‘ಒಂದು ಮೊಟ್ಟೆಯ ಕತೆ’ ಸಿನಿಮಾ ಮೂಲ ಜರ್ನಿ ಆರಂಭಿಸಿದ ಅಪ್ಪಟ ಕರಾವಳಿಯ ಪ್ರತಿಭೆ ರಾಜ್ ಶೆಟ್ಟಿ ಸದ್ಯ ಕನ್ನಡ ಚಿತ್ರರಂಗದ ಸೆನ್ಸೇಶನಲ್ ಡೈರೆಕ್ಟರ್. ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಕಂಟೆಂಟ್ ಸಿನಿಮಾದೊಂದಿಗೆ ತೆರೆ ಮೇಲೆ ಬರುವ ರಾಜ್, ಇದೀಗ ‘ಟೋಬಿ’ಯಾಗಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ನಿನ್ನೆಯಷ್ಟೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದ, ಪ್ರೇಕ್ಷಕರಿಂದ ಸಕ್ಕತ್ ರೆಸ್ಪಾನ್ಸ್ ಲಭಿಸಿದೆ.

3 ನಿಮಿಷಗಳ ಟ್ರೇಲರ್ ರೀಲಿಸ್ ಆಗಿದ್ದು, ಟ್ರೇಲರ್ ಮೊದಲಾರ್ಧದಲ್ಲಿ ರಾಜ್ ಅಸಹಾಯಕ,ಮುಗ್ದ ಹಾಗೂ ತನ್ನವರೊಂದಿಗೆ ಖುಷಿಯಾಗಿರುವ ವ್ಯಕ್ತಿಯಾಗಿದ್ದರೆ, ದ್ವಿತಿಯಾರ್ಧದಲ್ಲಿ ರಕ್ತ ಸಿಕ್ತ ರೂಪದಲ್ಲಿ ಎದುರಾಳಿಗಳನ್ನು ಬಲಿ ಪಡೆಯುವ ಮಾರಿಯಂತೆ ಕಾಣುತ್ತಿದ್ದಾನೆ. ಈ ಸಿನಿಮಾ ಕೇವಲ ಮಾಸ್ ಅಂಶಗಳನ್ನಷ್ಟೇ ಅಲ್ಲದೇ ಹಲವು ಭಾವನಾತ್ಮಕ ಅಂಶಗಳನ್ನು ಒಳಗೊಂಡಿರುವ ಕಂಟೆಂಟ್ ಸಿನಿಮಾ ಎಂಬುದು ಟ್ರೇಲರ್ ನಿಂದ ತಿಳಿಯುತ್ತದೆ.
ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಆಪ್ತ ಬಾಸಿಲ್ ನಿರ್ದೇಶನ ಮಾಡುತ್ತಿದ್ದು, ರಾಜ್ ಕತೆ, ಚಿತ್ರಕತೆ ಬರೆದಿದ್ದಾರೆ. ಟೋಬಿಗೆ ರವಿ ರೈ ಕಳಸ ಬಂಡವಾಳ ಹೂಡಿದ್ದು, ಮಿದುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ, ಚೈತ್ರಾ ಜೆ ಆಚಾರ್, ಸಂಯುಕ್ತಾ ಹೊರನಾಡು ಹಾಗೂ ಗೋಪಾಲ್ ದೇಶಪಾಂಡೆ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 25ಕ್ಕೆ ರಾಜ್ಯದಾದ್ಯಂತ ತೆರೆಗಪ್ಪಳಿಸಲಿದ್ದು, ಟ್ರೇಲರ್ ನೋಡಿದವರೆಲ್ಲ ‘ಈ ವರ್ಷ ಭಾರತೀಯ ಸಿನಿಮಾ ರಂಗದಲ್ಲಿ ‘ಟೋಬಿ’ ಮಾರಿ ಹಬ್ಬ ಮಾಡ್ತಾನೆ’ ಎನ್ನುತ್ತಿದ್ದಾರೆ.