2023ರ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹತ್ತಾರು ದೇಶಗಳ ಮೈದಾನ ಸಮರಕ್ಕೆ ಇನ್ನೂ ಕೇವಲ ಎರಡು ತಿಂಗಳು ಬಾಕಿ ಇದೆ. ಅಕ್ಟೋಬರ್ 5ರಿಂದ ಆರಂಭವಾಗಲಿರುವ ಒನ್ ಡೇ ವಿಶ್ವಕಪ್ ಗೆ ಈಗಿನಿಂದಲೇ ICC ಅದ್ದೂರಿ ಪ್ರಚಾರ ಆರಂಭ ಮಾಡಿದೆ. ಇದೀಗ ಈ ಭರ್ಜರಿ ಪ್ರಚಾರಕ್ಕೆ ಬಾಲಿವುಡ್ ಕಿಂಗ್ ಶಾರುಕ್ ಖಾನ್ ಕೈ ಜೋಡಿಸಿದ್ದಾರೆ. ICC ಬಿಡುಗಡೆ ಮಾಡಿರುವ ಭರ್ಜರಿ ಶಾರುಖ್ ಖಾನ್ ಖಡಕ್ ವಾಯ್ಸ್ ಗೆ ಕ್ರಿಕೆಟ್ ಪ್ರಿಯರು ಫಿದಾ ಆಗಿದ್ದಾರೆ.
ವಿಶ್ವಕಪ್ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ICC ಈಗಿನಿಂದಲೇ ಭರ್ಜರಿ ಪ್ರಚಾರ ಆರಂಭಿಸಿದೆ. ಈ ನಿಟ್ಟಿನಲ್ಲಿ ನಿನ್ನೆಯಷ್ಟೇ ಸ್ಪೆಷಲ್ ಪ್ರೋಮೊ ಬಿಡುಗಡೆ ಮಾಡಲಾಗಿದೆ. ಪ್ರೋಮೊದಲ್ಲಿ ಶಾರುಖ್ ಖಡಕ್ ವಾಯ್ಸ್ ಸಕ್ಕತ್ ಸೌಂಡ್ ಮಾಡುತ್ತಿದೆ. ಶಾರುಖ್ ನಿರೂಪಣೆಯಿಂದಾಗಿ ಪ್ರೋಮೊ ಇನ್ನಷ್ಟು ಅದ್ಭುತವಾಗಿ ಮೂಡಿಬಂದಿದೆ. ಇನ್ನುಳಿದಂತೆ ಶುಭಮನ್ ಗಿಲ್, ದಿನೇಶ್ ಕಾರ್ತಿಕ್ ಈ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಾರಿಯ ಒನ್ ಡೇ ವರ್ಲ್ಡ್ ಕಪ್ ಆತಿಥ್ಯವನ್ನು ಭಾರತ ವಹಿಸಿಕೊಂಡಿದೆ. ಈ ಕಾರಣದಿಂದ ICC ಈಗಿನಿಂದಲೇ ಕ್ರಿಕೆಟ್ ಅಭಿಮಾನಿಗಳನ್ನು ಎಚ್ವರಿಸಲು ಭರ್ಜರಿ ಪ್ರಚಾರ ಆರಂಭಿಸಿದೆ. ಸದ್ಯ, ಈ ಪ್ರಚಾರ ಅಭಿಯಾನಕ್ಕೆ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕೈಜೋಡಿಸಿದ್ದಾರೆ. ಬಿಡುಗಡೆಯಾಗಿರುವ ಫ್ರೋಮೊ 2ನಿಮಿಷ ಇದ್ದು, ಅದ್ಭುತವಾಗಿ ಮೂಡಿ ಬಂದಿದೆ. ಜೊತೆಗೆ ಈ ಶಾರುಖ್ ಖಾನ್ ನಿರೂಪಣೆಯ ವರ್ಲ್ಡ್ ಕಪ್ ಪ್ರೋಮೊ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.