ಒತ್ತಡಗಳು ಸಾಮಾನ್ಯವಾಗಿ ಬಂದೇಬರುತ್ತದೆ. ಒತ್ತಡ ಬಂದಾಗ ದೈಹಿಕ ಮತ್ತು ಮಾನಸಿಕ ಶಕ್ತಿ ಕುಗ್ಗುತ್ತದೆ. ದೇಹದಲ್ಲಿ ಶಕ್ತಿ ಇಲ್ಲ ಅಂದಾಗ ಮೆದುಳಿನ ಕಾರ್ಯ ಕಡಿಮೆಯಾಗುತ್ತದೆ. ಸರಿಯಾಗಿ ಸ್ಪಂದಿಸುವುದಿಲ್ಲ. ನಿಮ್ಮ ಆತಂಕ, ಭಯ,ಗಾಬರಿ,ಉದ್ವೇಗ ಎಲ್ಲವೂ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ನಿಮ್ಮ ದೈಹಿಕ ಶಕ್ತಿಯಾಗಿರುತ್ತದೆ. ರಾತ್ರಿ ಇಡಿ ನಿದ್ರೆ ಬಿಡುವುದರಿಂದ ಒತ್ತಡಗಳು ಹೆಚ್ಚಾಗುತ್ತದೆ. ರಾತ್ರಿ ಎಂಟು ಗಂಟೆಗಳ ನಿದ್ದೆಯನ್ನು ಮಾಡಬೇಕು.ನೀರನ್ನು ಕಡಿಮೆ ತೆಗೆದುಕೊಳ್ಳುವುದು ಇವೆಲ್ಲವೂ ಒತ್ತಡಗಳಿಗೆ ಕಾರಣವಾಗಿದೆ.
ಮುಖ್ಯವಾಗಿ ಸಂಜೆ ಸಮಯದಲ್ಲಿ ಒತ್ತಡಗಳು ಉಂಟಾಗುತ್ತದೆ. 8ಗಂಟೆಗಿಂತ ಹೆಚ್ಚು ಕೆಲಸ ಮಾಡುವುದರಿಂದ ಸರಿಯಾದ ಆಹಾರ ಮತ್ತು ನೀರನ್ನು ಸರಿಯಾಗಿ ಆಯಾ ಸಮಯಕ್ಕೆ ಸೇವನೆ ಮಾಡುವುದು ಸೂಕ್ತ. ತುಳಸಿ ಎಲೆ ಬೇಯಿಸಿ ಕಷಾಯದ ರೀತಿ ಕುಡಿಯುವುದರಿಂದ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ಮೊಳಕೆಕಾಳುಗಳು ,ಕಾಳುಗಳು ಇವುಗಳ ಸೇವನೆ ಒಳ್ಳೆಯದು.
ಬಾದಾಮಿ ಮತ್ತು ಬಾದಾಮಿ ಹಾಲಿನಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು. ಯೋಗ ,ಪ್ರಾಣಯಮ ಮಾಡುವುದರಿಂದ ನಿಮ್ಮ ಸಮಸ್ಯೆಯಿಂದ ಹೊರ ಬರಬಹುದು. ಶುಂಠಿ, ವೀಳ್ಯದೆಲೆ, ಪೈನಾಪಲ್ ಇವುಗಳು ಒತ್ತಡಗಳಿಂದ ನಮ್ಮನ್ನು ಸಂರಕ್ಷಿಸುತ್ತದೆ. ಇಂತಹ ಆಹಾರ ಸೇವನೆ ನಮ್ಮ ದೇಹಕ್ಕೆ ಒಳ್ಳೆಯದು.