ಮೂಲತಃ ಕರಾವಳಿಯ ಬೆಡಗಿ, ಸದ್ಯ ಬಾಲಿವುಡ್ನ ಸ್ಟಾರ್ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚು ಬೇರೆ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಮಾಲ್ಡೀವ್ಸ್ಗೆ ತೆರಳಿ ಹಸಿಬಿಸಿ ಬಟ್ಟೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಪೂಜಾ ಇದೀಗ ತುಂಡು ಬಟ್ಟೆ ಧರಿಸಿ ಟೆನ್ನಿಸ್ ಆಡಿದ್ದಾರೆ. ಈ ವೈರಲ್ ಫೋಟೋಗಳನ್ನು ಕಂಡು ನೆಟ್ಟಿಗರು ಮನಬಂದಂತೆ ಕಮೆಂಟ್ ಮಾಡಿದ್ದಾರೆ.

ಬಹುಭಾಷಾ ನಟಿ ಪೂಜಾ ಹೆಗ್ಡೆ ಸದ್ಯ ಮಾಲ್ಡೀವ್ಸ್ನಲ್ಲಿ ಜಾಲಿ ಮೂಡ್ನಲ್ಲಿದ್ದಾರೆ. ಸಿಂಗಲ್ ಆಗಿ ಭರ್ಜರಿ ವೆಕೇಷನ್ನಲ್ಲಿದ್ದಾರೆ. ಕಳೆದ ಕೆಲ ದಿನಗಳಿಂದ ಮಾಲ್ಡೀವ್ಸ್ನಲ್ಲಿಯೇ ಬೀಡು ಬಿಟ್ಟಿರುವ ಪೂಜಾ, ಸೋಷಿಯಲ್ ಮೀಡಿಯಾದಲ್ಲಿ ಸಾಲು ಸಾಲು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಇದೀಗ ಬೀಚ್ ಬದಲು ತಾವು ಉಳಿದುಕೊಂಡ ರೆಸಾರ್ಟ್ನ ಟೆನಿಸ್ ಕೋರ್ಟ್ನಲ್ಲಿ ಟೆನಿಸ್ ಬ್ಯಾಟ್ ಹಿಡಿದು ಒಂದಷ್ಟು ಹೊತ್ತು ಆಟವಾಡಿದ್ದಾರೆ. ಈ ಫೋಟೋಗಳು ಇದೀಗ ಟ್ರೆಂಡಿಂಗ್ ನಲ್ಲಿವೆ.
ಟೆನಿಸ್ ಆಟದ ಫೋಟೋ ಶೇರ್ ಮಾಡಿಕೊಂಡ ಪೂಜಾ, ಇದು ಫೆಡರರ್ಗಾಗಿ ಎಂದು ಬರೆದುಕೊಂಡಿದ್ದಾರೆ. ಹಸಿರು ಬಣ್ಣದ ಶಾರ್ಟ್ ಡ್ರೆಸ್ನಲ್ಲಿ ಟೆನಿಸ್ ಆಟದ ಫೋಟೋ ಶೇರ್ ಮಾಡುತ್ತಿದ್ದಂತೆ, ನೆಟ್ಟಿಗರಿಂದಲೂ ಬಗೆಬಗೆಯ ಕಾಮೆಂಟ್ಗಳು ಬಂದಿವೆ. ಕೆಲವರು ಪೋಸ್ ಕೊಟ್ಟಿದ್ದು ಸಾಕೆಂದು ಕಾಮೆಂಟ್ ಹಾಕಿದರೆ, ಇನ್ನು ಕೆಲವರು ಈ ಶಾರ್ಟ್ ಡ್ರೆಸ್ನಲ್ಲಿ ನೀವು ಚೆಂದಕಿಂತ ಚೆಂದ ಎಂದೂ ಹೊಗಳಿದ್ದಾರೆ. ಒಟ್ಟಾರೆಯಾಗಿ ಪೂಜಾ ಹೆಗ್ಡೆ ಇದೀಗ ಟ್ರೆಂಟಿಂಗ್ ನಲ್ಲಿದ್ದಾರೆ.