ಅನೇಕ ಯುವಕ ಅಥವಾ ಯುವತಿಯರಲ್ಲಿ ಕಾಣುವ ಬಹುದೊಡ್ಡ ಸಮಸ್ಯೆ ಮದುವೆ.30 ವರ್ಷವಾದರು ಮದುವೆಯಾಗಿಲ್ಲ ಪ್ರತಿ ನಿತ್ಯ ಸಾಕಷ್ಟು ಜನರು ಇದೆ ವಿಚಾರಕ್ಕೆ ಕೊರಗುತ್ತಿರುತ್ತಾರೆ. ತಂದೆ ತಾಯಿ ನನ್ನ ಮಗ ಅಥವಾ ಮಗಳು ಮದುವೆಯಾಗಿಲ್ಲ ಎನ್ನುವ ಚಿಂತೆ ಸಾಕಷ್ಟು ಬಾರಿ ಕಾಡುತ್ತೆ ಹಾಗಾದ್ರೆ ಇದಕ್ಕೆ ಕಾರಣವೇನು. ಯಾಕಾಗಿ ಮದುವೆ ನಿಶ್ಚಯವಾಗುತ್ತಿಲ್ಲ ಎನ್ನುವುದನ್ನು ನಾವು ಜಾತಕದಲ್ಲಿ ನೋಡಿ ಸರಿಯಾಗಿ ಸ್ಥಾನ ಫಲವನ್ನ ನೋಡಿ ಪರಿಹಾರ ಹುಡುಕಿಕೊಳ್ಳಬೇಕಾಗುತ್ತೆ. ಅದಕ್ಕಾಗಿ ಜಾತಕದಲ್ಲಿ ಕಳಂಕ ಸ್ಥಾನಧಿಪತಿ ಯಾರಾಗಿದ್ದಾನೆ, ಅವನು ಎಲ್ಲಿದ್ದಾನೆ ಲಗ್ನದ ದೃಷ್ಟಿ ಎಲ್ಲಿದೆ, ಲಗ್ನಾಧಿಪತಿ ಯಾರು, ಇದೆಲ್ಲವನ್ನು ಕೂಡ ಸರಿಯಾಗಿ ನಾವು ಗುರುತಿಸಿ ನೋಡುತ್ತೇವೆ.
ಹಾಗಾಗಿ ಈ ತರದ ಸಮಸ್ಯೆಗಳು ಜಾಸ್ತಿಯಾಗಿ ಬರೋದು ಕುಜ ದೋಷ ಹಾಗೂ ಸರ್ಪ ದೋಷದ ಸಮಸ್ಯೆಯಿಂದ, ಈ ಲಗ್ನ ವಿಳಂಬ ಸಮಸ್ಯೆಗಳು ಪರಿಣಮಿಸುತ್ತೆ ಹಾಗಾಗಿ, ಈ ತರದ ಸಮಸ್ಯೆಗಳನ್ನು ನೀವು ಜಾತಕ ತೋರಿಸಿ ಸರಿಪಡಿಸಿಕೊಳ್ಳಬೇಕಾಗುತ್ತೆ. ತುಂಬಾ ಜನ ಮದುವೆಯಂತದಾಗ ಎಲ್ಲಾ ಸಾಲಗಳನ್ನು ನೋಡಿ ಗುಣಕೂಟ ಸರಿಯಾಗಿ ಬರುತ್ತಾ ನೋಡಿ,28 ಬರುತ್ತೆ 32 ಬರುತ್ತೆ ಹಾಗಾದ್ರೆ ಮದುವೆ ಮಾಡುವ ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಈ ರೀತಿ ಮದುವೆಗಳು ಆಗುತ್ತೆ ಆದ ನಂತರದಲ್ಲಿ ಈ 28,30,32 ಗುಣಕೂಟಗಳು ಬಂದಾಗ ಬೇಕಾದಷ್ಟು ಜನ ನಮಗೆ ಡಿವೋರ್ಸ್ ಕೊಡಿಸಿ ಎಂದು ಪಟ್ಟು ಹಿಡಿಯುತ್ತಾರೆ.
ಕೇವಲ ಗುಣಕೂಟವನ್ನ ನೋಡಿ ಮದುವೆಯಾದರೆ ಸಾಲದು, ಕೇವಲ ಮದುವೆಯಾದ್ರೆ ಸಾಕು ಅಂತಾ ಮದುವೆ ಮಾಡೋದಲ್ಲ, ಮದುವೆಯಾದ ನಂತರ ಜೀವನ ಹೇಗಿರುತ್ತೆ ಮುಂದೆ ಇವರು ಗಂಡ ಹೆಂಡತಿ ಹೊಂದಿಕೊಂಡು ಚೆನ್ನಾಗಿ ಇರುತ್ತಾರಾ. ಇದೆಲ್ಲವನ್ನ ನೋಡಬೇಕಾಗುತ್ತೆ ಶುಕ್ರ ಸ್ಥಾನವನ್ನ ನೋಡಬೇಕಾಗುತ್ತೆ, ಇವೆಲ್ಲವನ್ನೂ ನೋಡಿದಾಗ ಇವರ ದಾಂಪತ್ಯ ಜೀವನ ಚೆನ್ನಾಗಿರುತ್ತಾ ಇಲ್ವಾ ಎಂದು ತಿಳಿಯಬಹುದಾಗಿದೆ. ಬಹಳ ಜನರ ಜಾತಕ ತಂದಾಗ ಇವರು ದೂರ ಇರ್ತಾರೆ ಅಥವಾ ಅವ್ರ್ ದೂರ ಇರ್ತಾರೆ ಇವ್ರ್ ಒಂದು ದೇಶ ಅವ್ರ್ ಒಂದು ದೇಶ ಇಲ್ಲಾ ಅಂದ್ರೆ ಇಬ್ಬರು ಒಟ್ಟಿಗೆ ಇರೋಕೆ ಸಾಧ್ಯನೇ ಇಲ್ಲಾ ಅಂತಾ ಜಾತಕ ನೋಡಿದ ತಕ್ಷಣ ಹೇಳ್ತಿವಿ.
ಜಾತಕದಲ್ಲಿ ಕೇವಲ ಗುಣಕೂಟವನ್ನ ನೋಡುವುದು ಮಾತ್ರವಲ್ಲದೆ, ಸ್ಥಾನವನ್ನು ಕೂಡ ನೋಡಬೇಕಾಗುತ್ತೆ, ಹಾಗಾಗಿ ಕೇವಲ ಮದುವೆಗೆ ನೀವು ಜಾತಕ ಸಾಲವಳಿ ನೋಡುವುದು ಮಾತ್ರವಲ್ಲ ಅದರ ಜೊತೆ ಜಾತಕ ಹೊಂದಾಣಿಕೆ ಬರುತ್ತಾ ಶತ್ರುತ್ವ ಬರುತ್ತಾ, ಗೃಹ ಮೈತ್ರಿ ಚೆನ್ನಾಗಿದೆಯೇ ಇದೆಲ್ಲವನ್ನ ಗಮನಿಸಿಕೊಳ್ಳಬೇಕಾಗುತ್ತೆ. ಹಾಗಾಗಿ ಮದುವೆ ವಿಚಾರದಲ್ಲಿ ಇತ್ತೀಚಿಗೆ ಸಾಕಷ್ಟು ತೊಂದರೆಗಳು ಬರುತ್ತಿದೆ. ಈ ಕುಜ ದೋಷಯಿದ್ದಾಗ ಕುಜನಿಗೆ ಅಧಿಪತಿಯಾದಂತ ನರಸಿಂಹ ಸ್ವಾಮಿಗೆ ಅಥವಾ ಸುಬ್ರಹ್ಮಣ್ಯ ದೇವರಿಗೆ ಸೇವೆಯನ್ನ ಮಾಡುವುದು, ಕುಜ ದೋಷ ಪರಿಹಾರ ಮಾಡುವಂತದ್ದು, ಕುಜ ಜಪವನ್ನು ಮಾಡುವಂತದ್ದು, ಈ ರೀತಿ ಪರಿಹಾರ ಮಾಡಿಕೊಳ್ಳುವುದರಿಂದ ಆ ದೋಷವನ್ನು ದೂರ ಮಾಡಿಕೊಳ್ಳಬಹುದು.
ಸರ್ಪ ದೋಷವೇ ಅಧಿಕವಾಗಿ ಇದ್ದಾಗ ಸರ್ಪ ಶಾಂತಿಯನ್ನೇ ಅಧಿಕವಾಗಿ ಮಾಡುವಂತದ್ದು, ಈ ಸರ್ಪ ಶಾಂತಿ ಮಾಡಿಸಿದವರಿಗೆ ಹೆಚ್ಚು ಕಡಿಮೆ 48 ದಿನಗಳಲ್ಲಿ ಮದುವೆ ನಿಶ್ಚಯವಾಗಿರುವಂತದ್ದು ಸಾಕಷ್ಟಿದೆ. ಒಂದು ವೇಳೆ ಇವೆಲ್ಲಾ ಮಾಡಿದ ನಂತರವು ತುಂಬಾ ದಿನವಾದ್ರೂ ಕೂಡ 90 ದಿನದಲ್ಲಿ ಮದುವೆ ನಿಶ್ಚಯವಾಗುತ್ತೆ. ಇವೆಲ್ಲ ಮಾಡುವುದರಿಂದ ಮದುವೆಯಾಗುವುದು ಅಷ್ಟೇ ಅಲ್ಲಾ ಸುಖ ಶಾಂತಿಯ ಜೀವನವನ್ನು ನೆಡೆಸಬಹುದು. ನಿಮಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಈಗಲೇ ನಮ್ಮ ಕನ್ನಡ ಯೂಟ್ಯೂಬ್ ಚಾನಲ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.