ಸಂಸಾರದಲ್ಲಿ ಸಾಮರಸ್ಯವನ್ನು ಕಂಡುಕೊಂಡು ಅದರ ಮಹತ್ವವನ್ನು ಕಂಡುಕೊಳ್ಳುವುದು ಮುಖ್ಯ. ಕೆಲವೊಂದು ಬಾರಿ ವೈವಾಹಿಕ ಜೀವನದಲ್ಲಿ ಗಂಡ ಹೆಂಡತಿಯ ಕೈಗೆ ಸಿಗದೆ ಅವರಿಬ್ಬರು ಹೆಚ್ಚಾಗಿ ಕಾಲ ಕಳೆಯದೆ ಇರುತ್ತಾರೆ. ಇದರಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗುತ್ತದೆ. ವಿವಾಹ ಅನ್ನುವಂತಹದ್ದು ಮತ್ತೊಬ್ಬ ವ್ಯಕ್ತಿಯನ್ನು ನಮ್ಮ ಜೀವನದಲ್ಲಿ ಸೇರ್ಪಡೆ ಮಾಡಿಕೊಳ್ಳುವಂತಹದ್ದಾಗಿದೆ. ಅವರ ಜೊತೆ ಮಾತು ಬಿಡುವುದರಿಂದ ಪರಸ್ಪರ ಮಾತನಾಡುವುದನ್ನು ಬಿಟ್ಟುಬಿಟ್ಟರೆ ಇಬ್ಬರ ಮಧ್ಯೆ ಒಂದು ಗೋಡೆ ಏರ್ಪಡಾಗುತ್ತದೆ.
ಹೊಂದಾಣಿಸಿಕೊಂಡು ಹೋಗಲು ಸಾಧ್ಯವಾಗದೇ ಇರುತ್ತದೆ. ಇದರಿಂದ ದೈಹಿಕ ಸಂಬಂಧವೇ ಕಳೆದು ಹೋಗುತ್ತದೆ. ಜೀವನದ ಕೆಲವೊಂದು ವಿಷಯದಲ್ಲಿ ಗಂಡ ಹೆಂಡತಿ ಮಾತನ್ನು ಆಡಬೇಕು. ಮಾತನಾಡದೆ ಇರುವುದು ತಪ್ಪು. ದಾಂಪತ್ಯದಲ್ಲಿ ಅರ್ಥ ಮಾಡಿಕೊಳ್ಳುವ ಗುಣವಿರಬೇಕು. ದಾಂಪತ್ಯದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರು ಸಮಾನವಾಗಿ ತಮ್ಮ ತಮ್ಮ ಮನೆ ಕಡೆಯವರನ್ನು ಒಳ್ಳೆಯ ರೀತಿಯಲ್ಲಿ ನಿಭಾಯಿಸಬೇಕು. ಯಾವುದೇ ವಿಷಯದಲ್ಲೂ ಜಗಳವಾಗಿದ್ದರು ಮಾತುಕತೆಯಿಂದ ಸರಿ ಮಾಡಿಕೊಳ್ಳುವುದು ಉತ್ತಮ.
ದಾಂಪತ್ಯದಲ್ಲಿ ಪತಿ ಪತ್ನಿಗೆ, ಪತ್ನಿ ಪತಿಗೆ ಸಮಯವನ್ನು ನೀಡಬೇಕು. ಇಬ್ಬರು ಜೊತೆಗೂಡಿ ದೇವಸ್ಥಾನಗಳಿಗೆ , ತರಕಾರಿಗಳನ್ನು ಕೊಳ್ಳಲು ಹೀಗೆ ಎಲ್ಲೇಲ್ಲಿ ಸಮಯ ಸಿಗುತ್ತದೆ ಅಲ್ಲಿ ಅವರ ಜೊತೆಗೆ ಕಾಲವನ್ನು ಕಳೆಯಬೇಕು. ಹೆಚ್ಚಿನ ಮಾತುಕತೆ ಇದ್ದರೆ ಅನ್ಯೋನ್ಯತೆ ಹೆಚ್ಚಾಗುತ್ತದೆ. ಇದನ್ನು ಬೆಳೆಸಿಕೊಳ್ಳುವುದು ಮುಖ್ಯ.