ನಟ ಕಿಚ್ಚ ಸುದೀಪ್ ಅವರು ಈಗ ಬಿಗ್ ಬಾಸ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಸುದೀಪ್ ಅವರ ತಾಯಿ ಸಹ ವಿಧಿವಶರಾದರು. ಹಾಗಾಗಿ ಮ್ಯಾಕ್ಸ್ ಸಿನಿಮಾ ಕುರಿತ ಕೆಲಸಗಳು ಹಾಗೂ ಅಪ್ಡೇಟ್ ಗಳು ಇನ್ನು ತಡ ಆಗಬಹುದು ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಎಲ್ಲಾ ಅಭಿಮಾನಿಗಳಿಗೆ ಈಗ ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಮ್ಯಾಕ್ಸ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಕಿಚ್ಚನ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ ಎನ್ನುವ ಹಾಗಿದೆ. ಈ ವರ್ಷವೇ ಮ್ಯಾಕ್ಸ್ ಅವತಾರದಲ್ಲಿ ತೆರೆಮೇಲೆ ಬರ್ತಾರ ಕಿಚ್ಚ ಸುದೀಪ್? ಇಲ್ಲಿದೆ ಸಿಹಿ ಸುದ್ದಿ!

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ಮ್ಯಾಕ್ಸ್. ಈ ಹಿಂದೆ ಸುದೀಪ್ ಅವರು ಕಾಣಿಸಿಕೊಂಡಿದ್ದು ವಿಕ್ರಾಂತ್ ರೋಣ ಸಿನಿಮಾದಲ್ಲಿ. ಈ ಸಿನಿಮಾ ತೆರೆಕಂಡು 2 ವರ್ಷ ಕಳೆದು ಹೋಗಿದೆ. ಇನ್ನು ಕೂಡ ಸುದೀಪ್ ಅವರ ಮುಂದಿನ ಸಿನಿಮಾ ಬಿಡುಗಡೆ ಆಗಿಲ್ಲ ಎಂದು ಅಭಿಮಾನಿಗಳು ಬೇಸರ ಪಟ್ಟುಕೊಳ್ಳುತ್ತಿದ್ದರು. ಹಾಗೆಯೇ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗದೇ ಹೋದರೆ, ಕನ್ನಡ ಚಿತ್ರರಂಗ ಮುನ್ನೇರಲು ಕಷ್ಟ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದ್ದವು. ಎಲ್ಲಾ ಸ್ಟಾರ್ ಗಳು ಒಂದೊಂದು ಸಿನಿಮಾಗೆ 2, 3 ವರ್ಷ ಸಮಯ ತೆಗೆದುಕೊಂಡರೆ, ಚಿತ್ರರಂಗ ಉಳಿಯೋದು ಹೇಗೆ ಎನ್ನುವ ಮಾತು ಸಹ ಕೇಳಿಬಂದಿತ್ತು.
ಯಶ್ ಅವರು ಕೆಜಿಎಫ್2 ನಂತರ ಟಾಕ್ಸಿಕ್ ನಲ್ಲಿ ಬ್ಯುಸಿ ಆಗಿದ್ದಾರೆ, ಈ ಸಿನಿಮಾ ಮುಂದಿನ ವರ್ಷ ತೆರೆ ಕಾಣುವುದು ಡೌಟ್ ಇದೆ. ಇನ್ನು ಉಪೇಂದ್ರ ಅವರ UI ಈ ಡಿಸೆಂಬರ್ ನಲ್ಲಿ ತೆರೆಕಾಣಲಿದೆ. ಉಪೇಂದ್ರ ಅವರ ಸಿನಿಮಾ ತೆರೆಕಂಡು ವರ್ಷವಾಗಿದೆ. ದರ್ಶನ್ ಅವರ ಸಿನಿಮಾ ಸಧ್ಯಕ್ಕೆ ತೆರೆ ಕಾಣುವ ಹಾಗಿಲ್ಲ. ಈ ರೀತಿ ಎಲ್ಲಾ ಸ್ಟಾರ್ ಗಳ ಸಿನಿಮಾಗಳು ಮುಂದಕ್ಕೆ ಹೋಗುತ್ತಿದ್ದರೆ ಹೇಗೆ ಎನ್ನುವ ಅಭಿಪ್ರಾಯ ಶುರುವಾಗಿತ್ತು. ಮೊದಲಿಗೆ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ಈ ವರ್ಷವೇ ತೆರೆ ಕಾಣುತ್ತದೆ ಎಂದು ಹೇಳಿದರು ಸಹ, ಮುಂದಕ್ಕೆ ಹೋಗುತ್ತಲೇ ಇತ್ತು. ಇದರಿಂದಾಗಿ ಅಭಿಮಾನಿಗಳಲ್ಲಿ ಸಹ ಕುತೂಹಲ ಶುರುವಾಗಿತ್ತು.

ಆದರೆ ಇದೀಗ ಮ್ಯಾಕ್ಸ್ ಚಿತ್ರತಂಡದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಮ್ಯಾಕ್ಸ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ವರ್ಷವೇ ಮ್ಯಾಕ್ಸ್ ಸಿನಿಮಾ ತೆರೆಕಾಣಲಿರುವುದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಆಗಿದ್ದು, ಈ ವರ್ಷ ಕ್ರಿಸ್ಮಸ್ ಹಬ್ಬದ ದಿವಸ, ಅಂದರೆ ಡಿಸೆಂಬರ್ 25ರಂದು ಮ್ಯಾಕ್ಸ್ ಸಿನಿಮಾ ತೆರೆಕಾಣಲಿದೆ. ಇಂದು ಮ್ಯಾಕ್ಸ್ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅನೌನ್ಸ್ ಮಾಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಒಟ್ಟಿನಲ್ಲಿ ಕಿಚ್ಚ ಸುದೀಪ್ ಅವರನ್ನು ಮತ್ತೆ ತೆರೆ ಮೇಲೆ ನೋಡುವುದಕ್ಕೆ ಕಾಯುತ್ತಿದ್ದ ಅಭಿಮಾನಿಗಳ ಸಂತೋಷಕ್ಕೆ ಈಗ ಪಾರವೇ ಇಲ್ಲ. ಮ್ಯಾಕ್ಸ್ ಈಗಾಗಲೇ ಟ್ರೆಂಡ್ ಆಗುತ್ತಿದ್ದಾನೆ.

ಮ್ಯಾಕ್ಸ್ ಸಿನಿಮಾ ತಂಡ ಈಗಾಗಲೇ ಟೀಸರ್ ಇಂದ ಹಾಗೂ ಕೆಲವು ತುಣುಕುಗಳಿಂದಲೇ ಸಿನಿಮಾ ಹೇಗೆ ಮೂಡಿಬಂದಿದೆ ಎನ್ನುವುದರ ಝಲಕ್ ನೀಡಿತ್ತು. ಇದನ್ನು ನೋಡಿಯೇ ಸಿನಿಪ್ರಿಯರು ಫಿದಾ ಆಗಿದ್ದರು. ಇನ್ನು ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಆಗೋದು ಖಚಿತ ಎಂದಮೇಲೆ, ಇನ್ನುಮುಂದೆ ಸಿನಿಮಾ ಬಗೆಗಿನ ಅಪ್ಡೇಟ್ ಗಳು ಹೆಚ್ಚು ಹೆಚ್ಚಾಗಿ ಬರಲಿದೆ. ಇದನ್ನೆಲ್ಲಾ ನೋಡಿ ಕೊನೆಗೆ ಕ್ರಿಸ್ಮಸ್ ಹಬ್ಬದಂದು ಸಿನಿಮಾ ನೋಡೋಕೆ ಅಭಿಮಾನಿಗಳಂತು ಕಾಯುತ್ತಿದ್ದಾರೆ. ಕಿಚ್ಚನ ಕಡೆಯಿಂದ ಒಂದು ಸೂಪರ್ ಮಾಸ್ ಟ್ರೀಟ್ ಅಂತು ಪಕ್ಕಾ ಆಗಿದ್ದು, ಸಿನಿಮಾ ನೋಡೋದನ್ನಂತೂ ಅಭಿಮಾನಿಗಳು ಮಿಸ್ ಮಾಡೋದಿಲ್ಲ.



