ಮನುಷ್ಯನ ಕಣ್ಣಿಗೆ ಬೀಳದ ಇನ್ನೂ ಅದೆಷ್ಟೋ ಅಚ್ಚರಿಗಳು ಭೂಮಿಯ ಗರ್ಭದಲ್ಲಿ ಅಡಗಿದೆ ಎಂಬುದು ಪದೇ ಪದೇ ಸಾಬೀತಾಗುತ್ತದೆ. ಇದೀಗ ಅಂತಹದ್ದೇ ಒಂದು ಅಪರೂಪದ ಜೀವಿ ಅಮೆರಿಕಾದಲ್ಲಿ ಸದ್ದು ಮಾಡುತ್ತಿದೆ. ಮುನುಷ್ಯನ ಹಲ್ಲಿನ ರೀತಿಯೇ ಹಲ್ಲುಗಳಿರುವ ಮೀನೊಂದು ಅಲ್ಲಿ ಪತ್ತೆಯಾಗಿದೆ. ಈ ಅಪರೂಪದ ಹಾಗೂ ನಿಗೂಢ ಮೀನಿನ ವಿಶೇಷತೆಗಳೇನು ಎಂಬುದನ್ನ ನೋಡೋಣ.

ಅಮೆರಿಕಾದ ಒಕ್ಲಾಹೋಮಾದಲ್ಲಿ ಈ ಅಪರೂಪದ ಮೀನು ಪತ್ತೆಯಾಗಿದೆ. ಇತ್ತೀಚೆಗಷ್ಟೇ ಅಲ್ಲಿನ ವನ್ಯ ಜೀವಿ ಸಂರಕ್ಷಾಣಾ ಇಲಾಖೆಯು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಚಿತ್ರ ಮೀನಿನ ಫೋಟೊವನ್ನು ಹಂಚಿಕೊಂಡಿದೆ.ಈ ಮೀನಿನ ಹಲ್ಲುಗಳು, ಸ್ವರೂಪವನ್ನು ಕಂಡು ಸಾಕಷ್ಟು ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಮೀನು ಯಾವುದು?
ಒಕ್ಲಾಹೋಮ್ ವನ್ಯಜೀವಿ ಸಂರಕ್ಷಾಣ ಇಲಾಖೆ ಹಾಗೂ ವಿಜ್ಞಾನಿಗಳ ಪ್ರಕಾರ ಪತ್ತೆಯಾಗಿರುವ ಈ ಅಪರೂಪದ ಮೀನು ಪಾಕು ಎಂಬ ಮೀನಿನ ಪ್ರಭೇದಕ್ಕೆ ಸೇರಿದ ದಕ್ಷಿಣ ಆಫ್ರಿಕಾ ಮೂಲದ ಮೀನು. 3.3 ಅಡಿ ಉದ್ದ ಹಾಗೂ 88 ಪೌಂಡ್ಸ್ ತೂಕವಿರುವ ಈ ಮೀನು ಶುದ್ಧ ಸಸ್ಯಹಾರಿ ಹಾಗೂ ಮನುಷ್ಯಾ ಅಥವಾ ಇನ್ನಿತರ ಪ್ರಾಣಿಗಳಿಗೆ ಇದು ಹಾನಿ ಮಾಡುವುದಿಲ್ಲ ಎನ್ನಲಾಗಿದೆ. ಆದರೂ ಈ ಅಪರೂಪದ ಮೀನಿನ ಫೋಟೋ ಸಕ್ಕತ್ ವೈರಲ್ ಆಗಿದೆ.