ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್, ನಟಿ ನಯನತಾರಾ ಅವರು ಇದೇ ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಮುಖವನ್ನು ವಿಡಿಯೋ ಮೂಲಕ ರಿವೀಲ್ ಮಾಡಿದ್ದಾರೆ. ಇಷ್ಟು ದಿನ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗಂ ಮುಖವನ್ನು ಯಾರಿಗೂ ತೋರಿಸದೆ ಪೋಷಣೆ ಮಾಡುತ್ತಿದ್ದರು. ಸದ್ಯ, ವಿಡಿಯೋ ವೈರಲ್ ಆಗುತ್ತಿದೆ.

ನಯನ್ತಾರಾ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಮಕ್ಕಳ ಮುಖವನ್ನು ನೋಡಲು ಕಾಯುತ್ತಿದ್ದರು. ಕೊನೆಗೂ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ‘ಜೈಲರ್’ ಸಿನಿಮಾದ ಹಾಡಿನೊಂದಿಗೆ ಇಬ್ಬರು ಮಕ್ಕಳ ಮುಖವನ್ನು ರಿವೀಲ್ ಮಾಡಿದ್ದಾರೆ. ವಿಡಿಯೋ ಹಾಗೂ ಫೋಟೋ ನೋಡಿದ ಅಭಿಮಾನಿಗಳು ಬಗೆಬಗೆಯ ಕಮೆಂಟ್ ಹಾಕುತ್ತಿದ್ದಾರೆ.
ಸದ್ಯ ನಟಿ ನಯನತಾರಾ ಅಭಿನಯಿಸಿರುವ ‘ಜವಾನ್’ ಚಿತ್ರ ಟ್ರೈಲರ್ ಬಿಡುಗಡೆಯಾಗಿದೆ. ಬಾಲಿವುಡ್ ನಟ ಶಾರುಖ್ ಖಾನ್ ಜತೆ ನಯನತಾರಾ, ದೀಪಿಕಾ ಪಡುಕೋಣೆ, ಪ್ರಿಯಾ ಮಣಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಇದೇ ಸೆಪ್ಟೆಂಬರ್ 7ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ನಯನತಾರ ಹಂಚಿಕೊಂಡಿರುವ ವಿಡಿಯೋದ ಕೆಳಗೆ (ನಾನ್ ಬಂದಿದ್ದೀನಿ ಅಂತ ಹೇಳು) ಎಂದು ತಮಿಳಿನಲ್ಲಿ ಬರೆದುಕೊಂಡಿದ್ದು, ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.