ಹಿಂದಿನ ಕಾಲದಲ್ಲಿ ಮದುವೆ ಎನ್ನುವುದು ಜನ್ಮದ ಅನುಬಂಧ ಎನ್ನುತ್ತಿದ್ದರು. ಒಂದು ಸಾರಿ ಮದುವೆಯಾದರೆ ಏಳೇಳು ಜನ್ಮಕ್ಕೆ ಅವರೇ ಪತ್ನಿಯಾಗಿ ಅಥವಾ ಪತಿಯಾಗಿ ಬರಬೇಕು ಎಂದು ವಚನ ತೆಗೆದುಕೊಳ್ಳುತ್ತಿದ್ದರು. ಗಂಡ ಹೆಂಡತಿ ಇಬ್ಬರು ಸಹ ಆ ಮಾತಿಗೆ ಬದ್ಧವಾಗಿ ಇರುತ್ತಿದ್ದರು. ಇಬ್ಬರ ನಡುವೆ ಜಗಳ, ಮುನಿಸು, ಮನಸ್ತಾಪ ಇದೆಲ್ಲವು ಬಂದರು ಸಹ, ಅದ್ಯಾವುದನ್ನು ದೊಡ್ಡದು ಮಾಡದೇ ತಮ್ಮಿಬ್ಬರ ನಡುವೆ ಇದ್ದ ಪ್ರೀತಿಯೇ ಮುಖ್ಯ ಎಂದು ಬದುಕುತ್ತಿದ್ದರು. ಗಂಡ ಹೆಂಡತಿ ನಡುವಿನ ಸಂಬಂಧ, ಪ್ರೀತಿ ಇದೆಲ್ಲವೂ ಪಾವಿತ್ರ್ಯತೆಯನ್ನು ಹೊಂದಿತ್ತು. ಆದರೆ ಈಗ ಆ ರೀತಿ ಇಲ್ಲ, ಕಾಲ ಸಂಪೂರ್ಣವಾಗಿ ಬದಲಾಗಿದೆ.

ಯಾರು ಯಾವಾಗ ಯಾರೊಡನೆ ಮದುವೆ ಆಗುತ್ತಾರೆ, ಯಾರಿಂದ ವಿಚ್ಛೇದನ ಪಡೆಯುತ್ತಾರೆ ಎಂದು ಊಹೆ ಮಾಡುವುದು ಸಹ ಸಾಧ್ಯವಿಲ್ಲ. ದಿಢೀರ್ ಎಂದು ಮದುವೆಯಾಗುತ್ತಾರೆ, ದಿಢೀರ್ ಎಂದು ವಿಚ್ಛೇದನ ಪಡೆಯುತ್ತಾರೆ. ಹೊಂದಾಣಿಕೆ, ಪ್ರೀತಿ ಎನ್ನುವ ಅಂಶ ಈಗ ಕಡಿಮೆ ಆಗುತ್ತಲೇ ಹೋಗುತ್ತಿದೆ ಎಂದರೆ ತಪ್ಪಲ್ಲ. ಸೆಲೆಬ್ರಿಟಿಗಳ ನಡುವೆ ಇದೆಲ್ಲವು ಜಾಸ್ತಿಯಾಗಿದೆ. ಅವರುಗಳನ್ನು ಅನುಸರಿಸುವ ಜನರು ಸಹ ಇದೆಲ್ಲವೂ ಕಾಮನ್ ಎನ್ನುತ್ತಿದ್ದಾರೆ. ಈಗೆಲ್ಲಾ ಗಂಡ ಅಥವಾ ಹೆಂಡತಿ ಇಷ್ಟ ಆಗ್ಲಿಲ್ಲ ಅಂದ್ರೆ, ಅಥವಾ ಹೊಂದಾಣಿಕೆ ಆಗ್ತಿಲ್ಲ ಅಂದ್ರೆ, ಸಣ್ಣ ಪುಟ್ಟ ವಿಷಯಕ್ಕೆ ಜಗಳ ಬಂದ್ರೆ, ದೂರವಾಗುತ್ತಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ವಿಚ್ಛೇದನ ಪಡೆಯುತ್ತಾರೆ, ಇನ್ನೊಬ್ಬರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಇದೆಲ್ಲವೂ ಒಂದು ರೀತಿ ಕಾಮನ್ ಅನ್ನಿಸುತ್ತಿರುವಾಗ, ತಮಿಳಿನ ಖ್ಯಾತ ನಟಿ ವನಿತಾ ವಿಜಯ್ ಕುಮಾರ್ 43ನೇ ವಯಸ್ಸಿನಲ್ಲಿ 4ನೇ ಮದುವೆ ಆಗಿದ್ದಾರೆ. ಈ ನಟಿ ತಮಿಳು ಬಿಗ್ ಬಾಸ್ ಗೆ ಹೋಗಿ ಜನಪ್ರಿಯತೆ ಪಡೆದುಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ ಮದುವೆ ವಿಷಯಕ್ಕೆ ಸುದ್ದಿಯಾದವರು. ವನಿತಾ ಅವರಿಗೆ ಈಗಾಗಲೇ 3 ಬಾರಿ ಮದುವೆಯಾಗಿ 3 ಜನ ಮಕ್ಕಳು ಸಹ ಇದ್ದಾರೆ, ಇಂಥ ವನಿತಾ ಅವರು ಇದೀಗ 4ನೇ ಮದುವೆ ಆಗಿದ್ದಾರೆ. ಮೂರು ಮಕ್ಕಳಿದ್ದು ನಾಲ್ಕನೇ ಬಾರಿ ಮದುವೆಯಾಗಿರುವುದು ನೆಟ್ಟಿಗರಿಗೆ ಶಾಕ್ ನೀಡಿದೆ.

ವನಿತಾ ವಿಜಯ್ ಕುಮಾರ್ ತಮಿಳಿನ ಖ್ಯಾತ ನಟ ವಿಜಯ್ ಕುಮಾರ್ ಮತ್ತು ಅವರ ಎರಡನೇ ಹೆಂಡತಿ ಮಂಜುಳಾ ದಂಪತಿಯ ಮಗಳು. ಇವರು ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡು, ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ನಟ ಆಕಾಶ್ ಎನ್ನುವವರ ಜೊತೆಗೆ 2000 ಇಸವಿಯಲ್ಲಿ ಮೊದಲ ಬಾರಿ ಮದುವೆಯಾದರು, 5 ವರ್ಷಗಳ ನಂತರ ಆಕಾಶ್ ಅವರ ಜೊತೆಗೆ ಭಿನ್ನಾಭಿಪ್ರಾಯ ಇದ್ದ ಕಾರಣ, ಅವರಿಂದ 2005ರಲ್ಲಿ ವಿಚ್ಛೇದನ ಪಡೆದರು. ನಂಟರ 2007ರಲ್ಲಿ ಆನಂದ್ ಜಯ ರಾಜನ್ ಎನ್ನುವ ಬ್ಯುಸಿನೆಸ್ ಮ್ಯಾನ್ ಜೊತೆಗೆ ಮದುವೆಯಾದರು. ಬಳಿಕ ಅವರಿಗೂ ವಿಚ್ಛೇದನ ಕೊಟ್ಟರು.
ನಂತರ ಪೀಟರ್ ಪಾಲ್ ಎನ್ನುವವರ ಜೊತೆಗೆ ಮದುವೆಯಾದರು, ಅವರಿಗೂ ವಿಚ್ಛೇದನ ಕೊಟ್ಟು ಇದೀಗ ಖ್ಯಾತ ಡ್ಯಾನ್ಸ್ ಕೋರಿಯೋಗ್ರಾಫರ್ ರಾಬರ್ಟ್ ಅವರ ಜೊತೆಗೆ 4ನೇ ಬಾರಿ ಮದುವೆ ಆಗಿದ್ದಾರೆ. ಈ ಮದುವೆ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮದುವೆ ಎನ್ನುವುದು ಅವರವರ ವೈಯುಕ್ತಿಕ ವಿಷಯ ಹಾಗಿದ್ದರೂ ಸಹ, 43ನೇ ವಯಸ್ಸಿಗೆ 3 ಮಕ್ಕಳು ಈಗಾಗಲೇ ಇದ್ದರು ಸಹ ವನಿತಾ ಅವರಿಗೆ ಇನ್ನೊಂದು ಮದುವೆ ಬೇಕಿತ್ತಾ ಎಂದು ಕಾಮೆಂಟ್ಸ್ ಬರೆಯುತ್ತಿದ್ದಾರೆ. ವನಿತಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಲಾಗುತ್ತಿದೆ.