ಸೀತಾರಾಮಮ್ ಸಿನಿಮಾ ಮೂಲಕ ದಕ್ಷಿಣ ಭಾರತದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡವರು ನಟಿ ಮೃಣಾಲ್ ಠಾಕೂರ್. ಸೀತಾ ಮಹಾಲಕ್ಷ್ಮೀ ಪಾತ್ರ ಇಂದಿಗೂ ಯಾರ ಮನಸ್ಸಿನಿಂದಲು ದೂರ ಹೋಗಿಲ್ಲ ಎಂದರೆ ಖಂಡಿತ ತಪ್ಪಲ್ಲ. ನಟಿ ಮೃಣಾಲ್ ಅವರ ಅಭಿನಯ ಅಷ್ಟು ಸೊಗಸಾಗಿತ್ತು, ನೋಡುಗರನ್ನು ತಮ್ಮತ್ತ ಸೆಳೆದಿತ್ತು. ಸೀತಾರಾಮಮ್ ನಂತರ ಹಾಯ್ ನಾನ್ನ, ಫ್ಯಾಮಿಲಿ ಸ್ಟಾರ್ ಸಿನಿಮಾಗಳಲ್ಲಿ ಅಭಿನಯಿಸಿದರು ಮೃಣಾಲ್.
ಈ ಸಿನಿಮಾಗಳು ಕೂಡ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಮೂಲತಃ ಮಹಾರಾಷ್ಟ್ರ ದವರಾದ ಮೃಣಾಲ್, ನಟನೆಯ ಬ್ಯಾಗ್ರೌಂಡ್ ಇಲ್ಲದೇ, ಈ ಕ್ಷೇತ್ರಕ್ಕೆ ಬಂದು ಇಷ್ಟರ ಮಟ್ಟಿಗೆ ಬೆಳೆದು ನಿಂತಿರುವ ಪ್ರತಿಭೇ. ಮೃಣಾಲ್ ಅವರು ಮೊದಲಿಗೆ ಹಿಂದಿ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಶುರು ಮಾಡಿದರು, ಬಳಿಕ ಕೆಲವು ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿದರು. ಗ್ಲಾಮರಸ್ ಪಾತ್ರಗಳು ಎನ್ನುವುದಕ್ಕಿಂತ ಅಭಿನಯಕ್ಕೆ ಸೂಕ್ತವಾದ ಒಳ್ಳೆಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಆದರೆ ಇವರಿಗೆ ಅತಿದೊಡ್ಡ ಬ್ರೇಕ್ ತಂದುಕೊಟ್ಟಿದ್ದು, ಸೀತಾರಾಮಮ್ ಸಿನಿಮಾದ ಸೀತಾ ಮಹಾಲಕ್ಷ್ಮೀ ಪಾತ್ರ. ಈ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿ, ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೆಯೇ ಮೃಣಾಲ್ ಅವರಿಗೆ ಇತ್ತೀಚೆಗೆ ಒಬ್ಬ ಅಭಿಮಾನಿ ಮಾಡಿದ ಕೆಲಸದಿಂದ ಕಿರಿಕಿರಿ ಉಂಟಾಗಿದೆ. ಹೌದು, ಅಭಿಮಾನಿಗಳು ತಮ್ಮ ಮೆಚ್ಚಿನ ಕಲಾವಿದರ ಫೋಟೋಗಳನ್ನು ಎಡಿಟ್ ಮಾಡುವುದು ಸಹಜ. ಈ ಹುಡುಗನೊಬ್ಬ ದೀಪಾವಳಿ ಹಬ್ಬವನ್ನು ಮೃಣಾಲ್ ಅವರ ಜೊತೆಗೆ ಆಚರಿಸುತ್ತಿರುವ ಹಾಗೆ ಎಡಿಟ್ ಮಾಡಿದ್ದಾರೆ.
ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿ ಮೃಣಾಲ್ ಅವರನ್ನು ತಲುಪಿದ್ದು, ಆಕೆ ಪೋಸ್ಟ್ ಗೆ ಕಾಮೆಂಟ್ ಮಾಡಿ, ನೀವು ಮಾಡಿರುವುದು ಸರಿಯಲ್ಲ ಎಂದಿದ್ದರು. ಮೃಣಾಲ್ ಅವರು ಈ ರೀತಿ ಕಾಮೆಂಟ್ ಬರೆಯುತ್ತಿದ್ದ ಹಾಗೆ ನೆಟ್ಟಿಗರು ಆತನ ವಿರುದ್ಧ ಕೋಪಗೊಂಡು, ಬಾಯಿಗೆ ಬಂದಂತೆ ಬಯ್ಯುವುದಕ್ಕೆ ಶುರು ಮಾಡಿದರು.. ಇದಕ್ಕೆ ಮೃಣಾಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ರಿಯಾಕ್ಟ್ ಮಾಡಿದ್ದಾರೆ.

ಆ ಹುಡುಗನನ್ನು ನೀವು ಕೊಂಡುಬಿಡುವ ಹಾಗೆ ಅನ್ನಿಸುತ್ತಿದೆ. ನನಗೆ ಆತನ ಕಲೆಯ ಬಗ್ಗೆ ಗೌರವವಿದೆ, ಈ ಕಲೆಯನ್ನ ಸರಿಯಾದ ರೀತಿಯಲ್ಲಿ ಸರಿಯಾದ ಕಡೆ ಆತ ಬಳಸಲಿ. ನಾನು ಆತನ ಅಕೌಂಟ್ ಚೆಕ್ ಮಾಡಿದಾಗ, ಬೇರೆ ಕಲಾವಿದರ ಜೊತೆಗೆ ಕೂಡ ಇದೇ ಥರ ಫೋಟೋಸ್ ಎಡಿಟ್ ಮಾಡಿದ್ದಾನೆ, ಅವರ ಮನಸ್ಸಿಗೆ ಇದರಿಂದ ನೋವಾಗಬಹುದು ಎಂದಿದ್ದಾರೆ ಮೃಣಾಲ್. ನಟಿಯ ಈ ಒಳ್ಳೆಯತನಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತಿದೆ.



