ನಟ ದರ್ಶನ್ ಅವರು ಈಗ ಹೊರಗಡೆ ಇದ್ದಾರೆ, ಆರಾಮಾಗಿ ಜೀವನ ಸಾಗಿಸುತ್ತಾ ಇದ್ದಾರೆ ಎಂದುಕೊಂಡವರಿಗೆ ಈಗ ಬೇಸರದ ಸುದ್ದಿ ಎದುರಾಗಿದೆ. ಸಧ್ಯಕ್ಕೆ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಇರುವ ದರ್ಶನ್ ಅವರು ಅಲ್ಲೇ ರೆಸ್ಟ್ ಮಾಡುತ್ತಿದ್ದಾರೆ. ಆದರೆ ಇದೀಗ ದರ್ಶನ್ ಅವರ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ದರ್ಶನ್ ಅವರು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿನ ಖ್ಯಾತ ಮೂಳೆ ತಜ್ಞರಾದ ಡಾ. ಅಜಯ್ ಹೆಗ್ಡೆ ಅವರು ದರ್ಶನ್ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಈ ಬಾರಿ ಅವರು ನೀಡಿರುವ ಅಪ್ಡೇಟ್ ದರ್ಶನ್ ಅವರ ಫ್ಯಾನ್ಸ್ ಗೆ ಸ್ವಲ್ಪ ಬೇಸರ ತರುವಂಥ ಸುದ್ದಿ ಆಗಿದೆ. ಅಷ್ಟಕ್ಕೂ ವೈದ್ಯರು ಹೇಳಿದ್ದೇನು ಎಂದು ತಿಳಿಯೋಣ ಬನ್ನಿ..
ಡಾ. ಅಜಯ್ ಹೆಗ್ಡೆ ಅವರು ಹೇಳುವ ಅನುಸಾರ, ದರ್ಶನ್ ಅವರಿಗೆ ಇರುವ ಬೆನ್ನು ನೋವಿನ ಸಮಸ್ಯೆ ಈಗ ಸ್ವಲ್ಪ ಗಂಭೀರ ಹಂತವನ್ನು ತಲುಪಿದೆ. ದರ್ಶನ್ ಅವರಿಗೆ Ls5 ಸಮಸ್ಯೆ ಇದ್ದು, ಇದುವರೆಗೂ ಇದು ಸ್ಟೇಜ್ 1 ನಲ್ಲಿತ್ತು, ಆದರೆ ಈಗ ಎರಡನೇ ಹಂತಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ದರ್ಶನ್ ಅವರಿಗೆ ನರಗಳ ಸಮಸ್ಯೆ ಸಹ ಇದ್ದು, ಅದು ಕೂಡ ಹೆಚ್ಚಾಗಿದೆ ಎಂದು ಡಾ. ಅಜಯ್ ತಿಳಿಸಿದ್ದಾರೆ. ಡಾ. ಅಜಯ್ ಅವರ ಮಾತಿನ ಅನುಸಾರ ಈ ಸಮಸ್ಯೆ ಹೀಗೆ ಜಾಸ್ತಿಯಾದರೆ ದರ್ಶನ್ ಅವರಿಗೆ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದ್ದು, ಇದೆ ಕಾರಣಕ್ಕೆ ಅವರ ದೇಹದ ತೂಕ ಹೆಚ್ಚಾಗಿದೆ ಎಂದು ಸಹ ತಿಳಿಸಿದ್ದಾರೆ..

ಪ್ರಸ್ತುತ ದರ್ಶನ್ ಅವರಿಗೆ ಫಿಸಿಯೋಥೆರಪಿ ಮಾಡಿಸಲಾಗುತ್ತಿದೆ. ಇದರಿಂದ ಸಮಸ್ಯೆ ಕಡಿಮೆ ಆಗದೇ ಹೋದರೆ, ದರ್ಶನ್ ಅವರಿಗೆ ಸರ್ಜರಿ ಮಾಡಲೇಬೇಕಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇದರಿಂದ ದರ್ಶನ್ ಅವರ ಫ್ಯಾನ್ಸ್ ಗೆ ಆತಂಕ ಶುರುವಾಗಿದೆ. ದರ್ಶನ್ ಅವರ ಆರೋಗ್ಯ ಗಂಭೀರ ಹಂತವನ್ನು ತಲುಪಿದೆ ಎನ್ನುವುದು ಬೇಸರ ತರಿಸಿದ್ದು, ಅವರ ಆರೋಗ್ಯ ಬೇಗ ಸುಧಾರಿಸಲಿ, ದರ್ಶನ್ ಅವರು ಮತ್ತೆ ಶೂಟಿಂಗ್ ನಲ್ಲಿ ಬೇಗ ಪಾಲ್ಗೊಳ್ಳುವುದಕ್ಕೆ ಶುರುವಾಗಲಿ ಎನ್ನುವುದು ಅಭಿಮಾನಿಗಳ ಆಸೆ ಆಗಿದೆ. ಈಗ ದರ್ಶನ್ ಅವರಿಗೆ ಡಾ. ನವೀನ್ ಟ್ರೀಟ್ಮೆಂಟ್ ಕೊಡುತ್ತಿದ್ದಾರೆ.
ಅವರ ಜೊತೆಗೆ ಡಾ. ಅಜಯ್ ಹೆಗ್ಡೆ ಸಹ ಇದ್ದಾರೆ ಎಂದು ತಿಳಿದುಬಂದಿದೆ. ದರ್ಶನ್ ಅವರು ಫೆಬ್ರವರಿ ಇಂದ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸೂಚನೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಆರೋಗ್ಯದ ಸಮಸ್ಯೆ ಈ ರೀತಿ ಇರುವ ಕಾರಣ ಇಷ್ಟು ಬೇಗ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಕ್ಕೆ ಆಗುತ್ತೋ ಇಲ್ಲವೋ ಎನ್ನುವ ಬಗ್ಗೆ ಇನ್ನೂ ಕೂಡ ಮಾಹಿತಿ ಇಲ್ಲ. ಇನ್ನು ಕಳೆದ ವರ್ಷ ದರ್ಶನ್ ಅವರ ಪಾಲಿಗೆ ಬಹಳ ಕಷ್ಟಕರವಾಗಿತ್ತು, ಜೂನ್ ನಂತರ ರೇಣುಕಾಸ್ವಾಮಿ ಕೇಸ್ ನಲ್ಲಿ ಆಗಿದ್ದೆಲ್ಲವು ಜನರಿಗೆ ಗೊತ್ತೇ ಇದೆ. 6 ತಿಂಗಳ ವನವಾಸದ ನಂತರ ಜಾ*ಮೀನು ಪಡೆದು ಹೊರಬಂದಿದ್ದಾರೆ..
ಇದರಲ್ಲಿ ದರ್ಶನ್ ಅವರ ಜೊತೆಗೆ ನಿಂತು, ಅವರನ್ನು ಹೊರಗಡೆ ಕರೆತರುವವರೆಗು ಜೊತೆಯಲ್ಲೇ ಇದ್ದಿದ್ದು, ಅವರ ಪತ್ನಿ ವಿಜಯಲಕ್ಷ್ಮೀ ಅವರು ಮತ್ತು ದರ್ಶನ್ ಅವರ ಕುಟುಂಬದವರು. ವಿಜಯಲಕ್ಷ್ಮಿ ಅವರ ಬಗ್ಗೆ ಜನರಿಗೆ ಮತ್ತು ದರ್ಶನ್ ಅವರ ಅಭಿಮಾನಿಗಳಿಗೆ ಗೌರವ ಹೆಚ್ಚಾಗಿದೆ ಎಂದರೆ ತಪ್ಪಲ್ಲ. ಇನ್ನುಮುಂದೆ ದರ್ಶನ್ ಅವರು ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಜೊತೆಗೆ ಕುಟುಂಬದ ಜೊತೆಗೆ ಹೆಚ್ಚು ಗಮನ ಕೊಡಬೇಕು ಆಗ ಎಲ್ಲವೂ ಚೆನ್ನಾಗಿರುತ್ತದೆ, ಅವರ ಜೀವನ ಮೊದಲಿನ ಹಾಗೆ ಆಗುತ್ತದೆ ಎನ್ನುವುದು ಅವರ ಅಭಿಮಾನಿಗಳ ಆಶಯ ಆಗಿದೆ. ಇದೆ ರೀತಿ ಆಗುತ್ತಾ ಎಂದು ಕಾದು ನೋಡಬೇಕಿದೆ.