ಇಂದು ಹಾಸನ ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, 2025-2026 ಕ್ಕೆ ಮೂರನೇ ಮಹಾಯುದ್ಧ ನಡೆಯೋದು ಶತಸಿದ್ಧ. ಈ ಮಹಾಯುದ್ಧದಲ್ಲಿ 13 ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ಮಾಡಲಿದ್ದಾರೆ ಎಂದು ಬ್ರಹ್ಮಾಂಡ್ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಪ್ರಧಾನಮಂತ್ರಿಗಳು ಎರಡು ವರ್ಷ ಅವಧಿಯಲ್ಲಿ ಕೇವಲ ಒಂದೂವರೆ ವರ್ಷ ಮಾತ್ರ ಪ್ರಧಾನಿಯಾಗಿ ಉಳಿಯುತ್ತಾರೆ. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆಶ್ರಮ ಸೇರಲಿದ್ದಾರೆ. ಈ ರಾಜಕೀಯ ಹೊಲಸು ಸರಿಮಾಡಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ಏನೂ ಬದಲಾವಣೆ ಆಗದೆ ಬೇಜಾರಾಗಿ ರಾಜೀನಾಮೆ ನೀಡಬಹುದು ಅಥವಾ ಬೇರೆಯೇ ಆಯ್ಕೆ ಮಾಡಿಕೊಳ್ಳಬಹುದು. ಮುಂದೆ ಒಬ್ಬ ಸನ್ಯಾಸಿ ಜಗತ್ತನ್ನು ಆಳಲಿದ್ದಾರೆ ಎಂದಿದ್ದಾರೆ.
ಬಾಂಗ್ಲಾದೇಶ-ಚೈನಾ ಕುತಂತ್ರ ಮಾಡಿ ಭಾರತ ದೇಶದ ಮೇಲೆ ದಾಳಿ ಮಾಡಲಿವೆ. ನಮಗೆ ಅಮೆರಿಕದಿಂದಾಗಲಿ ಬೇರೆ ಯಾವ ದೇಶದಿಂದ ಸಹಾಯ ಸಿಗುವುದಿಲ್ಲ. ರಷ್ಯಾವೊಂದೇ ಸಹಾಯ ಮಾಡಲಿದೆ ಎಂದಿದ್ದಾರೆ. ಇದೇ ವೇಳೆ ಕರ್ನಾಟಕದ ಬಗ್ಗೆಯೂ ಭವಿಷ್ಯ ನುಡಿದಿದ್ದ, ಕರ್ನಾಟಕ ಮೂರು ಭಾಗ ಆಗೋದು ಶತಸಿದ್ಧ, ಶಿವನ ಮೇಲೆ ಆಣೆ ಮಾಡುತ್ತೇ ಸತ್ಯವಾಗಲಿದೆ. ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೀಗೆ ಮೂರು ಭಾಗ ಆಗಲಿದೆ. ಮೂವರು ಮುಖ್ಯಮಂತ್ರಿಗಳಾಗಲಿದ್ದಾರೆ. ಇದು 2025 ರಿಂದ 2032ರವರೆಗೆ ನಡೆಯಲಿದೆ ಎಂದಿದ್ದಾರೆ.
2025ರಲ್ಲಿ ಮೂರು ಗ್ರಹಣಗಳು ಒಂದೇ ವರ್ಷ ಸಂಭವಿಸಲಿವೆ ಎಂದಿದ್ದಾರೆ. ಮೂರು ಗ್ರಹಣಗಳು ಒಂದೇ ವರ್ಷದಲ್ಲಿ ಬರುವುದು ಶುಭ ಸೂಚಕವಲ್ಲ. ಆದರೆ ಮೂರು ಗ್ರಹಣಗಳು ಏಕಕಾಲಕ್ಕೆ ಬರಲಿವೆ ಎಂಬುದು ಆತಂಕ ಮೂಡಿಸಿದೆ. ಪೂರಿ ಜಗನ್ನಾಥ ಕ್ಷೇತ್ರ ಸಂಪೂರ್ಣ ಮುಳುಗಲಿದೆ ಅರವತ್ತು-ಎಪ್ಪತ್ತು ಅಡಿ ನೀರು ಬರುತ್ತೆ. ಇನ್ನೊಂದೆಡೆ ನೀರಿನ ಅಭಾವ ಉಂಟಾಗಿ, ರೋಗ ರುಜಿನಗಳು ಹೆಚ್ಚಾಗುತ್ತೆ ಜನರು ಸಾಯಲಿದ್ದಾರೆ ಎಂದಿರುವ ಗುರೂಜಿ.