ನಮಗೆಲ್ಲ ಗೊತ್ತಿರುವ ಹಾಗೆ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದರೂ, ಏನನ್ನೇ ಶುರು ಮಾಡಬೇಕು ಎಂದರೂ ಅಥವಾ ಯಾವುದೇ ವಿಘ್ನಗಳಿಂದ ದೂರ ಇರಬೇಕು ಎಂದರೂ ನಾವು ಗಣಪತಿಯ ಮೊರೆ ಹೋಗುತ್ತೇವೆ. ಎಲ್ಲಾ ದೇವರುಗಳಿಗಿಂತ ಮೊದಲು ಪೂಜೆ ಆಗುವುದು ಗಣಪತಿಗೆ. ಗಣೇಶನನ್ನು ಬೇಡಿಕೊಂಡರೆ, ಭಕ್ತರ ಇಷ್ಟಾರ್ಥ ಯಾವುದೇ ಅಡ್ಡಿ ಆತಂಕ ಇಲ್ಲದೆ ನೆರವೇರುತ್ತದೆ. ಗಣಪತಿಗೆ ಈ ಹೆಸರು ಹೇಗೆ ಬಂತು ಅನ್ನೋದು ಹಲವರಿಗೆ ಗೊತ್ತಿಲ್ಲ, ಮೊದಲಿಗೆ ಈ ಹೆಸರಿನ ಹಿಂದಿರುವ ಕಥೆ ತಿಳಿದುಕೊಂಡು ನಂತರ ಗಣಪತಿಗೆ ಗರಿಕೆ ಹುಲ್ಲನ್ನು ಅರ್ಪಣೆ ಮಾಡೋದು ಯಾಕೆ ಅನ್ನೋದರ ಅರ್ಥವನ್ನು ತಿಳಿಯೋಣ..
ಶಿವ ಮತ್ತು ಪಾರ್ವತಿ ಇಬ್ಬರು ಸಹ ತಮ್ಮ ಮಕ್ಕಳು ಗಣೇಶ ಮತ್ತು ಸುಬ್ರಹ್ಮಣ್ಯ ಇಬ್ಬರಲ್ಲಿ ಯಾರು ಶ್ರೇಷ್ಠ ಎಂದು ತಿಳಿಯುವುದಕ್ಕೆ ಒಂದು ಸರ್ಧೆಯನ್ನಿಟ್ಟರು, ಮೊದಲು ಯಾರು ಇಡೀ ಬ್ರಹ್ಮಾಂಡವನ್ನು ಸುತ್ತಿ ಬರುತ್ತಾರೋ ಅವರೇ ಶ್ರೇಷ್ಠ ಎಂದು ಸ್ಪರ್ಧೆ ಇಟ್ಟರು. ಸುಬ್ರಹ್ಮಣ್ಯ ತನ್ನ ವಾಹನ ನವಿಲಿನ ಜೊತೆಗೆ ಬ್ರಹ್ಮಾಂಡ ಸುತ್ತಲೂ ಹೋಗುತ್ತಾನೆ. ಆದರೆ ಗಣೇಶ ತನ್ನ ತಾಯಿಯನ್ನು ನಿಲ್ಲಿಸಿ, ಅವರಿಬ್ಬರ ಸುತ್ತ ಪ್ರದಕ್ಷಿಣೆ ಹಾಕಿ, ತಂದೆ ತಾಯಿಯೇ ತನ್ನ ಬ್ರಹ್ಮಾಂಡ ಎಂದು ಹೇಳುತ್ತಾನೆ. ಮಗನ ಈ ಮಾತನ್ನ ಕೇಳಿ ಶಿವ ಪಾರ್ವತಿ ಇಬ್ಬರಿಗೂ ತುಂಬಾ ಸಂತೋಷವಾಗುತ್ತದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಆಗ ಇಬ್ಬರು ಸೇರಿ ಮಗನಿಗೆ ಗಣಪತಿ ಎಂದು ಹೆಸರಿಡುತ್ತಾರೆ. ಗಣಪತಿ ಎಂದರೆ ಎಲ್ಲಾ ದೇವರುಗಳಿಗೆ ಅಧಿಪತಿ. ಎಲ್ಲರಿಗಿಂತ ಮೊದಲು ಗಣೇಶನ ಪೂಜೆ ನಡೆಯಬೇಕು ಎಂದು ಆಗುತ್ತದೆ. ಒಂದು ವಾಹನ ಖರೀದಿ ಮಾಡುವ ಯೋಚನೆ ಇದ್ದರೆ, ಮನೆ ಕಟ್ಟುವ ಯೋಚನೆ ಇದ್ದರೆ ಅಥವಾ ಇನ್ನೇನೇ ಯೋಚನೆ ಇದ್ದರೂ ಮೊದಲಿಗೆ ಎಲ್ಲರೂ ಗಣಪತಿಯನ್ನ ಪ್ರಾರ್ಥಿಸುತ್ತಾರೆ. ಗಣಪತಿಗೆ ಬೇಡಿಕೆ ಇಟ್ಟರೆ, ಯಾವುದೇ ವಿಘ್ನ ಎದುರು ಬಂದರು ಅದನ್ನೆಲ್ಲ ತಡೆದು ನಿಮ್ಮ ಆಸೆಗಳನ್ನು ನೆರವೇರಿಸುತ್ತಾನೆ. ಇನ್ನು ಗಣೇಶನ ಪೂಜೆ ಮಾಡುವಾಗ ಗಣಪತಿಗೆ ಇಷ್ಟವಾಗುವ ಹೂವು ಯಾವುದು ಎನ್ನುವ ಪ್ರಶ್ನೆ ಹಲವರಲ್ಲಿ ಇದೆ.
ಅದಕ್ಕೆ ಉತ್ತರ ಕೆಂಪು ಹೂವುಗಳು, ಕೆಂಪು ಹೂವುಗಳನ್ನು ಗಣೇಶನಿಗೆ ಅರ್ಪಿಸಿದರೆ, ಗಣೇಶನಿಗೆ ತುಂಬಾ ಸಂತೋಷವಾಗಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ಸಹ ಹೇಳುತ್ತಾರೆ. ಇನ್ನು ಗಣೇಶನಿಗೆ ಪ್ರಿಯವಾದದ್ದು ಗರಿಕೆ ಹುಲ್ಲು, ಇದನ್ನು ಯಾಕೆ ಅರ್ಪಿಸಬೇಕು ಎನ್ನುವುದಕ್ಕೆ ವಿಶೇಷ ಕಾರಣ ಇದೆ. ಒಂದು ಸಾರಿ ಗಣಪತಿಗೆ ತುಂಬಾ ಹಸಿವಾಗಿ ತಿನ್ನಲು ಏನಾದರೂ ಬೇಕು ಎಂದು ಪಾರ್ವತಿಯನ್ನು ಕೇಳಿದಾಗ, ಅಲ್ಲೇ ಬೆಳೆದಿದ್ದ ಗರಿಕೆ ಹುಲ್ಲನ್ನು ತಾಯಿ ಪಾರ್ವತಿ ಮಗನಿಗೆ ನೀಡುತ್ತಾಳೆ. ಇದರಿಂದ ಗಣಪತಿಯ ಹಸಿವು ನೀಗಿ ಸಂತೋಷವಾಗುತ್ತದೆ. ಈ ಕಾರಣಕ್ಕೆ ಗಣಪತಿಗೆ ಗರಿಕೆ ಹುಲ್ಲನ್ನು ಅರ್ಪಿಸಿದರೆ, ಸಂತುಷ್ಟವಾಗಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ.
ಹಾಗೆಯೇ ಹೋಮ ಮಾಡುವ ವೇಳೆ ಗಣಪತಿಗೆ ಗರಿಕೆ ಹುಲ್ಲನ್ನು ಅರ್ಪಿಸಿದರೆ, ನಿಮ್ಮನ್ನು ಕುಬೇರನನ್ನಾಗಿ ಮಾಡುತ್ತಾನೆ ಗಣೇಶ. ಲಕ್ಷ್ಮೀದೇವಿಯ ಆಶೀರ್ವಾದ ನಿಮಗೆ ದೊರೆಯುತ್ತದೆ. ಹಾಗಾಗಿ ಹೋಮ ಮಾಡುವ ವೇಳೆ, ಗಣೇಶನಿಗೆ ಗರಿಕೆ ಹುಲ್ಲನ್ನು ಅರ್ಪಿಸಿ. ಗಣೇಶನಿಗೆ ಮೋದಕ ಅಂದರೆ ಬಹಳ ಇಷ್ಟ, ಯಾರು ತಮ್ಮ ಮನೆಯಲ್ಲಿ ಮಡಿಯಿಂದ ಮೋದಕವನ್ನು ಮಾಡಿ, ಗಣೇಶನಿಗೆ ನೈವೇದ್ಯಕ್ಕೆ ಇಡುತ್ತಾರೋ, ಅವರ ಎಲ್ಲಾ ಇಷ್ಟಾರ್ಥಗಳನ್ನು ಗಣೇಶ ಈಡೇರಿಸಿ ಕೊಡುತ್ತಾನೆ ಎಂದು ಹೇಳಲಾಗುತ್ತದೆ.