ನಟ ದರ್ಶನ್ ಅವರ ಹುಟ್ಟುಹಬ್ಬದ ದಿವಸ ಹೊಸ ಸಿನಿಮಾ ಡೆವಿಲ್ ಸಿನಿಮಾದ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಆ ಒಂದು ಫಸ್ಟ್ ಲುಕ್ ಮತ್ತು ದರ್ಶನ್ ಅವರ ಮಾತುಗಳು ಅದ್ಭುತವಾಗಿ ಮೂಡಿಬಂದಿತ್ತು. ಸಿನಿಮಾ ಚಿತ್ರೀಕರಣ ಕೂಡ ಮೈಸೂರಿನಲ್ಲಿ ಭರದಿಂದ ಸಾಗುತ್ತಿತ್ತು. ಆದರೆ ಆ ವೇಳೆ ನಡೆದ ಅದೊಂದು ತಪ್ಪಾದ ಘಟನೆ ಇಂದ ದರ್ಶನ್ ಅವರು ಜೈಲು ಸೇರುವ ಹಾಗಾಯಿತು. 6 ತಿಂಗಳ ಕಾಲ ಜೈಲಿನಲ್ಲಿ ವಾಸ ಮಾಡಿದ ನಂತರ ದರ್ಶನ್ ಅವರಿಗೆ ಆರೋಗ್ಯದ ಸಮಸ್ಯೆ ಇದೆಯೆಂದು ಜಾ*ಮೀನು ನೀಡಲಾಯಿತು. ಬಳಿಕ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಬಿಪಿ ವೇರಿಯೇಷನ್ ಇರುವ ಕಾರಣ ಸರ್ಜರಿ ಮಾಡಲು ಆಗುವುದಿಲ್ಲ ಎಂದು ಹೇಳಲಾಯಿತು.

ನಟ ದರ್ಶನ್ ಅವರಿಗೆ ಇತ್ತೀಚೆಗೆ ಕೋರ್ಟ್ ಇಂದ ಸಂಪೂರ್ಣವಾಗಿ ಜಾಮೀನು ಸಿಕ್ಕಿದೆ. ಹೌದು, ಕೋರ್ಟ್ ಇಂದ ಜಾಮೀನು ಸಿಕ್ಕ ನಂತರ ದರ್ಶನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿದ್ದಾರೆ. ಸಧ್ಯಕ್ಕೆ ಅವರು ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಕುಟುಂಬದ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ದರ್ಶನ್ ಅವರು ಪೂರ್ಣವಾಗಿ ವಿಶ್ರಾಂತಿ ಪಡೆಯುವ ಮೂಡ್ ನಲ್ಲಿದ್ದು, ಅವರ ಮಗ ವಿನಿಷ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಹ ದರ್ಶನ್ ಅವರ ಜೊತೆಗೆ ಫಾರ್ಮ್ ಹೌಸ್ ನಲ್ಲೇ ಸೆಟ್ಲ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಹೊಸದೊಂದು ಸುದ್ದಿ ಹರಿದಾಡುತ್ತಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಅದೇನೆಂದರೆ ಪ್ರತಿ ವರ್ಷ ದರ್ಶನ್ ಅವರ ಒಂದು ಸಿನಿಮಾ ಆದರೂ ತೆರೆಕಾಣುತ್ತಿತ್ತು, ಆದರೆ ಈ ವರ್ಷ ಇಷ್ಟೆಲ್ಲಾ ಆದ ಕಾರಣ ದರ್ಶನ್ ಅವರ ಒಂದು ಸಿನಿಮಾ ಕೂಡ ತೆರೆಕಂಡಿಲ್ಲ. ಮುಂದಿನ ವರ್ಷ ಆದರೂ ದರ್ಶನ್ ಅವರ ಸಿನಿಮಾವನ್ನು ನೋಡಬೇಕು ಎನ್ನುವ ಆಸೆ ಮತ್ತು ಕುತೂಹಲ ಅಭಿಮಾನಿಗಳ ಮನಸ್ಸಿನಲ್ಲಿ ಇದೆ. ಹಾಗಾಗಿ ಅಭಿಮಾನಿಗಳು ದರ್ಶನ್ ಅವರು ಡೆವಿಲ್ ಸಿನಿಮಾಗೆ ಮತ್ತೆ ಬರೋದು ಯಾವಾಗ? ಶೂಟಿಂಗ್ ಯಾವಾಗ ಶುರುವಾಗುತ್ತದೆ? ಮುಂದಿನ ವರ್ಷ ಆದರೂ ನಮ್ಮ ಬಾಸ್ ಸಿನಿಮಾ ಬರುತ್ತಾ? ಎಂದು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆ ಎಲ್ಲಾ ಪ್ರಶ್ನೆಗಳಿಗೆ ಅವರ ಅಭಿಮಾನಿಗಳ ಕಡೆಯಿಂದಲೇ ಇದೀಗ ಒಂದು ಉತ್ತರವು ಸಿಕ್ಕಿದೆ.

ದರ್ಶನ್ ಅವರ ಅಭಿಮಾನಿಗಳ ವಾಟ್ಸಾಪ್ ಗ್ರೂಪ್ ಗಳಲ್ಲಿ ಸಿಕ್ಕಿರುವ ಮಾಹಿತಿಯ ಅನುಸಾರ, ದರ್ಶನ್ ಅವರ ಡೆವಿಲ್ ಸಿನಿಮಾ ಚಿತ್ರೀಕರಣ ಮುಂದಿನ ವರ್ಷ ಜನವರಿ 20ರಿಂದ ಶುರುವಾಗುತ್ತದೆ ಎಂದು ಹೇಳಲಾಗುತ್ತಿದೆ. ದರ್ಶನ್ ಅವರು ಈ ದಿನಾಂಕದಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನಲಾಗಿದೆ. ಆದರೆ ಇನ್ನಷ್ಟು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಅನುಸಾರ, ನಟ ದರ್ಶನ್ ಅವರು ಫ್ರಬ್ರವರಿ ನಂತರವಷ್ಟೇ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬ, ಅದೇ ದಿನ ಡೆವಿಲ್ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಸಿಗಬಹುದು ಎನ್ನಲಾಗಿದೆ..
ಆದರೆ ಈ ಬಗ್ಗೆ ದರ್ಶನ್ ಅವರಿಂದ ಯಾವುದೇ ಹೇಳಿಕೆ ಸಿಕ್ಕಿಲ್ಲ. ಅಥವಾ ನಿರ್ದೇಶಕ ಮಿಲನಾ ಪ್ರಕಾಶ ಅವರಾಗಲಿ, ಚಿತ್ರತಂಡದ ಇನ್ಯಾರೆ ಆಗಲಿ ದರ್ಶನ್ ಅವರು ಯಾವಾಗಿಂದ ಶೂಟಿಂಗ್ ಬರುತ್ತಾರೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಇಂಥ ಸುದ್ದಿಗಳು ಹಾಗೂ ಮಾಹಿತಿಗಳು ಕೇಳಿಬರುತ್ತಿದ್ದು, ನಿಜಕ್ಕೂ ದರ್ಶನ್ ಅವರು ಇನ್ನು ಎರಡು ತಿಂಗಳ ಅವಧಿಯಲ್ಲಿ ಚಿತ್ರೀಕರಣಕ್ಕೆ ಮತ್ತೆ ಹಾಜರಾಗುತ್ತಾರಾ? ಅಭಿಮಾನಿಗಳ ಆಸೆಯಂತೆ ಮುಂದಿನ ವರ್ಷವೇ ಡೆವಿಲ್ ಸಿನಿಮಾ ತೆರೆಕಾಣುತ್ತಾ? ಎಂದು ಕಾದು ನೋಡಬೇಕಿದೆ. ಇನ್ನು ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ಮಂಗಳೂರು ಮೂಲದ ನಟಿ ರಚನಾ ರೈ ನಟಿಸುತ್ತಿದ್ದಾರೆ..



