ಬಿಗ್ ಬಾಸ್ ಶೋ ಅಂದ್ರೇನೇ ಹಾಗೆ. ಮೊದಲು ಇದ್ದ ಹಾಗೆ ಯಾವುದು ಕೂಡ ಶೋ ಮುಗಿಯುವ ವೇಳೆಗೆ ಇರುವುದಿಲ್ಲ. ಎಲ್ಲವೂ ಬದಲಾಗಿ ಹೋಗಿರುತ್ತದೆ. ಇಂದು ಕಬ್ಬ ಸ್ಪರ್ಧಿಯನ್ನು ಬಯ್ಯುತ್ತಿರುವ ವೀಕ್ಷಕರು ಕೆಲವೇ ದಿನಗಳಲ್ಲಿ ಆ ಸ್ಪರ್ಧಿಯ ಫ್ಯಾನ್ ಆಗಿಬಿಡಬಹುದು. ಪ್ರತಿ ಸೀಸನ್ ನಲ್ಲೂ ಇಂಥ ಬದಲಾವಣೆ ಇದ್ದೇ ಇರುತ್ತದೆ. ಈ ಸೀಸನ್ ನಲ್ಲಿ ಕೂಡ ಇಂಥ ಬದಲಾವಣೆ ಕಂಡುಬಂದಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಉಳಿದಿರುವುದು ಬೆರಳೆಣಿಕೆಯಷ್ಟು ವಾರಗಳು ಮಾತ್ರ. ಈ ವೇಳೆಯಲ್ಲಿ ಒಬ್ಬ ಸ್ಪರ್ಧಿ ಜನರಿಗೆ ತುಂಬಾ ಇಷ್ಟವಾಗುತ್ತಿದ್ದಾರೆ.

ಹೌದು, ಆ ಸ್ಪರ್ಧಿ ರಜತ್ ಕಿಶನ್. ಬಿಗ್ ಬಾಸ್ ಮನೆಯ ವಾಸ 50 ದಿವಸ ತಲುಪಿದ ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ರಜತ್. ಮನೆಗೆ ಬಂದ ಕೆಲವು ವಾರಗಳ ಕಾಲ ರಜತ್ ಬಗ್ಗೆ ಇದ್ದ ಅಭಿಪ್ರಾಯವೇ ಬೇರೆ. ಈಗ ಜನರಿಗೆ ಅವರ ಬಗ್ಗೆ ಇರುವ ಅಭಿಪ್ರಾಯವೇ ಬೇರೆ. ಶುರುವಿನಲ್ಲಿ ರಜತ್ ಅವರ ನಡವಳಿಕೆ ಬೇರೆ ರೀತಿಯೇ ಇತ್ತು. ರಜತ್ ಅವರು ಎಲ್ಲಾ ಸ್ಪರ್ಧಿಗಳ ಜೊತೆಗೆ ಅನಾವಶ್ಯಕವಾಗಿ ವಾದ ಮಾಡುತ್ತಿದ್ದರು. ಎಲ್ಲರ ಜೊತೆಗೆ ಜಗಳ ಆಡುವುದು, ಅವರನ್ನು ಕೆಣಕುವುದು, ಜೋರಾಗಿ ಮಾತನಾಡುವುದು ಸವಾಲ್ ಹಾಕುವುದು ಇದೆಲ್ಲವೂ ಜೋರಾಗಿಯೇ ನಡೆಯುತ್ತಿತ್ತು.
ಈ ವಿಚಾರಗಳು ವೀಕೆಂಡ್ ಎಪಿಸೋಡ್ ನಲ್ಲಿ ಕೊಡ ಚರ್ಚೆಯಾಗಿ ಕಿಚ್ಚ ಸುದೀಪ್ ಅವರು ಬುದ್ಧಿ ಹೇಳಿದ್ದರು, ಶಿಕ್ಷೆಯನ್ನು ಸಹ ಕೊಟ್ಟಿದ್ದರು. ಇನ್ನು ರಜತ್ ಅವರು ಬೇರೆ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಡುವುದು ಇದೆಲ್ಲವೂ ಸಹ ನಡೆಯುತ್ತಿತ್ತು. ಆದರೆ ಈಗ ರಜತ್ ಬದಲಾಗಿದ್ದಾರೆ. ರಜತ್ ಅವರಲ್ಲಿ ಕಂಡುಬಂದಿರುವ ಈ ಬದಲಾವಣೆ ಜನರಿಗೆ ಕೂಡ ತುಂಬಾ ಇಷ್ಟವಾಗಿದೆ. ವೀಕ್ಷಕರ ಮೆಚ್ಚಿನ ಸ್ಪರ್ಧಿ ಆಗುತ್ತಿದ್ದಾರೆ ರಜತ್. ಅದಕ್ಕೆ ಕಾರಣ, ರಜತ್ ಅವರು ಈಗ ಟಾಸ್ಕ್ ಗಳಲ್ಲಿ ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಿದ್ದಾರೆ., ಅಗತ್ಯ ಇರುವ ಕಡೆ ಧ್ವನಿ ಎತ್ತುತ್ತಿದ್ದಾರೆ ಹೊರತು ಅನಾವಶ್ಯಕವಾಗಿ ಮಾತನಾಡುತ್ತಿಲ್ಲ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
.
ಹಾಗೆಯೇ ಬೇರೆ ಸ್ಪರ್ಧಿಗಳ ಜೊತೆಗೂ ಚೆನ್ನಾಗಿದ್ದಾರೆ, ಯಾವಾಗಲೂ ಎಲ್ಲರ್ಸ್ ಜೊತೆಗೂ ಜಗಳ ಆಡುತ್ತಿಲ್ಲ. ಕೆಲವರಿಗೆ ಸಪೋರ್ಟ್ ಕೂಡ ಮಾಡುತ್ತಿದ್ದಾರೆ, ಕೆಲ ಸ್ಪರ್ಧಿಗಳ ಬಗ್ಗೆ ಕಾಳಜಿ ಕೂಡ ತೋರಿಸುತ್ತಿದ್ದಾರೆ. ರಜತ್ ಅವರ ಈ ಗುಣ ಜನರಿಗೆ ತುಂಬಾ ಇಷ್ಟವಾಗಿದೆ. ಬಿಗ್ ಬಾಸ್ ಕೊಟ್ಟಿದ್ದ ಚೆಂಡಿನ ಟಾಸ್ಕ್ ನಲ್ಲಿ ಚೈತ್ರಾ ಕುಂದಾಪುರ ಉತ್ತಮ ಪ್ರದರ್ಶನ ಕೊಡಲಿಲ್ಲ, ಇಲ್ಲಿ ರಜತ್ ಮತ್ತು ಚೈತ್ರ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಚೈತ್ರಾ ಅವರು ಒಳ್ಳೆಯ ಪ್ರದರ್ಶನ ಕೊಡದ ಕಾರಣ ಚೈತ್ರಾ ಅವರ ತಂಡದವರೇ ಬಯ್ಯುವುದಕ್ಕೆ ಶುರು ಮಾಡಿದ್ದರು, ಆದರೆ ರಜತ್ ಚೈತ್ರ ಪರವಾಗಿ ನಿಂತರು. ಅವರನ್ನು ಹುರಿದುಂಬಿಸಿದರು.

ನಿನ್ನಿಂದ ಆಗುತ್ತೆ ಎಂದು ಆಪೋಸಿಟ್ ತಂಡದಲ್ಲಿ ಇದ್ದರು ಚೈತ್ರಾ ಅವರಿಗೆ ಸಪೋರ್ಟ್ ಮಾಡಿದರು, ಆಕೆಗೆ ಸುಸ್ತಾಗಿದ್ದಾಗ ನೀರು ತಂದು ಕೊಡಲ ಅಂತ ಕೂಡ ಕೇಳಿದರು. ರಜತ್ ಅವರು ಚೈತ್ರ ಅವರ ಮೇಲೆ ತೋರಿಸಿದ ಕಾಳಜಿ ಎಲ್ಲರಿಗೂ ತುಂಬಾ ಇಷ್ಟವಾಗಿದೆ. ಹಾಗೆಯೇ ಮನೆಯಲ್ಲಿರುವ ಕೆಲವು ಸ್ಪರ್ಧಿಗಳ ನಿಜವಾದ ಬಣ್ಣವನ್ನು ರಜತ್ ಬಯಲು ಮಾಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಮನೆಯ ಹೊರಗಿರುವ ವೀಕ್ಷಕರಿಗೆ ರಜತ್ ತುಂಬಾ ಇಷ್ಟ ಆಗುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿರುವ ರಜತ್ ಫಿನಾಲೆ ತಲುಪಲಿ ಅವರಿಗೆ ಯಶಸ್ಸು ಸಿಗಲಿ ಎನ್ನುವುದು ಎಲ್ಲರ ಆಶಯ ಆಗಿದೆ.