ಇತ್ತೀಚೆಗೆ ಬಿಡುಗಡೆಯಾದ ಪುಷ್ಪ2 ಸಿನಿಮಾದ ಮೊದಲ ದಿವಸದ ಪ್ರದರ್ಶನದ ವೇಳೆ ಒಬ್ಬ ಮಹಿಳೆ ಕಾಲ್ತುಳಿತಕ್ಕೆ ಸಿಕ್ಕಿ ಪ್ರಾಣ ಕಳೆದುಕೊಂಡ ಘಟನೆ ನಮಗೆಲ್ಲಾ ಗೊತ್ತೇ ಇದೆ. ಈ ವಿಚಾರವಾಗಿ ಅಲ್ಲು ಅರ್ಜುನ್ ಅವರನ್ನು ಪೋಲಿಸರು ಬಂಧಿಸಿದರು. ಅಲ್ಲು ಅರ್ಜುನ್ ಅವರಿಗೆ ಬೇಲ್ ಸಿಕ್ಕಿದೆ. ಆದರೆ ಈ ಕೇಸ್ ಇನ್ನು ಕೂಡ ಮುಗಿದಿಲ್ಲ. ಈ ಕೇಸ್ ವಿಚಾರ ಚರ್ಚೆ ಆಗುತ್ತಿರುವಾಗ ಈ ಹಿಂದೆ ಅಣ್ಣಾವ್ರ ತಾಯಿಗೆ ತಕ್ಕ ಮಗ ಸಿನಿಮಾ ಬಿಡುಗಡೆ ದಿನ ನಡೆದ ಘಟನೆ ನೆನಪಿಗೆ ಬರುತ್ತದೆ. ಆಗಲು ಸಹ ಇಬ್ಬರು ಅಭಿಮಾನಿಗಳು ಥಿಯೇಟರ್ ಎದುರಲ್ಲೇ ಪ್ರಾ*ಣ ಬಿಟ್ಟಿದ್ದರು. ಅಷ್ಟಕ್ಕೂ ಆಗ ಆಗಿದ್ದೇನು? ಪೂರ್ತಿ ಘಟನೆ ತಿಳಿಯೋಣ..

ಅಣ್ಣಾವ್ರು ಎಂದರೆ ಯಾವ ಮಟ್ಟಕ್ಕೆ ಕ್ರೇಜ್ ಇರುತ್ತಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಡಾ. ರಾಜ್ ಅವರ ಸಿನಿಮಾಗಳು ಎಂದರೆ ಅಭಿಮಾನಿಗಳು ಹಳ್ಳಿ ಹಳ್ಳಿಗಳಿಂದ ಬಂದು ಸಿನಿಮಾ ನೋಡುತ್ತಿದ್ದರು. ಅದರಲ್ಲೂ ಸಿನಿಮಾ ರಿಲೀಸ್ ಆಗೋ ಮೊದಲ ದಿವಸದ ಪ್ರದರ್ಶನ ಅಂದರೆ ಕೇಳಬೇಕೆ. ಆ ಕ್ರೇಜ್ ನೆಕ್ಸ್ಟ್ ಲೆವೆಲ್ ನಲ್ಲಿಯೇ ಇರುತ್ತದೆ. 70ರ ದಶಕದಲ್ಲಿ ಅಣ್ಣಾವ್ರ ಅನೇಕ ಅದ್ಭುತ ಸಿನಿಮಾಗಳು ತೆರೆಕಂಡಿದೆ. 1978ರ ಆರಂಭದಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಸಿನಿಮಾ ತಾಯಿಗೆ ತಕ್ಕ ಮಗ. ಈ ಸಿನಿಮಾ ರಿಲೀಸ್ ಸಮಯಕ್ಕೆ ಡಾ. ರಾಜ್ ಕುಮಾರ್ ಅವರ ಕ್ರೇಜ್ ತುಂಬಾನೇ ಇತ್ತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಟಿಕೆಟ್ ಪಡೆಯುವುದಕ್ಕೆ ಸಮಸ್ಯೆ ಆಗಬಹುದು ಎಂದು ಪೊಲೀಸರಿಗೆ ಅರಿವಿದ್ದ ಕಾರಣ, ರಿಲೀಸ್ ದಿನಾಂಕ ಘೋಷಿಸದೇ ಬಿಡುಗಡೆ ಮಾಡಬೇಕು ಎಂದು ಕೂಡ ಸಲಹೆ ನೀಡಲಾಗಿತ್ತು. ಆದರೆ ಚಿತ್ರತಂಡ ಬಿಡುಗಡೆಗಿಂತ ಮೊದಲೇ ಅಣ್ಣಾವ್ರು ಬಾಕ್ಸರ್ ಲುಕ್ ನಲ್ಲಿರುವ ಪೋಸ್ಟರ್ ಗಳನ್ನು ಎಲ್ಲೆಡೆ ಹಂಚಿಕೆ ಮಾಡಿ, ಬಿಡುಗಡೆ ದಿನಾಂಕದ ಬಗ್ಗೆ ಕೂಡ ಎಲ್ಲಾ ಕಡೆ ಹಂಚಿಕೆ ಮಾಡಿದ ಕಾರಣ, ಸಿನಿಮಾ ಬಿಡುಗಡೆ ಆಗೋ ದಿವಸ ಬೆಂಗಳೂರಿನ ಸಂಜಯ್ ಥಿಯೇಟರ್ ನಲ್ಲಿ ದೊಡ್ಡದಾಗಿಯೇ ಜನ ಸೇರಿದ್ದರು. ಸಾವಿರಾರು ಜನರು ತಾಯಿಗೆ ತಕ್ಕ ಮಗ ಸಿನಿಮಾವನ್ನು ಮೊದಲ ದಿನವೆ ನೋಡಬೇಕು ಎಂದು ಬಂದ ಕಾರಣ, ನೂಕು ನುಗ್ಗಲು ಜೋರಾಗಿಯೇ ಇತ್ತು.

ಈ ಜನ ಜಾತ್ರೆಯಲ್ಲಿ ಟಿಕೆಟ್ ಪಡೆಯಲು ಕ್ಯೂ ನಿಂತಿದ್ದವರಿಗೆ ಉಸಿರಾಡುವುದಕ್ಕೆ ಸಹ ಆಗುತ್ತಿರಲಿಲ್ಲ. ಅಷ್ಟು ಜನಸಂದಣಿ ಇತ್ತು. ಇಲ್ಲಿ ಕ್ಯೂ ನಿಂತಿದ್ದ ಇಬ್ಬರು ಹುಡುಗರು, ಉಸಿರಾಡುವುದಕ್ಕೆ ಕಷ್ಟಪಟ್ಟು, ಪ್ರಜ್ಞೆ ತಪ್ಪಿ ಬಿದ್ದರು, ಅವರಿಬ್ಬರನ್ನು ಹೊರಗಡೆ ಕರೆದುಕೊಂಡು ಬಂದು ಮಲಗಿಸಿ, ನೋಡಿದಾಗ, ಇಬ್ಬರು ಇ*ನ್ನಿಲ್ಲ ಎನ್ನುವುದು ಗೊತ್ತಾಯಿತು. ಪಾಪ ಅಂದು ಅನ್ಯಾಯವಾಗಿ ಟಿಕೆಟ್ ಗೆ ನಿಂತ ಹುಡುಗರು ಮರಳಿ ಬಾರದ ಜಾಗಕ್ಕೆ ಹೊರಟು ಹೋಗಿದ್ದರು. ಇಂಥದ್ದೊಂದು ಘಟನೆ ಸಂಭವಿಸಿದ ನಂತರ ಪೊಲೀಸರು ಇನ್ನಷ್ಟು ಎಚ್ಚೆತ್ತುಕೊಂಡರು. ಅಣ್ಣಾವ್ರ ಮುಂದಿನ ಸಿನಿಮಾ ಶಂಕರ್ ಗುರು ಬಿಡುಗಡೆ ವೇಳೆಗೆ, ಹೀಗೆ ಹೆಚ್ಚು ಜನ ಬರುತ್ತಾರೆ ಎಂದು ಬೇರೆಯದೇ ಪ್ಲಾನ್ ಮಾಡಿದರು.
ಶಂಕರ್ ಗುರು ಸಿನಿಮಾ ಬಿಡುಗಡೆ ಮಾಡುವ ಸಮಯಕ್ಕೆ, ಥಿಯೇಟರ್ ನಲ್ಲಿ ಟಿಕೆಟ್ ಕೊಡಲು ಅತಿಯಾದ ನೂಕು ನುಗ್ಗಲು ಉಂಟಾಗುತ್ತದೆ ಎನ್ನುವ ಕಾರಣಕ್ಕೆ, ರೇಸ್ ಕೋರ್ಸ್ ನಲ್ಲಿ ಅಚ್ಚುಕಟ್ಟಾಗಿ ಎಲ್ಲವನ್ನೂ ಪ್ಲಾನ್ ಮಾಡಿ ಟಿಕೆಟ್ ವಿತರಣೆ ಮಾಡಲಾಯಿತು. ಒಬ್ಬ ನಟನ ಸಿನಿಮಾಗೆ ರೇಸ್ ಕೋರ್ಸ್ ನಲ್ಲಿ ಟಿಕೆಟ್ ವಿತರಣೆ ಮಾಡುತ್ತಾರೆ ಅಂದ್ರೆ, ಅವರಿಗಿದ್ದ ಕ್ರೇಜ್, ಅಭಿಮಾನಿ ಬಳಗ ಹೇಗಿತ್ತು ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದು. ಡಾ. ರಾಜ್ ಕುಮಾರ್ ಅವರಿಗೆ ಇರುತ್ತಿದ್ದ ಕ್ರೇಜ್, ಇನ್ಯಾರಿಗೂ ಇರೋಕೆ ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾ, ಮೊಬೈಲ್ ಫೋನ್, ವಾಟ್ಸಾಪ್ ಇದ್ಯಾವುದು ಇಲ್ಲದ ಕಾಲದಲ್ಲೇ ಈ ಪರಿ ಕ್ರೇಜ್ ಹೊಂದಿದ್ದವರು ಡಾ. ರಾಜ್ ಕುಮಾರ್.



