ನಟಿ ಕೀರ್ತಿ ಸುರೇಶ್ ಅವರು ಇತ್ತೀಚೆಗೆ ಮದುವೆಯಾದರು. ಒಂದೆರಡು ದಿನಗಳ ಹಿಂದೆಯಷ್ಟೇ ಕೀರ್ತಿ ಸುರೇಶ್ ಅವರು ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರ ಜೊತೆಗೆ ಮದುವೆಯಾದರು. ಇಬ್ಬರ ಮದುವೆ ಹಿಂದೂ ಸಂಪ್ರದಾಯದ ಪ್ರಕಾರ ಗೋವಾದಲ್ಲಿ ಅದ್ಧೂರಿಯಾಗಿ ನಡೆದಿತ್ತು. ನಟಿ ಕೀರ್ತಿ ಸುರೇಶ್ ಅವರು ತಮ್ಮ ಮದುವೆಯ ಫೋಟೋಸ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು, ಆ ಫೋಟೋಸ್ ಎಲ್ಲವೂ ವೈರಲ್ ಆಗಿತ್ತು. ಇದೀಗ ಕೀರ್ತಿ ಸುರೇಶ್ ಅವರ ಮದುವೆ ಫೋಟೋಸ್ ಮತ್ತೆ ವೈರಲ್ ಆಗಿದೆ.
ಈ ಬಾರಿ ಕೀರ್ತಿ ಸುರೇಶ್ ಅವರು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ಆಂಟೋನಿ ತಟ್ಟಿಲ್ ಅವರು ಕ್ರಿಶ್ಚಿಯನ್ ಸಂಪ್ರದಾಯದ ಹುಡುಗ ಆಗಿದ್ದು, ಅವರ ಆಚರಣೆಯ ಪ್ರಕಾರ ಕೂಡ ಕೀರ್ತಿ ಸುರೇಶ್ ಅವರ ಮದುವೆ ನಡೆದಿದೆ. ಈ ಕ್ಯೂಟ್ ಆದ ಜೋಡಿ ಬಿಳಿ ಬಣ್ಣದ ಡ್ರೆಸ್ ಧರಿಸಿಕೊಂಡು ವಧು ವರರಾಗಿ ಕಂಗೊಳಿಸಿದ್ದಾರೆ. ಹಿಂದೂ ಸಂಪ್ರದಾಯದ ಮದುವೆ ನಮ್ಮ ಸಂಪ್ರದಾಯ, ಸಂಸ್ಕೃತಿ ಎಲ್ಲವನ್ನು ಎತ್ತಿ ಹಿಡಿಯುವ ಹಾಗಿತ್ತು, ಬಹಳ ಸುಂದರವಾಗಿಯೂ ಇತ್ತು. ಕೀರ್ತಿ ಸುರೇಶ್ ಅವರನ್ನು ವಧುವಾಗಿ ನೋಡಿ, ಅದೆಷ್ಟೋ ತಾಯಂದಿರು ತಮ್ಮ ಮಗಳೇ ಎಂದು ಸಂತೋಷ ಪಟ್ಟಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇನ್ನು ಈ ಜೋಡಿಯ ಕ್ರಿಶ್ಚಿಯನ್ ಸಂಪ್ರದಾಯದ ಮದುವೆ ಒಂದು ರೀತಿಯಲ್ಲಿ ಎಲ್ಲಾ ಹುಡುಗಿಯರ ಕನಸಿನ ಮದುವೆಯ ಹಾಗಿತ್ತು, ಅದ್ಭುತ ಎನ್ನಿಸುವ ಅಲಂಕಾರ, ಕುಟುಂಬದವರು, ಸ್ನೇಹಿತರು ಎಲ್ಲರೂ ಕೀರ್ತಿ ಸುರೇಶ್ ಅವರ ಮದುವೆಯಲ್ಲಿ ಹಾಜರಿದ್ದರು. ನಿನ್ನೆ ಕೀರ್ತಿ ಸುರೇಶ್ ಅವರು ಈ ಮದುವೆಯ ಫೋಟೋಸ್ ಗಳನ್ನು ಹಂಚಿಕೊಂಡಿದ್ದು, ಮದುವೆಯ ಫೋಟೋಸ್ ಗಳಲ್ಲಿ ಅವರ ಮುದ್ದಿನ ಶ್ವಾನ NyKe ಎಲ್ಲರ ಗಮನ ಸೆಳೆದಿತ್ತು. ಇನ್ನು ಕೀರ್ತಿ ಸುರೇಶ್ ಅವರು ಮದುವೆಯ ಫೋಟೋಸ್ ಗಳನ್ನು ಹಂಚಿಕೊಂಡಿರುವುದಕ್ಕೆ ಬಹಳಷ್ಟು ಸೆಲೆಬ್ರಿಟಿಗಳು ಅವರಿಗೆ ವಿಶ್ ಮಾಡಿದ್ದಾರೆ. ಈ ಸಂತೋಷ ಯಾವಾಗಲೂ ಹೀಗೆ ಇರಲಿ ಎಂದು ಹಾರೈಸಿದ್ದಾರೆ..
ಕೀರ್ತಿ ಸುರೇಶ್ ಹಾಗೂ ಆಂಟೋನಿ ತಟ್ಟಿಲ್ ಇಬ್ಬರ ಕಿಸ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೀರ್ತಿ ಅವರ ಅಭಿಮಾನಿಗಳಿಗೆ ಬಹಳ ಸಂತೋಷ ಆಗಿದೆ. ಇನ್ನು ಆಂಟೋನಿ ಹಾಗೂ ಕೀರ್ತಿ ಸುರೇಶ್ ಜೋಡಿಯದ್ದು 15 ವರ್ಷಗಳ ಲವ್, ಇಬ್ಬರು ಬಹಳ ಹಳೆಯ ಸ್ನೇಹಿತರು, ಹಾಗೆಯೇ ಅಷ್ಟು ವರ್ಷಗಳಿಂದ ತಮ್ಮ ಪ್ರೀತಿಯನ್ನು ಅದೇ ರೀತಿ ಕಾಪಾಡಿಕೊಂಡು ಬಂದಿರುವುದನ್ನು ನಿಜಕ್ಕೂ ಮೆಚ್ಚಬೇಕು. ಆಂಟೋನಿ ಅವರು ದೊಡ್ಡ ಬ್ಯುಸಿನೆಸ್ ಮ್ಯಾನ್ ಎಂದು ಮಾಹಿತಿ ಸಿಕ್ಕಿದೆ. ಮೂಲತಃ ಕೇರಳದವರಾದ ಆಂಟೋನಿ ಅವರು ದುಬೈನಲ್ಲಿ ದೊಡ್ಡ ದೊಡ್ಡ ಬ್ಯುಸಿನೆಸ್ ಗಳನ್ನು ಹೊಂದಿದ್ದಾರೆ.
ದುಬೈ ಮತ್ತು ಕೊಚ್ಚಿ ಎರಡು ಕಡೆ ಇವರ ದೊಡ್ಡ ದೊಡ್ಡ ರೆಸ್ಟೋರೆಂಟ್ ಗಳನ್ನು ಹೊಂದಿದ್ದಾರೆ. ಇನ್ನು ಕೀರ್ತಿ ಸುರೇಶ್ ಅವರು ಎಷ್ಟು ದೊಡ್ಡ ಹೆಸರು ಮಾಡಿರುವ ನಟಿ ಎಂದು ನಮಗೆಲ್ಲಾ ಗೊತ್ತೇ ಇದೆ. ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಆಗಿರುವ ಕೀರ್ತಿ ಸುರೇಶ್ ಅವರು ಈಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಲಿದ್ದಾರೆ. ಕೀರ್ತಿ ಸುರೇಶ್ ಅವರ ಮೊದಲ ಬಾಲಿವುಡ್ ಸಿನಿಮಾ ಬೇಬಿ ಜಾನ್, ಶೀಘ್ರದಲ್ಲೇ ತೆರೆ ಕಾಣಲಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಕೀರ್ತಿ ಸುರೇಶ್ ಅವರು ಕಾಣಿಸಿಕೊಳ್ಳಲಿದ್ದಾರೆ. ಕೆರಿಯರ್ ನಡುವೆ ಮದುವೆಯಾಗಿ ಹೊಸ ಜೀವನ ಶುರು ಮಾಡಿದ್ದಾರೆ.