ಮನುಷ್ಯನಿಗೆ ಸಾಮಾನ್ಯವಾಗಿ ಕಾಣೋ ಸಮಸ್ಯೆ ಒತ್ತಡ, ಮನಸ್ಸಿನ ಶಕ್ತಿಯನ್ನು ಹೆಚ್ಚಳ ಮಾಡಿಕೊಂಡು ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ಯಾಕೆ ಈ ಒತ್ತಡ ನಮ್ಮಲ್ಲಿ ಕಾಡುತ್ತೆ, ಇವೆಲ್ಲದಕ್ಕೂ ಮನೆ ಮದ್ದಿನ ಮೂಲಕ ಪರಿಹಾರ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಒತ್ತಡಗಳು ಬಂದಾಗ ಅದರಿಂದ ತೊಂದರೆ ಆಗುತ್ತದೆ ಎಂದುಕೊಂಡು ಔಷಧಗಳನ್ನು ತಗೆದುಕೊಳ್ಳುವುದನ್ನು ನೋಡಿದ್ದೇವೆ. ಆದರೆ ಸ್ಟ್ರೆಸ್ ಅನ್ನೋದು ದೇಹಕ್ಕೆ ಉತ್ತಮವ ಅಥವಾ ತೊಂದರೆನಾ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಸ್ಟ್ರೆಸ್ ಅನ್ನೋದು ಅನುಭವಕ್ಕೆ ಬರಬೇಕಾದರೆ ಯಾವಾಗ ನಿಮ್ಮ ದೈಹಿಕ ಶಕ್ತಿಯನ್ನ ಕಳೆದುಕೊಳ್ಳುತ್ತಿರೋ ಅವಾಗ ಈ ಮಾನಸಿಕ ಒತ್ತಡ ಎನ್ನುವುದು ನಮ್ಮನ್ನ ಕಾಡುತ್ತೆ.
ದೇಹದಲ್ಲಿ ಶಕ್ತಿ ಇಲ್ಲವಾದರೆ ಮೆದುಳು ಸ್ಪಂದಿಸುವುದು ಕಡಿಮೆ ಆಗುತ್ತೆ, ದೈಹಿಕ ನಿಶಕ್ತಿ ಆದಾಗ ಈ ಸಮಸ್ಯೆಗಳು ಉಲ್ಬಣಿಸುತ್ತದೆ. ಮುಖ್ಯವಾಗಿ ನಿದ್ದೆಯನ್ನು ಹಾಳು ಮಾಡಿಕೊಳ್ಳುವುದರಿಂದ ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಒಬ್ಬ ಮನುಷ್ಯನಿಗೆ ನಿದ್ದೆ ಅತೀ ಮುಖ್ಯವಾದದ್ದು, ತನ್ನ ದೇಹವನ್ನು ಹತೋಟಿಯಲ್ಲಿ ಇಡಬೇಕಾದರೆ ನಿದ್ದೆ ಬಹಳ ಮುಖ್ಯ, ಹಾಗಾಗಿ ಕನಿಷ್ಠ ಒಂದು ದಿನಕ್ಕೆ 8 ಘಂಟೆ ನಿದ್ದೆ ಮಾಡಬೇಕು. ಇನ್ನೂ ಆಹಾರದಲ್ಲಿ ಅಪೌಷ್ಟಿಕತೆ, ಉಪವಾಸ ಮಾಡುವುದು ಹಾಗೂ ಆಹಾರ ಎಂದುಕೊಂಡು ಪೌಷ್ಟಿಕಾಂಶ ರಹಿತ ಆಹಾರವನ್ನು ಸೇವನೆ ಮಾಡುವಂತದ್ದು, ನಿಮ್ಮ ದೇಹದಲ್ಲಿ ಒತ್ತಡವನ್ನು ಹೆಚ್ಚಿಸುವಂತೆ ಮಾಡುತ್ತದೆ.
ನೀರನ್ನ ಕಡಿಮೆ ಕುಡಿಯುವುದು, ದುಶ್ಚಟಗಳಿಗೆ ಬಲಿಯಾಗಿ ಮಧ್ಯಪಾನ, ಧೂಮಪಾನ ಮಾಡುವಂತದ್ದು, ಹಲವಾರು ರೀತಿಯಲ್ಲಿ ದೇಹಕ್ಕೆ ತೊಂದರೆಯನ್ನ ಕೊಟ್ಟು ಒತ್ತಡಕ್ಕೆ ಸಿಲುಕುತ್ತೇವೆ. ಮುಖ್ಯವಾಗಿ ಸ್ಟ್ರೆಸ್ ಯಾವಾಗ ಆಗುತ್ತೆ ಎನ್ನುವುದಾದರೆ, ಸಂಜೆ 6 ರ ನಂತರ ನಿಮಗೆ ಸ್ಟ್ರೆಸ್ ಫೀಲ್ ಆಗುತ್ತೆ, ಯಾಕೆಂದ್ರೆ ದೇಹಕ್ಕೆ ಇಷ್ಟೇ ಕೆಲಸ ಮಾಡಬೇಕು ಎನ್ನುವ ನಿಯಮ ಇರುತ್ತೆ, ಉದಾಹರಣೆಗೆ ನಾವು ವೃತ್ತಿ ಜೀವನದಲ್ಲಿ 8 ಘಂಟೆಗಳ ಕೆಲಸ ಮಾಡೋಕೆ ದೇಹ ಸ್ಪಂದಿಸುತ್ತೆ, ಮುಖ್ಯವಾಗಿ ಸ್ಟ್ರೆಸ್ ಅನ್ನೋದು ಕಾಯಿಲೆಯಲ್ಲ ಅದೊಂದು ಸಣ್ಣ ಸಮಸ್ಯೆ, ಇದಕ್ಕೆ ಉತ್ತಮ ಪರಿಹಾರ ಒಳ್ಳೆಯ ನಿದ್ದೆ ಹಾಗೂ ಉತ್ತಮ ಆರೋಗ್ಯ ಪದ್ಧತಿ.
ಹಾಗಾದ್ರೆ ಸ್ಟ್ರೆಸ್ ಕಡಿಮೆ ಮಾಡಲು ಮನೆ ಮದ್ದು ಯಾವುದು ಅಂತಾ ನೋಡುವುದಾದ್ರೆ, ತುಳಸಿ ಎಲೆಯನ್ನ ಸೇವಿಸುವುದರಿಂದ ಸ್ಟ್ರೆಸ್ ಕಮ್ಮಿ ಆಗುತ್ತದೆ, ತುಳಸಿ ಎಲೆಯನ್ನ ಬೇಯಿಸಿ ಕಷಾಯದ ರೀತಿ ಸೇವನೆ ಮಾಡುವುದರಿಂದಲೂ ನಿಮ್ಮ ಮಾನಸಿಕ ಒತ್ತಡ ದೂರವಾಗುತ್ತೆ. ಇನ್ನೂ ವೀಳ್ಯದೆಲೆಯನ್ನ ತಲೆಗೆ ಲೇಪನ ಮಾಡಿಕೊಳ್ಳುವುದರಿಂದ ನಿಮ್ಮ ತಲೆ ನೋವು ಕಡಿಮೆಯಾಗುತ್ತದೆ. ಹಸಿರು ತರಕಾರಿ ಸೊಪ್ಪು, ಹಣ್ಣುಗಳನ್ನು ಹೆಚ್ಚಾಗಿ ಬಳಸುವುದರಿಂದ ನೀವು ಮಾನಸಿಕ ಒತ್ತಡದಿಂದ ದೂರವಾಗಬಹುದು.
ಬಾದಾಮಿ ಕೂಡ ಒಂದೊಳ್ಳೆ ಔಷಧಿಯಾಗಿ ಪರಿಣಾಮ ಬೀರುತ್ತೆ, ಬಾದಾಮಿ ಹಾಲು ಕುಡಿಯುವುದರಿಂದಲೂ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಶ್ವಗಂಧದ ಚೂರ್ಣವನ್ನು ಬಳಸುವುದರಿಂದ ಇದರ ಜೊತೆ ಪ್ರಾಣಾಯಾಮ, ಯೋಗಾಸನ, ಆಸನಗಳಲ್ಲಿ ಗರುಡಾಸನ ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನೂ ಹಣ್ಣುಗಳಲ್ಲಿ ಬಾಳೆ ಹಣ್ಣು, ಶತವರಿ, ಹಣ್ಣುಗಳನ್ನು ಉಪಯೋಗಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.
ಶುಂಠಿ,ವೀಳ್ಯದೆಲೆ, ತುಳಸಿ, ಪೈನಾಪಲ್ ಈ ಆಹಾರವನ್ನು ಬಳಸುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆಮಾಡಬಹುದು. ಇದೆ ರೀತಿಯ ಹೆಚ್ಚು ಹೆಚ್ಚು ಮನೆ ಮದ್ದುಗಳನ್ನ ತಿಳಿದುಕೊಳ್ಳಬೇಕು ಎಂದರೆ ಯೋಗವನ ಬೆಟ್ಟದ 108 ಕಾಯಿಲೆಗೆ ತಾವೇ ವೈದ್ಯರು ಎನ್ನುವಂತ ಮನೆಮದ್ದು ಪುಸ್ತಕವನ್ನು ತರೆಸಿಕೊಂಡು ಓದಿ ತಿಳಿದುಕೊಳ್ಳಬಹುದಾಗಿದೆ. ಗುಣವಾದ ಸಮಸ್ಯೆಯಿದ್ದಲ್ಲಿ ಯೋಗವನ ಬೆಟ್ಟದ ಶಾಖೆಗೆ ಭೇಟಿ ನೀಡಬಹುದಾಗಿದೆ.