ಓಟಿಟಿ ಭಾರತದ ಚಿತ್ರರಂಗದಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದು, ಕರೋನ ಸಮಯದಲ್ಲಿ, ಕನ್ನಡದ ಹಲವಾರು ಚಿತ್ರಗಳು ಥಿಯೇಟರ್ ನಲ್ಲಿ ಸಕ್ಸಸ್ ಕಂಡಿಲ್ಲವಾದರು. ಓಟಿಟಿಯಲ್ಲಿ ಸೂಪರ್ ಹಿಟ್ ಆಗುವ ಮುಖಾಂತರ ಅನೇಕ ಸಿನಿಮಾಗಳು ಇಂದಿಗೂ ಜನ ಮಾನಸಗಳಲ್ಲಿ ಸಾಕಷ್ಟು ಹೆಸರು ಮಾಡಿದೆ. ಅಂತಹ ಚಿತ್ರಗಳ ಪೈಕಿ ಕವಲು ದಾರಿ ಸಿನಿಮಾ ಕೂಡ ಒಂದು. ಹೌದು ಕಂಪ್ಲೀಟ್ ಪತ್ತೇದಾರಿ ಕಥೆಯುಳ್ಳ ಈ ಚಿತ್ರ ಸುಮಾರು 20 ವರ್ಷದ ಒಂದು ಕೊಲೆಯನ್ನ ತನಿಖೆ ಮಾಡಿ ಅದಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡುವುದೇ ಈ ಚಿತ್ರದ ಕಥಾಹಂದರ ವಾಗಿತ್ತು.

ಈ ಚಿತ್ರದಲ್ಲಿ ರಿಷಿ ನಟನಾಗಿ ಅಭಿನಯಿಸಿದ್ದು, ಈ ಚಿತ್ರದ ಮೂಲಕವೇ ಬಹುಪಾಲು ಕನ್ನಡಿಗರಿಗೆ ರಿಷಿಯ ಪರಿಚಯವಾದದ್ದು. ವೆಬ್ ಸಿರೀಸ್ ನಿರ್ಮಾಣ ಇದೀಗ ಕನ್ನಡ ಸಿನಿ ದುನಿಯಾದಲ್ಲೂ ಜೋರಾಗಿದ್ದು, ಕೆಲವು ಫೇಮಸ್ ನಟ, ನಟಿಯರು ಕೂಡ ವೆಬ್ ಸಿರೀಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕನ್ನಡದ ಮೋಸ್ಟ್ ಟ್ಯಾಲೆಂಟೆಡ್ ನಟ ರಿಷಿ ಕೂಡ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ರಿಷಿ ಕಾಮಿಡಿ, ಲವ್, ಸಸ್ಪೆನ್ಸ್ ಹೀಗೆ ವಿವಿಧ ಆಯಾಮಗಳಿಗೆ ಹೊಂದುವ ನಟನಾಗಿದ್ದು, ಈ ಹಿಂದೆ ಆಪರೇಷನ್ ಅಲಮೇಲಮ್ಮ, ಕವಲು ದಾರಿ, ನೋಡಿ ಸ್ವಾಮಿ ಇಂತಹ ವಿಭಿನ್ನ ಚಿತ್ರಗಳಲ್ಲಿ ತನ್ನದೇಯಾದಂತ ಮ್ಯಾನರಿಸಂ ಮೂಲಕ ಹೆಸರು ಮಾಡಿದ್ದಾರೆ.
ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ಬ್ಯುಸಿ ಆಗಿದ್ದ ರಿಷಿ, ಇದೀಗ ವೆಬ್ ಸಿರೀಸ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ಬ್ಯುಸಿ ಆಗಲಿದ್ದಾರೆ.ಟಾಲಿವುಡ್ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಮಹಿ ರಾಘವ್ ನಿರ್ದೇಶನದ ಕ್ರೈಮ್ ಡ್ರಾಮಾ ಶೈತಾನ್ ಮೂಲಕ ತೆಲುಗು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದು, ಈ ವೆಬ್ ಸಿರೀಸ್ ನಲ್ಲಿ ಬಾಲಿ ಎಂಬ ಪಾತ್ರಕ್ಕೆ ರಿಷಿ ಬಣ್ಣಹಚ್ಚಲಿದ್ದಾರೆ.ನಾಯಕ ಹಾಗೂ ಕಳನಾಯಕ ಎರಡು ಪಾತ್ರಗಳಲ್ಲಿ ಬಾಲಿಯಾಗಿ ರಿಷಿ ಕಾಣಿಸಿಕೊಳ್ಳಲಿದ್ದು, ಬಾಲಿ ಪಾತ್ರದ ಸಣ್ಣ ತುಣುಕು ಬಿಡುಗಡೆಗೊಂಡಿದ್ದು, ರಿಷಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದೆ ಜೂನ್ 15 ಕ್ಕೆ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ರಿಷಿ ಅಭಿನಯದ ಶೈತಾನ್ ಬಿಡುಗಡೆಯಾಗಲಿದೆ. ಕೇವಲ ತೆಲುಗು ಮಾತ್ರವಲ್ಲದೆ ತಮಿಳು, ಕನ್ನಡ, ಮಲಯಾಳಂ, ಹಿಂದಿ ವೆಬ್ ಸಿರೀಸ್ ನಲ್ಲೂ ಶೈತಾನ್ ಬಿಡುಗಡೆಗೊಳ್ಳಲಿದೆ. ತೆಲುಗು ಚಿತ್ರರಂಗದಲ್ಲೂ ಕಲಾವಿದರಿದ್ದರು ಕೂಡ ರಿಷಿ ಅಭಿನಯಕ್ಕೆ ಮನಸೋತ ನಿರ್ದೇಶಕರು ತಮ್ಮ ಶೈತಾನ್ ವೆಬ್ ಸಿರೀಸ್ ಗೆ ರಿಷಿಯನ್ನ ಆಯ್ಕೆ ಮಾಡಿದ್ದಾರೆ. ರಿಷಿ ನಟನೆಗೆ ಫಿದಾ ಆದ ನಿರ್ದೇಶಕ ಮಹಿ ರಾಘವ್ ವೆಬ್ ಸಿರೀಸ್ ನಲ್ಲಿ ನಟಿಸುವ ಆಫರ್ ನೀಡಿದ್ದರು.
ಇದಕ್ಕೆ ಒಪ್ಪಿಗೆ ನೀಡಿದ ರಿಷಿ ಇದೀಗ ಶೈತಾನ್ ವೆಬ್ ಸಿರೀಸ್ ನಲ್ಲಿ ಕಮಾಲ್ ಮಾಡಲಿದ್ದಾರೆ. ದೊಡ್ಡ ಮಟ್ಟದ ಬಜೆಟ್ ಹೊಂದಿರುವ ಶೈತಾನ್ ವೆಬ್ ಸಿರೀಸ್ ಮೂಲಕ ಕನ್ನಡದ ನಟ ರಿಷಿ ಭಾರತ ಸಿನಿಮಾ ಲೋಕಕ್ಕೆ ಪರಿಚಯವಾಗಲಿದ್ದು, ಕನ್ನಡ ನಟನ ಪ್ರತಿಭೆಯನ್ನ ಮೆಚ್ಚಿ ಈ ವೆಬ್ ಸಿರೀಸ್ ನಲ್ಲಿ ಅವಕಾಶ ನೀಡಿದ ನಿರ್ದೇಶಕ ಮಹಿ ರಾಘವ್ ಗೆ ಹಾಗೇ ಚಿತ್ರತಂಡ ನಟ ರಿಷಿ ತಮ್ಮ ಧನ್ಯವಾದವನ್ನ ತಿಳಿಸಿದ್ದಾರೆ. ಕಾಮಿಡಿ, ಸಸ್ಪೆನ್ಸ್, ಥ್ರಿಲರ್ ಮೂಲಕ ಕಾಣಿಸಿಕೊಂಡಿದ್ದ ರಿಷಿ ಇದೀಗ ಮಾಸ್ ಲುಕ್ ಮೂಲಕ ತೆರೆಯ ಮೇಲೆ ಮಿಂಚಲು ಸಿದ್ದರಾಗಿದ್ದಾರೆ.