ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ‘ಗೀತಾ’. ನಾಡಿನಾದ್ಯಂತ ಇದು ಜನರ ನೆಚ್ಚಿನ ಸೀರಿಯಲ್. ಈ ಸೀರಿಯಲ್ನಲ್ಲಿ ಗೀತಾ ಅತ್ತೆ ಪಾತ್ರ ಮಾಡಿರೋ ಶರ್ಮಿತ ಗೌಡ ಅವರ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ.ಭಾನುಮತಿ ಅಲಿಯಾಸ್ ಶರ್ಮಿತ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದಾರೆ. ಇದೀಗ ಈ ನಟಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದು, ಫೋಟೋ ನೋಡಿದ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.




ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಶರ್ಮಿತ ಗೌಡ ಅವರ ಬೋಲ್ಡ್ ಫೋಟೋಗಳನ್ನು ನೋಡಿದ ನೆಟ್ಟಿಗರು ಸೊಸೆಗಿಂತ ಅತ್ತೆಯೇ ಸೂಪರ್ ಅಂತೆಲ್ಲ ಕಮೆಂಟ್ ಮಾಡುತ್ತಿದ್ದಾರೆ. ನೀವು ತಾಯಿಯ ಪಾತ್ರದಲ್ಲಿ ನಟಿಸಬಾರದು, ನಾಯಕ ನಟಿಯಾಗಿ ನಟಿಸಬೇಕಿತ್ತು, ಸೀರೆ ಹಿಂದಿನ ಸೌಂದರ್ಯ ಈಗ ಹೊರಬಂದಿದೆ’ ಎಂದೆಲ್ಲ ಕಮೆಂಟ್, ಲವ್ ಹಾಗೂ ಬೆಂಕಿಯ ಇಮೋಜಿಗಳನ್ನು ಹಾಕುತ್ತಿದ್ದಾರೆ.
ವೈರಲ್ ಆಗಿರುವ ಫೋಟೋಗಳಲ್ಲಿ ಶರ್ಮಿತ ಕಪ್ಪು ಬಣ್ಣದ ಕ್ರಾಪ್ ಟಾಪ್ ಹಾಗೂ ಕಂದು ಬಣ್ಣದ ಪ್ಯಾಂಟ್ ಧರಿಸಿ ಫೋಟೋಗೆ ಬಹಳ ಮಾದಕವಾಗಿ ಪೋಸ್ ನೀಡಿದ್ದಾರೆ. ಇತ್ತೀಚೆಗೆ ಈ ನಟಿ ಬಿಕಿನಿಯಲ್ಲಿ ಪೋಸ್ ಕೊಟ್ಟು ಸುದ್ದಿಯಾಗಿದ್ದರು. ಇದೀಗ ಇವರ ಮತ್ತಷ್ಟು ಬೋಲ್ಡ್ ಅವತಾರ ಕಂಡು ಅಭಿಮಾನಿಗಳು ದಂಗಾಗಿದ್ದಾರೆ. ಎಲ್ಲೆಡೆ ಶರ್ಮಿತ ಗೌಡ ಬೋಲ್ಡ್ ಫೋಟೋಗಳು ವೈರಲ್ ಆಗುತ್ತಿವೆ.



