ಕೆರಿಬಿಯನ್ನರ ನಾಡಲ್ಲಿ ಕೊನೆಗೂ ಸೂರ್ಯ ಕುಮಾರ್ ಯಾದವ್ ರವರ ಬ್ಯಾಟ್ ಅಬ್ಬರಿಸಿದೆ. ಟಿ20 ಸರಣಿಗೂ ಮುನ್ನ ನಡೆದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿಯೂ ವಿಫಲವಾಗಿದ್ದ ಸೂರ್ಯ ಕುಮಾರ್ ಯಾದವ್, ಅಂತಿಮವಾಗಿ ಮೂರನೇ ಟಿ20 ಪಂದ್ಯದಲ್ಲಿ ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ, ವಿಂಡೀಸ್ ಪ್ರವಾಸದಲ್ಲಿ ಮೊದಲ ಅರ್ಧ ಶತಕ ಸಿಡಿಸಿದ ಸೂರ್ಯ ತಂಡಕ್ಕೆ ಗೆಲುವು ತಂದುಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು,

ಮೂರನೇ ಕ್ರಮಾಂಕದಲ್ಲಿ ಬ್ಯಾಂಟಿಂಗ್ ಗೆ ಇಳಿದ ಸೂರ್ಯ ಕೇವಲ 44 ಎಸೆತಗಳನ್ನು ಎದುರಿಸಿ ಹತ್ತು ಬೌಂಡರಿ ಹಾಗೂ ಭರ್ಜರಿ ನಾಲ್ಕು ಸಿಕ್ಸರ್ ಸಹಿತ 83 ರನ್ ಗಳ ಗೆಲುವಿನ ಇನ್ನಿಂಗ್ಸ್ ಆಡಿದರು, ಸೂರ್ಯರವರ ಈ ಇನ್ನಿಂಗ್ಸ್ ಭಾರತದ ಗೆಲುವಿನ ನಿರ್ಣಾಯಕ ಪಾತ್ರ ವಹಿಸಿತ್ತು ಅಂದರೆ ಬಹುಶಃ ತಪ್ಪಾಗಲಿಕಿಲ್ಲ. ವಾಸ್ತವವಾಗಿ ಈ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು, ಏಕೆಂದರೆ ಈ ಪಂದ್ಯದಲ್ಲಿ ಭಾರತ ಸೋತಿದ್ದರೆ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ಸರಣಿಯನ್ನು ಕಳೆದುಕೊಳ್ಳುತಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಇಪ್ಪತ್ತು ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತ್ತು, 160 ರನ್ ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ, ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಯಶಸ್ವಿ ಜಯಸ್ವಾಲ್ ಮೊದಲ ಓವರ್ ನಲ್ಲೀಯೇ ಔಟ್ ಆದರು, ಅವರ ನಂತರ ಶುಬ್ನನ್ ಗಿಲ್ ಕೂಡ ಬೇಗನೆ ಔಟ್ ಆದರು. ಹೀಗಾಗಿ ಭಾರತ ತಂಡವು ಆರಂಭದಲ್ಲಿ ಸೋಲಿನ ದವಡೆಗೆ ಸಿಲುಕಿತ್ತು,
ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯ ಕುಮಾರ್ ಯಾದವ್ ನಾಲ್ಕನೆ ಕ್ರಮಾಂಕದಲ್ಲಿ ಬಂದ ತಿಲಕ್ ರವರ ಮೇಲೆ ಸಾಕಷ್ಟು ಜವಾಬ್ದಾರಿ ಇತ್ತು, ಕೊನೆಗೂ ನಿರೀಕ್ಷೆಯಂತೆ ಬ್ಯಾಟ್ ಬೀಸಿದ ಈ ಇಬ್ಬರೂ ಐವತ್ತೊಂದು ಎಸೆತಗಳಲ್ಲಿ 87 ರನ್ ಗಳ ಜೊತೆ ಆಟವನ್ನು ಹಂಚಿಕೊಂಡರು, ಇದರ ಮಧ್ಯೆ ಸೂರ್ಯ ಕುಮಾರ್ ಯಾದವ್ ರವರು ಈ ಪ್ರವಾಸದಲ್ಲಿ ಮೊದಲ ಅರ್ಧ ಶತಕವನ್ನು ಪೂರ್ಣಗೊಳಿಸಿದರು, ಸೂರ್ಯ ಕುಮಾರ್ ಯಾದವ್ 23 ಎಸೆತಗಳಲ್ಲಿ ಅರ್ಧ ಶತಕವನ್ನು ಪೂರ್ಣಗೊಳಿಸಿದರು, ಆ ಬಳಿಕ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಸೂರ್ಯ 83 ರನ್ ಗಳಿಗೆ ಇನ್ನಿಂಗ್ಸ್ ಮುಗಿಸಿ ಶತಕ ವಂಚಿತರಾದರು.
ಇನ್ನು 5 ಇನ್ನಿಂಗ್ಸ್ ಗಳ ನಂತರ ಟಿ 20 ಯಲ್ಲಿ ಸೂರ್ಯ ಕುಮಾರ್ ಯಾದವ್ ರವರ ಮೊದಲ ಅರ್ಧ ಶತಕವಾಗಿದೆ, ಇದಕ್ಕೂ ಮುನ್ನ 2023 ಜನವರಿ 7 ರಂದು ರಾಜ್ ಕೋಟ್ ನಲ್ಲಿ ಶ್ರೀಲಂಕಾ ವಿರುದ್ಧ ಸೂರ್ಯ ಕುಮಾರ್ ಯಾದವ್ ರವರು ಶತಕ ಸಿಡಿಸಿದರು, ಆ ಪಂದ್ಯದ ನಂತರ ಇದೀಗ ಸೂರ್ಯ ಕುಮಾರ್ ಯಾದವ್ ಆಗಸ್ಟ್ ನಲ್ಲಿ 50 ರ ಗಡಿ ದಾಟಿದ್ದಾರೆ, ಈ ಇನ್ನಿಂಗ್ಸ್ ನಲ್ಲಿ ಸೂರ್ಯ ಕುಮಾರ್ ಯಾದವ್ ದಾಖಲೆ ಕೂಡ ಬರೆದಿದ್ದು ಟಿ 20 ಯಲ್ಲಿ ಅತೀ ವೇಗವಾಗಿ ನೂರು ಸಿಕ್ಸ್ ಗಳನ್ನು ಸಿಡಿಸಿದ ಆಟಗಾರರು ಎನಿಸಿಕೊಂಡಿದ್ದಾರೆ.



