ಇದು ಮಾಹಿತಿ ತಂತ್ರಜ್ಞಾನದ ಕಾಲ, ಇಲ್ಲಿ ಹಣ ಸಂಪಾದನೆ ಮಾಡೋಕೆ ನೀವು ದಿನಗಟ್ಟಲೇ ಕಷ್ಟಪಟ್ಟು ದುಡಿಯುವ ಅವಶ್ಯಕತೆ ಇಲ್ಲ. ಸ್ಮಾರ್ಟ್ ವರ್ಕ್ ಮಾಡಿದರೆ ಸಾಕು, ಕೈತುಂಬಾ ಹಣ ಸಂಪಾದನೆ ಮಾಡಬಹುದು. ನಿಮ್ಮ ಊಹೆಗೂ ಮೀರಿ ಹಣ ಗಳಿಸುವುದಕ್ಕೆ ಸಾಧ್ಯವಾಗುತ್ತದೆ. ಈಗ ಕಾಲ ಅದೇ ರೀತಿ ಇದೆ. ನೀವು ಮನೆಯಲ್ಲೇ ಕೂತು ಕೆಲವೇ ಗಂಟೆಗಳ ಕಾಲ ಕೆಲಸ ಮಾಡಿ ಹಣ ಸಂಪಾದನೆ ಮಾಡಬಹುದು. ಈ ಹುಡುಗ ಕೂಡ ಅದೇ ರೀತಿ, ಇವನ ವಯಸ್ಸು 17, ಇಷ್ಟು ಚಿಕ್ಕ ವಯಸ್ಸಿಗೆ ಇವನು ತಿಂಗಳಿಗೆ 16 ಲಕ್ಷ ಹಣ ಸಂಪಾದನೆ ಮಾಡುತ್ತಾನೆ. ಅದು ಹೇಗೆ ಎಂದು ತಿಳಿಯೋಣ ಬನ್ನಿ..
ಈ ಹುಡುಗನ ಹೆಸರು ಕೈಲಾನ್ ಮೆಕ್ ಡೊನಾಲ್ಡ್. ಈತ, ಶಾಲಾ ಬಾಲಕ ಆಗಿದ್ದಾಗ ಇವನಿಗೆ ಇದ್ದ ಆಸಕ್ತಿ ನೋಡಿ, ಈತನ ಅಮ್ಮ ಒಂದು ಕ್ರಾಫ್ಟ್ ಕಿಟ್ ಕೊಡಿಸಿದ್ದರು. ಅದನ್ನು ಬಳಸಿ ಸ್ಟಿಕರ್ ಗಳ ತಯಾರಿಕೆ ಮಾಡುವುದನ್ನು ಸಹ ಈ ಹುಡುಗ ಕಲಿತುಕೊಂಡ. ಇವರ ಕುಟುಂಬ ಇರುವುದು ಬ್ರಿಟನ್ ನಲ್ಲಿ. ತಾನು ತಯಾರಿಸುತ್ತಿದ್ದ ಸ್ಟಿಕರ್ ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ, ನಿಧಾನವಾಗಿ ಈತನಿಗೆ ಆರ್ಡರ್ ಗಳು ಬರುವುದಕ್ಕೆ ಶುರುವಾದವು. ಈ ರೀತಿ ಸ್ಟಿಕರ್ ಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡುವುದಕ್ಕೆ ಶುರು ಮಾಡಿ, ತಿಂಗಳಿಗೆ 19 ಸಾವಿರ ಡಾಲರ್ ಹಣ ಸಂಪಾದನೆ ಮಾಡುತ್ತಾನೆ. ಅಂದರೆ ತಿಂಗಳಿಗೆ 16 ಲಕ್ಷ ಸಂಪಾದನೆ ಮಾಡುತ್ತಾನೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಹುಡುಗ ಕೈಲಾನ್ ಸ್ಕೂಲ್ ಗೆ ಹೋಗುವುದರ ಜೊತೆಗೆ, ಓದಿಕೊಂಡು ಬಿಡುವಿನ ವೇಳೆಯಲ್ಲಿ ಈ ಸ್ಟಿಕರ್ ಕೆಲಸ ಮಾಡುತ್ತಿದ್ದಾನೆ ಎನ್ನುವುದು ಆಶ್ಚರ್ಯ. ಸೋಶಿಯಲ್ ಮೀಡಿಯಾವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು, ತನ್ನ ಪ್ರಾಡಕ್ಟ್ ಗಳು ಸೇಲ್ ಆಗುವ ಹಾಗೆ ಮಾಡಿದ್ದಾನೆ. ಇನ್ನು ಈತನ ತಾಯಿಯ ಹೆಸರು ಕರೆನ್ ನ್ಯೂಶಂ, ಇವರು ಎರಡು ವರ್ಷಗಳ ಹಿಂದೆ ಮಗನಿಗೆ 190 ಡಾಲರ್ ಬೆಲೆ ಬಾಳುವ, ಕ್ರಿಕಟ್ ಜಾಯ್ ಎನ್ನುವ ಸಂಸ್ಥೆಯ ಡಿಜಿಟಲ್ ಡ್ರಾಯಿಂಗ್ ಮತ್ತು ಪ್ರಿಂಟಿಂಗ್ ಮಷಿನ್ ಅನ್ನು ಕೊಟ್ಟಿದ್ದರು. ಕೈಲಾನ್ ಗೆ ಇದರಲ್ಲಿ ವಿಪರೀತ ಆಸಕ್ತಿ ಇತ್ತು
ಹಾಗಾಗಿ ಈ ಹುಡುಗ ಆ ಮಷಿನ್ ಬಳಸಿಕೊಂಡು ಕ್ರಿಯಾಶೀಲವಾಗಿ ಸ್ಟಿಕರ್ ಗಳನ್ನು ತಯಾರಿಸುವುದಕ್ಕೆ ಶುರು ಮಾಡಿದ, ಸ್ಟಿಕರ್ ಗಳನ್ನು ಫೇಸ್ ಬುಕ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಪೋಸ್ಟ್ ಮಾಡುವುದಕ್ಕೆ ಶುರು ಮಾಡಿ, ಒಂದೊಂದೆ ಆರ್ಡರ್ ಗಳು ಬರುವುದಕ್ಕೆ ಶುರುವಾಯಿತು. ಈ ವರ್ಷದ ಆರಂಭದಲ್ಲಿ ಸಕ್ಸಸ್ ಫುಲ್ ಆಗಿ 200 ಆರ್ಡರ್ ಗಳನ್ನು ಸಹ ಪೂರೈಸಿದ್ದಾನೆ ಕೈಲಾನ್. ಸ್ಕೂಲ್ ಗೆ ಹೋಗಿ ಬಂದ ನಂತರ 3 ಗಂಟೆಗಳ ಕಾಲ ಈ ಕೆಲಸಕ್ಕೆ ಸಮಯ ಕೊಡುತ್ತಿದ್ದ. ಈ ಸಣ್ಣ ಬ್ಯುಸಿನೆಸ್ ಅಥವಾ ಕೆಲಸ ಚೆನ್ನಾಗಿ ಕ್ಲಿಕ್ ಆಯಿತು, ಒಳ್ಳೆಯ ಸಂಪಾದನೆಯನ್ನು ತಂದಿತು.
ಬಳಿಕ ಇದನ್ನು ದೊಡ್ಡ ಸ್ಕೇಲ್ ನಲ್ಲಿ ಶುರು ಮಾಡಿ, ದೊಡ್ಡ ದೊಡ್ಡ ಯಂತ್ರಗಳನ್ನು ಖರೀದಿಸಿದ, ತನ್ನ ಸಣ್ಣ ಬ್ಯುಸಿನೆಸ್ ಅನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾನೆ. ಈಗ ತಾನು ತಯಾರಿಸುವ ಸ್ಟಿಕರ್ ಗಳನ್ನು ಟಿಕ್ ಟಾಕ್ ಶಾಪ್ ಹಾಗೂ ಇನ್ನಿತರ ದೊಡ್ಡ ದೊಡ್ಡ ವೆಬ್ಸೈಟ್ ಗಳ ಮೂಲಕ ಮಾರಾಟ ಮಾಡುತ್ತಾನೆ. ಈ ವರ್ಷ ಮೇ ತಿಂಗಳ ವರೆಗೆ ಇವನ ಒಟ್ಟು ಸಂಪಾದನೆ $94,410.31 ಡಾಲರ್ ಗಳು, ಭಾರತದ ಕರೆನ್ಸಿಯಲ್ಲಿ ₹79,98,563 ರೂಪಾಯಿಗಳು ಆಗಿದೆ. ಈ ಹುಡುಗನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದ್ದು, ನಾವು ಕೂಡ ಇವನ ಹಾಗೆ ಸ್ಮಾರ್ಟ್ ವರ್ಕ್ ಮಾಡಿ, ಹಣ ಸಂಪಾದನೆ ಮಾಡಬಹುದು.