ಕನ್ನಡದ ಖ್ಯಾತ ಹಿರಿಯನಟಿ ಉಮಾಶ್ರೀ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇಂದು ಅವರು ಒಬ್ಬ ಖ್ಯಾತ ನಟಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಹಳೆಯ ದಿನಗಳಲ್ಲಿ ಅವರು ಬಹಳ ಕಷ್ಟಪಟ್ಟಿದ್ದಾರೆ. ಉಮಾಶ್ರೀ ಅವರು ಬದುಕಿನಲ್ಲಿ ಎದುರಿಸಿರುವ ಕಷ್ಟ, ಎಲ್ಲಾ ಹೆಣ್ಣುಮಕ್ಕಳಿಗೆ ಸ್ಪೂರ್ತಿ ಎಂದರು ತಪ್ಪಲ್ಲ. ಜೀವನದಲ್ಲಿ ಬಂದ ಕಷ್ಟಗಳ ಕಾರಣ, ಪ್ರಾ*ಣ ಕಳೆದುಕೊಳ್ಳುವುದು ಒಂದೇ ದಾರಿ ಎಂದು ಕುಡಿತದ ಚಟವನ್ನು ಶುರು ಮಾಡಿಕೊಂಡರಂತೆ. ನಂತರ ಏನಾಯ್ತು? ಆ ರೀತಿ ಇದ್ದ ಉಮಾಶ್ರೀ ಅವರು ಇಂದು ಈ ಸ್ಥಾನ ತಲುಪಿದ್ದು ಹೇಗೆ? ಇದರ ಹಿಂದಿದೆ ದೊಡ್ಡ ಘಟನೆಗಳು.. ಅವುಗಳ ಬಗ್ಗೆ ತಿಳಿಯೋಣ..

ನಟಿ ಉಮಾಶ್ರೀ ಅವರು ಹುಟ್ಟಿ ಬೆಳೆದದ್ದು ಬಹಳ ಕಷ್ಟವಿದ್ದ, ಬಡತನವಿದ್ದ ಮನೆಯಲ್ಲಿ, ಉಮಾಶ್ರೀ ಅವರು ಚಿಕ್ಕ ವಯಸ್ಸಿನಿಂದ ಬಡತನದಲ್ಲಿ ಬೆಳೆದು ಬಳಿಕ ಒಬ್ಬ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದು, ಆತನನ್ನೇ ಮದುವೆಯಾದರು. ಎರಡು ಮಕ್ಕಳಾದ ನಂತರ ಆ ವ್ಯಕ್ತಿಯಿಂದ ಸಾಕಷ್ಟು ಕಷ್ಟ ಅನುಭವಿಸಿದ ನಂತರ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೊರಗಡೆ ಬಂದರು. ಮಕ್ಕಳನ್ನು ತಾಯಿಯ ಮನೆಯಲ್ಲಿ ಬಿಟ್ಟುಬಿಟ್ಟರು. ಬದುಕುವುದೇ ಬೇಡ ಎಂದು ನಿರ್ಧರಿಸಿ, ಕುಡಿಯುವುದಕ್ಕೆ ಶುರು ಮಾಡಿದರು. ಮೂರ್ನಾಲ್ಕು ಚೆನ್ನಾಗಿ ಕುಡಿದರೆ, ಈ ರೀತಿ ಮಾಡಿದರೆ ಬೇಗ ಸಾ*ಯ ಬಹುದು ಎಂದು ಯಾರೋ ಹೇಳಿದ್ದರಂತೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಚಟ ಇದ್ದಾಗ, ಒಂದು ದಿನ ಅವರ ತಾಯಿ ಮಗಳಿಗೆ ಹೊಡೆದುಬಿಟ್ಟರು, ಆಗ ಮಗಳು ಅಳುತ್ತಾ ಬಂದು ನನಗೆ ಅಪ್ಪ ಇಲ್ಲ, ಅಮ್ಮ ಕೂಡ ಸಾಯುತ್ತಾಳಂತೆ ನಾನು ಬದುಕುವುದು ಹೇಗೆ ಎಂದು ಕೇಳಿದರಂತೆ. ಮಗಳ ಆ ಮಾತು ಉಮಾಶ್ರೀ ಅವರ ಮನಸ್ಸಿಗೆ ನಾಟಿತಂತೆ. ಮಕ್ಕಳಿಗೋಸ್ಕರ ಬದುಕಬೇಕು ಎಂದು ನಿರ್ಧರಿಸಿದರು. ಮೊದಲಿಗೆ ಊಟ ಕೊಡುತ್ತಾರೆ ಎಂದು ರಂಗಭೂಮಿಯಲ್ಲಿ ತೊಡಗಿಕೊಂಡು ನಾಟಕ ಮಾಡುತ್ತಿದ್ದರು, ಆ ಅನುಭವ ಇದ್ದ ಕಾರಣ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗುವುದಕ್ಕೆ ಶುರುವಾಯಿತು.

ನಟಿಸಲು ಶುರು ಮಾಡಿದ ಬಳಿಕ, ಉಮಾಶ್ರೀ ಅವರು ಒಂಟಿ ಹೆಣ್ಣು ಎನ್ನುವ ಕಾರಣಕ್ಕೆ ಅವರ ಮೇಲೆ ಕೆಟ್ಟ ದೃಷ್ಟಿ ಬೀರಿದ ಬಹಳಷ್ಟು ಜನರು ಇದ್ದಾರಂತೆ. ಆದರೆ ಉಮಾಶ್ರೀ ಅವರಿಗೆ ಆ ಥರ ನಿರ್ಧರಿಸಿ, ಬದುಕಲು ಇಷ್ಟವಿರಲಿಲ್ಲ. ಯಾರಾದರೂ ತಮ್ಮ ಜೊತೆಗೆ ಬೇರೆ ರೀತಿಯಲ್ಲಿ ವರ್ತಿಸುವುದು ಅರಿವಿಗೆ ಬಂದರೆ, ರೌದ್ರ ರೂಪ ತಾಳುತ್ತಿದ್ದರಂತೆ ನಟಿ ಉಮಾಶ್ರೀ. ಈ ರೀತಿ ಬದುಕಿನ ಹಲವು ಕಷ್ಟಗಳನ್ನು, ಜನರ ಕೆಟ್ಟ ದೃಷ್ಟಿಗಳನ್ನು ಸಹನೆಯಿಂಸ ಎದುರಿಸಿ, ಬದುಕನ್ನು ಕಟ್ಟಿಕೊಟ್ಟಲು ಬಹಳ ತಾಳ್ಮೆಯಿಂದ, ಒಳ್ಳೆಯ ದಾರಿಯಲ್ಲಿ ಜೀವಿಸುವುದಕ್ಕೆ ಶುರು ಮಾಡಿದರು. ಅದೇ ರೀತಿ ಛಲ ಇದ್ಧಿದ್ದರಿಂದ ಬದುಕನ್ನು ಕಟ್ಟಿಕೊಂಡರು.
ಉಮಾಶ್ರೀ ಅವರು ಒಂಟಿಯಾಗಿ ತಮ್ಮ ಮಕ್ಕಳನ್ನು ನೋಡಿಕೊಳ್ಳುವ ವೇಳೆ, ಹಲವು ಜನರು ಅವರಿಗೆ ಇನ್ನೊಂದು ಮದುವೆ ಆಗುವಂತೆ ಸಲಹೆ ನೀಡಿದರಂತೆ, ವಯಸ್ಸು ಇನ್ನು ಚಿಕ್ಕದಿರುವ ಕಾರಣ ಇನ್ನೊಂದು ಮದುವೆ ಆಗು ಎಂದು ಹೇಳಿದರಂತೆ. ಆದರೆ ಉಮಾಶ್ರೀ ಅವರು ತಮಗೆ ಇನ್ನೊಂದು ಮದುವೆ ಬೇಡ ಎಂದು ಗಟ್ಟಿ ನಿರ್ಧಾರ ಮಾಡಿದ್ದರು. ಒಂಟಿಯಾಗಿ ಬದುಕಿ ಹೆಸರಾಂತ ನಟಿಯಾದರು, ರಾಷ್ಟ್ರಪ್ರಶಸ್ತಿ ಪಡೆದುಕೊಂಡರು. ಎಂ.ಎಲ್.ಸಿ ಆದರು, ಎಂ.ಪಿ ಆದರು ಬಳಿಕ ಸಚಿವೆಯು ಆಗಿದ್ದಾರೆ. ಉಮಾಶ್ರೀ ಅವರು ನಿಜಕ್ಕೂ ನಮ್ಮೆಲ್ಲರಿಗೂ ಸ್ಪೂರ್ತಿ ತುಂಬುವ ಮಹಿಳೆ.