ಇಂದು ಶನಿವಾರ, 4 ಜನವರಿ 2025. ಈ ದಿನ 12 ರಾಶಿಯವರಿಗೆ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರ ದಿನ ಭವಿಷ್ಯ.
ಮೇಷ ರಾಶಿ
ಹಳೆಯ ಹೂಡಿಕೆಯಿಂದ ಉತ್ತಮ ಲಾಭ ದೊರೆಯಲಿದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಅಭಿವೃದ್ಧಿಯಾಗಲಿದೆ. ನೀವು ಕೆಲವು ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವಿರಿ. ನಿಮ್ಮ ಸಂಬಂಧಿಕರೊಬ್ಬರು ನಿಮ್ಮನ್ನು ಭೇಟಿಯಾಗಲು ಬರಬಹುದು. ತಂದೆಯೊಂದಿಗೆ ಮನಸ್ತಾಪ ಉಂಟಾಗಬಹುದು. ಮನಸ್ಸಿನಲ್ಲಿ ಏನೋ ಗೊಂದಲವಿರುತ್ತದೆ. ನಿಮ್ಮ ಆಲೋಚನೆ ಮತ್ತು ತಿಳವಳಿಕೆಯಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಯಾವುದೇ ಕೆಲಸದ ಬಗ್ಗೆ ಹೆಚ್ಚು ಉತ್ಸುಕರಾಗಿರಬಾರದು.
ವೃಷಭ ರಾಶಿ
ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ನಿಮ್ಮ ಸಂಗಾತಿಯಿಂದ ನೀವು ಉಡುಗೊರೆಯನ್ನು ಪಡೆಯಬಹುದು, ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರು ಹೆಚ್ಚು ಶ್ರಮಿಸಬೇಕಾಗುತ್ತದೆ. ಪ್ರೀತಿಯಲ್ಲಿರುವವರು ತಮ್ಮ ಸಂಗಾತಿಯೊಂದಿಗಿನ ಮನಸ್ತಾಪವನ್ನು ಸರಿಪಡಿಸಿಕೊಳ್ಳಲಿದ್ದಾರೆ. ಅತಿಯಾದ ಕೆಲಸದಿಂದ ತಲೆನೋವು, ಆಯಾಸದಿಂದ ಬಳಲುತ್ತೀರಿ.
ಮಿಥುನ ರಾಶಿ
ಸಾಲದ ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಬೇಕು. ನೀವು ತೆಗೆದುಕೊಂಡ ಆತುರದ ನಿರ್ಧಾರಕ್ಕೆ ನೀವು ವಿಷಾದಿಸುತ್ತೀರಿ. ವಾಹನಗಳನ್ನು ಬಳಸುವಾಗ ಜಾಗರೂಕರಾಗಿರಿ. ನೀವು ಕೆಲಸದಲ್ಲಿ ಶತ್ರುಗಳು ಉದ್ಭವಿಸಬಹುದು, ಅವರನ್ನು ನೀವು ಗುರುತಿಸಬೇಕಾಗಿರುವುದು ಬಹಳ ಅವಶ್ಯಕ. ನೀವು ಮತ್ತೊಬ್ಬರಿಗೆ ಒಳ್ಳೆಯದನ್ನೇ ಬಯಸಿದರೂ ಜನರು ನಿಮ್ಮನ್ನು ಸ್ವಾರ್ಥಿ ಎನ್ನಬಹುದು. ಸಣ್ಣ ಲಾಭದ ಯೋಜನೆಗಳಿಗೆ ಸಹ ನೀವು ಗಮನ ಹರಿಸಬೇಕು.
ಕಟಕ ರಾಶಿ
ಯಾವುದೇ ಸ್ಪರ್ಧೆಗೆ ತಯಾರಿ ನಡೆಸಲು ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಕುಟುಂಬದ ಸದಸ್ಯರ ವೃತ್ತಿಗೆ ಸಂಬಂಧಿಸಿದಂತೆ ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ಉದ್ಯೋಗಕ್ಕಾಗಿ ಪ್ರಯತ್ನ ಮಾಡುವ ಜನರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಕೆಲವು ಹೊಸ ಯೋಜನೆಗಳೊಂದಿಗೆ ನೀವು ಮುಂದುವರಿಯುತ್ತೀರಿ. ನಿಮ್ಮ ಸಹೋದರ ಸಹೋದರಿಯರಿಂದ ನೀವು ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಕುಟುಂಬದ ಸದಸ್ಯರೊಂದಿಗೆ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳದ ದಿನವಾಗಿರುತ್ತದೆ. ನಿಮ್ಮ ಯಾವುದೇ ಹಳೆಯ ವಹಿವಾಟು ಇತ್ಯರ್ಥವಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ಇದ್ದ ಮನಸ್ತಾಪ ದೂರವಾಗುತ್ತದೆ. ಕಚೇರಿಯಲ್ಲಿ ಟೀಮ್ವರ್ಕ್ ಮೂಲಕ ಕೆಲಸ ಮಾಡುವ ಮೂಲಕ, ನೀವು ಯಾವುದೇ ಕೆಲಸವನ್ನು ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಮನೆಗೆ ಅತಿಥಿ ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಉತ್ತಮ ದಿನವಾಗಲಿದೆ. ನಿಮ್ಮ ಯಾವುದೇ ಕೆಲಸವು ಹಣದ ಕಾರಣದಿಂದಾಗಿ ಬಾಕಿ ಉಳಿದಿದ್ದರೆ, ಅದನ್ನು ಪೂರ್ಣಗೊಳಿಸಬಹುದು. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ನೀವು ಹೊಸ ಕೆಲಸವನ್ನು ಪ್ರಾರಂಭಿಸುವುದು ಒಳ್ಳೆಯದು. ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತವೆ. ದೂರದಲ್ಲಿರುವ ಕುಟುಂಬದ ಸದಸ್ಯರ ನೆನಪುಗಳು ನಿಮ್ಮನ್ನು ಕಾಡುತ್ತಿರಬಹುದು. ನಿಮ್ಮ ಕೆಲಸದಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನೀವು ಉದ್ಯೋಗ ಬದಲಿಸಬಹುದು.
ತುಲಾ ರಾಶಿ
ಆಹಾರದ ಬಗ್ಗೆ ಸಂಪೂರ್ಣ ಗಮನ ಹರಿಸುವ ದಿನವಾಗಿರುತ್ತದೆ. ನಿಮ್ಮ ಕೆಲಸದ ಜೊತೆಗೆ ಕೆಲವು ಅರೆಕಾಲಿಕ ಕೆಲಸವನ್ನು ಮಾಡಲು ನೀವು ಯೋಜಿಸುತ್ತಿದ್ದರೆ, ನೀವು ಅದಕ್ಕಾಗಿ ಸಮಯವನ್ನು ಹೊಂದಿಸಿಕೊಳ್ಳುವಿರಿ. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ತಾಯಿಯೊಂದಿಗೆ ಘರ್ಷಣೆ ಉಂಟಾಗುತ್ತದೆ. ನೀವು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸರ್ಕಾರದ ಕೆಲವು ಯೋಜನೆಗಳ ಲಾಭವನ್ನು ನೀವು ಪಡೆಯುತ್ತೀರಿ.
ವೃಶ್ಚಿಕ ರಾಶಿ
ಕೆಲಸದ ಕಾರಣ ನೀವು ಇದ್ದಕ್ಕಿದ್ದಂತೆ ಪ್ರವಾಸಕ್ಕೆ ಹೋಗಬೇಕಾಗಬಹುದು. ಹಳೆಯ ಸಾಲದ ಮೊತ್ತ ತೀರಲಿದೆ. ನೀವು ಪಾಲುದಾರಿಕೆಯಲ್ಲಿ ಕೆಲಸಗಳನ್ನು ಮಾಡುವುದು ಒಳ್ಳೆಯದು. ಬಹಳ ಸಮಯದ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ. ನಿಮ್ಮ ಮಕ್ಕಳ ಕಡೆಯಿಂದ ನೀವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಯಾವುದೇ ಕಾನೂನು ವಿಷಯಗಳು ದೀರ್ಘಕಾಲದವರೆಗೆ ವಿವಾದದಲ್ಲಿದ್ದರೆ, ನೀವು ಅದರಲ್ಲಿ ಜಯ ಪಡೆಯುತ್ತೀರಿ.
ಧನು ರಾಶಿ
ನಿಮ್ಮ ಕೆಲಸದಿಂದ ನೀವು ಹೊಸ ಗುರುತನ್ನು ಪಡೆಯುತ್ತೀರಿ. ಹಿಂದೆ ನೀವು ಕಳೆದುಕೊಂಡಿರುವ ವಸ್ತು ಮರಳಿ ವಾಪಸ್ ದೊರೆಯಲಿದೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ಕೆಲವು ದೊಡ್ಡ ಸಾಧನೆಗಳನ್ನು ಸಾಧಿಸಬಹುದು. ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ಮನಸ್ಸಿನಲ್ಲಿ ಕೆಲವು ಗೊಂದಲಗಳಿರುತ್ತವೆ. ಇದು ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ತರುತ್ತದೆ. ಪ್ರೀತಿಯಲ್ಲಿರುವ ಜನರು ತಮ್ಮ ಸಂಗಾತಿಯನ್ನು ಕುಟುಂಬದ ಸದಸ್ಯರಿಗೆ ಪರಿಚಯಿಸಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ವ್ಯಾಪಾರ ವಿಷಯಗಳಲ್ಲಿ ಏರಿಳಿತಗಳ ಪೂರ್ಣ ದಿನವಾಗಲಿದೆ, ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದಿಂದ ಹೊಸ ಗುರುತನ್ನು ಪಡೆಯುತ್ತಾರೆ. ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳೂವಾಗ ಬಹಳ ಯೋಚಿಸಬೇಕು. ನಿಮ್ಮ ಯಾವುದೇ ಆಸೆ ಈಡೇರಬಹುದು, ಅದು ನಿಮಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಶತ್ರುಗಳು ನಿಮ್ಮ ಕೆಲಸವನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯ ಜನರು ವಹಿವಾಟಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ನೀವು ಹಣದ ವ್ಯವಹಾರಗಳನ್ನು ಬಹಳ ಚಿಂತನಶೀಲವಾಗಿ ಮಾಡಬೇಕಾಗುತ್ತದೆ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲಿದ್ದೀರಿ. ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಗಮನ ಕೊಡಿ. ಕಚೇರಿಯಲ್ಲಿ ವಾದ ವಿವಾದದಿಂದ ದೂರ ಇರಿ, ಇಲ್ಲದಿದ್ದರೆ ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳು ಉದ್ಭವಿಸಬಹುದು.
ಮೀನ ರಾಶಿ
ಮೀನ ರಾಶಿಯವರ ದೀರ್ಘಕಾಲದ ಬಾಕಿ ಇರುವ ಕೆಲಸ ಪೂರ್ಣಗೊಳ್ಳಲಿದೆ. ಆಸ್ತಿ ಖರೀದಿಸುವ ಯೋಜನೆ ಇದ್ದರೆ ನೀವು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದೀರಿ, ಇದರಿಂದ ಕುಟುಂಬ ಸದಸ್ಯರು ಸಂತೋಷವಾಗಿರುತ್ತಾರೆ. ನೀವು ಬಡವರ ಸೇವೆಗೆ ಸಹಾಯ ಮಾಡುತ್ತೀರಿ, ಅದು ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆಯುತ್ತೀರಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.