ಅಂಕರ್ ಅನುಶ್ರೀ ಅಂದ್ರೆ ಕರ್ನಾಟಕದಲ್ಲೆಲ್ಲಾ ಅವರ ಹವಾ ಇದೆ. ಪ್ರಸ್ತುತ ಕನ್ನಡದ ಬೆಸ್ಟ್ ಆಂಕರ್ ಇವರು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಅನುಶ್ರೀ ಅವರು ಅಷ್ಟು ಚೆನ್ನಾಗಿ, ಪಟಪಟ ಮಾತಾಡ್ತಾ ತಮಾಷೆಯಾಗಿ ನಿರೂಪಣೆ ಮಾಡೋದು ಎಲ್ಲರಿಗೂ ತುಂಬಾ ಖುಷಿ. ಕನ್ನಡ ಕಿರುತೆರೆ ಹಾಗೂ ಸಿನಿಮಾಗೆ ಸಂಬಂಧಿಸಿದ ಬಹುತೇಕ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರೇ ಆಂಕರಿಂಗ್ ಮಾಡೋದು ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಇಂಥ ಅನುಶ್ರೀ ಅವರು ಸರಿಗಮಪ ವೇದಿಕೆಗೆ ಕಿಚ್ಚ ಸುದೀಪ್ ಅವರು ಬಂದಾಗ ನಾನು ಇನ್ಮೇಲೆ ಆಂಕರಿಂಗ್ ಮಾಡೋದಿಲ್ಲ ಎಂದು ಸ್ಟೇಜ್ ಇಂದ ಕೆಳಗೆ ಇಳಿದು ಬಿಟ್ಟಿದ್ದಾರೆ. ಇದು ಅನುಶ್ರೀ ಅವರ ಫ್ಯಾನ್ಸ್ ಗೆ ಶಾಕ್ ಕೊಟ್ಟಿದೆ ಎಂದರೆ ತಪ್ಪಲ್ಲ..

ಅನುಶ್ರೀ ಅವರಿಗೆ ಈಗ 36 ವರ್ಷ ವಯಸ್ಸು. ಆಂಕರ್ ಆಗಿ 15 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಸಕ್ರಿಯವಾಗಿದ್ದಾರೆ ಅನುಶ್ರೀ. ಜೀಕನ್ನಡ ವಾಹಿನಿಯ ಸೂಪರ್ ಹಿಟ್ ಕಾರ್ಯಕ್ರಮಗಳಿಗೆ ಇವರೇ ನಿರೂಪಣೆ ಮಾಡುವುದು. ಅಷ್ಟೇ ಅಲ್ಲದೇ, ಸಿನಿಮಾ ಕುರಿತಂತೆ ನಡೆಯುವ ಬಹುತೇಕ ಕಾರ್ಯಕ್ರಮಗಳಿಗೆ ಅನುಶ್ರೀ ಅವರೇ ಆಂಕರಿಂಗ್ ಮಾಡುತ್ತಾರೆ. ಈ ರೀತಿ ಇದ್ದಾಗ ಅನುಶ್ರೀ ಅವರು ದಿಢೀರ್ ಎಂದು ಕಿಚ್ಚ ಸುದೀಪ್ ಅವರ ಎದುರು ಇನ್ಮೇಲೆ ನಾನು ಆಂಕರಿಂಗ್ ಮಾಡೋದಿಲ್ಲ ಎಂದು ಹೇಳೋದಕ್ಕೆ ಕಾರಣ ಏನು? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್..
ಕಿಚ್ಚ ಸುದೀಪ್ ಅವರು ಈ ವಾರ ಜೀಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಸುದೀಪ್ ಅವರು, ಅವರ ಪತ್ನಿ ಪ್ರಿಯಾ ಅವರು, ಮಗಳು ಸಾನ್ವಿ ಎಲ್ಲರೂ ಬಂದಿದ್ದರು. ಸುದೀಪ್ ಅವರನ್ನು ಸ್ಟೇಜ್ ಗೆ ಕರೆಸಿದ ಬಳಿಕ, ಅವರು ವೇದಿಕೆಗೆ ಬಂದು ಮೈಕ್ ಹಿಡಿದು ಮಾತನಾಡಲು ಶುರು ಮಾಡಿದ ನಂತರ ಅನುಶ್ರೀ ಅವರು ಇನ್ನು ನಮಗೆ ಏನು ಕೆಲಸವಿಲ್ಲ ಎಂದು ವೇದಿಕೆ ಇಂದ ಇಳಿದು ಕೆಳಗೆ ಹೋಗಿದ್ದಾರೆ, ಅನುಶ್ರೀ ಅವರು ಈ ರೀತಿ ಮಾಡಿದ್ದು, ಈ ಥರ ಹೇಳಿದ್ದು ತಮಾಷೆಗಾಗಿ ಅಷ್ಟೇ. ಹಾಗೆಯೇ ಕಿಚ್ಚ ಸುದೀಪ್ ಅವರ ಮೇಲಿರುವ ಪ್ರೀತಿಯಿಂದ ಕೂಡ ಹೌದು. ಆದರೆ ಅನುಶ್ರೀ ಅವರು ಹೀಗೆ ಮಾಡಿದ್ದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ..

ಕಿಚ್ಚ ಸುದೀಪ್ ಅವರ ಫ್ಯಾನ್ಸ್, ನಮ್ಮ ಬಾಸ್ ಗೆ ಅನುಶ್ರೀ ಅವರು ಎಷ್ಟು ಗೌರವ ಕೊಡ್ತಿದ್ದಾರೆ ಎಂದು ಫಿದಾ ಆಗಿದ್ದಾರೆ. ಇನ್ನು ಸುದೀಪ್ ಅವರು ಬಂದಿದ್ದ ಸರಿಗಮಪ ಸಂಚಿಕೆ ಸೂಪರ್ ಹಿಟ್ ಆಗಿದೆ. ಸುದೀಪ್ ಅವರ ಇಡೀ ಫ್ಯಾಮಿಲಿ ಕಾರ್ಯಕ್ರಮವನ್ನು ತುಂಬಾ ಎಂಜಾಯ್ ಮಾಡಿದರು. ಸುದೀಪ್ ಅವರ ಉತ್ತರ ಕರ್ನಾಟಕದ ಅಭಿಮಾನಿ, ಸುದೀಪ್ ಅವರಿಗಾಗಿ ಒಂದು ಹಾಡನ್ನು ರಚಿಸಿದ್ದರು, ಅದನ್ನು ಕೇಳಿ ಸುದೀಪ್ ಅವರಿಗೆ ಬಹಳ ಸಂತೋಷ ಆಯಿತು. ಹಾಗೆಯೇ ಪ್ರಿಯಾ ಅವರಿಗಾಗಿ ಓಹ್ ಪ್ರಿಯಾ ಓಹ್ ಪ್ರಿಯಾ ಐ ಲವ್ ಲವ್ ಯು ಡಾ ಎಂದು ಹಾಡನ್ನು ಹಾಡಿದರು ಕಿಚ್ಚ ಸುದೀಪ್. ಪ್ರಿಯಾ ಅವರು ಐ ಲವ್ ಯು ಮೋರ್ ಎಂದು ಕೂಡ ಹೇಳಿದರು.
ಅಷ್ಟೇ ಅಲ್ಲದೇ ಸುದೀಪ್ ಅವರ ಮಗಳು ಸಾನ್ವಿ ಅವರು ಅಪ್ಪನಿಗಾಗಿ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ಹಾಡನ್ನು ಹಾಡಿದ್ದು, ಸುದೀಪ್ ಅವರನ್ನು ಭಾವುಕರನ್ನಾಗಿ ಮಾಡಿತು. ಮಗಳ ಹಾಡು ಕೇಳಿ ಕಿಚ್ಚ ಅವರು ಕಣ್ಣೀರು ಸುರಿಸಿದರು. ಹಾಗೆಯೇ ಸುದೀಪ್ ಅವರ ತಾಯಿಯ ಪ್ರತಿಮೆಯನ್ನು ಜೀಕನ್ನಡ ವಾಹಿನಿ ಗಿಫ್ಟ್ ಆಗಿ ನೀಡಿದ್ದಕ್ಕೆ, ಭಾವುಕರಾದ ಸುದೀಪ್ ಅವರು, ಕಣ್ಣೀರು ಹಾಕಿದರು. ಇಷ್ಟೆಲ್ಲಾ ಸ್ಪೆಷಲ್ ಅಂಶಗಳನ್ನು ಒಳಗೊಂಡಿದ್ದ ಸರಿಗಮಪ ಕಾರ್ಯಕ್ರಮಕ್ಕೆ ಸುದೀಪ್ ಅವರು ಬಂದಿದ್ದು ಬಹಳ ಸ್ಪೆಷಲ್ ಆಗಿತ್ತು.