನಲ್ಲಿ ಇರುವ ಕಾರಣ, ಹಲವಾರು ಜನರು ಅಲ್ಲಿ ನೀವು ಹುಷಾರಾಗಿ ಇರಿ, ಬೇಗ ವಾಪಸ್ ಬನ್ನಿ ಎಂದು ಹೇಳಿದ್ದಾರಂತೆ.

ಮೆಸೇಜ್ ಮಾಡಿರುವ ಅಭಿಮಾನಿಗಳಿಗೆ ತಾವು ಸೇಫ್ ಆಗಿರುವಿದಾಗಿ ಸಹ ತಿಳಿಸಿದ್ದಾರೆ ಅನುಷಾ ರೈ. ತಮ್ಮೊಡನೆ ಮಾಸ್ಕ್ ಇದ್ದು, ಸದಾ ಮಾಸ್ಕ್ ಧರಿಸಿಯೇ ಓಡಾಡುತ್ತಿರುವುದಾಗಿ ತಿಳಿಸಿರುವ ಅನುಷಾ ಅವರು, ತಮಗೆ ಮೆಸೇಜ್ ಮಾಡಿ ಕಾಳಜಿ ತೋರಿಸಿರುವ ಎಲ್ಲರಿಗೂ ಸಹ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಆದಷ್ಟು ಬೇಗ ಜೋಪಾನವಾಗಿ ಭಾರತಕ್ಕೆ ವಾಪಸ್ ಬರುತ್ತೇನೆ ಎಂದು ತಿಳಿಸಿದ್ದಾರೆ ಅನುಷಾ ರೈ. ಅನುಷಾ ಅವರು ಕೊಟ್ಟಿರುವ ಈ ಅಪ್ಡೇಟ್ ಜನರಿಗೆ ಸ್ವಲ್ಪ ಆತಂಕ ಕಡಿಮೆ ಮಾಡಿದೆ ಎಂದರೆ ತಪ್ಪಲ್ಲ. ಚೈನಾ ಇಂದ ಮತ್ತೆ ಹೊಸ ತಲೆ ನೋವು ಬರುತ್ತದೆ ಎಂದು ಎಲ್ಲರೂ ಭಯ ಪಟ್ಟಿದ್ದರು. ಆದರೆ ಅಂಥ ಸಮಸ್ಯೆ ಇಲ್ಲ ಎನ್ನುವುದು ಎಲ್ಲರಿಗೂ ಈಗ ಸಮಾಧಾನ ತಂದಿದೆ.



