ಈ ಬಾರಿಯ ಬಿಗ್ ಬಾಸ್ “ಸೀಸನ್ 9” ರೋಚಕ ಟ್ವಿಸ್ಟ್ ನೀಡುತ್ತಾ.ಕಾರಣ ಈ ಬಾರಿಯ ವಿಬ್ಬಿನ್ನತೆ.ಕಳೆದ ಎಲ್ಲಾ ಸೀಸನ್ ಗಳಿಗಿಂತಲು ಬಹಳಷ್ಟು ವಿಶೇಷತೆಗಳನ್ನು ಹೊತ್ತು ಈ ಸೀಸನ್ ಶುರುವಾಗಿತ್ತು.ಈ ಸೀಸನ್ ಶುರುವಿನಲ್ಲಿ ಎಷ್ಟು ಹೈಪ್ ಪಡೆದುಕೊಂಡಿತ್ತು ಎಂದರೆ ತಪ್ಪಾಗಲಾರದು.ಮೊದಲ ಓಟಿಟಿಯಲ್ಲಿ ಆರಂಭಿಸಿದ ಮೊದಲ ಸೀಸನ್ ಕೂಡ ಭರ್ಜರಿ ಶುರು ಪಡೆದುಕೊಂಡು ಜನರಿಂದ ಅರ್ಹತೆ ಪಡೆದ ನಾಲ್ಕು ಮಂದಿಯನ್ನು ಅಯ್ಕ ಮಾಡಿ ದೊಡ್ಡ ಮನೆಯ ಪ್ರವೇಶ ಮಾಡಿದ್ದಾರೆ.ಅವರೊಟ್ಟಿಗೆ ಕಳೆದ ಸೀಸನ್ ಗಳಲ್ಲಿ ಉತ್ತಮ ಸ್ಪರ್ದಿಗಳಾಗಿದ್ದವರನ್ನು 5 ಮಂದಿಯನ್ನು ಆಯ್ಕೆ ಮಾಡಿ ಸೀಸನ್ 9ರ ಸ್ಪರ್ದಿಗಳಾಗಿದ್ದಾರೆ.

ಇನ್ನು ನವೀನರ ಪ್ರವೀಣರ ಆಟ ಶುರುವಾಗಿ 7ವಾರಗಳು ಮುಗಿದಿದೆ.ಅರ್ಧ ಪ್ರಯಾಣ ಮುಗಿಸಿರುವ ದೊಡ್ಡ ಮನೆ ಮತ್ತಷ್ಟು ಟ್ವಿಸ್ಟ್ ಗಳ ಮದ್ಯೆ ದೊಡ್ಡ ಮನೆ ಸ್ಪರ್ದಿಗಳು ಮಿಶ್ರ ಅಭಿಪ್ರಾಯಗಳನ್ನು ಹೊತ್ತು ಪಯಣ ನಡೆಸುತ್ತಿದ್ದಾರೆ.ಈಗ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಮಧ್ಯದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಹಾಗೂ ಮಿಡ್ ವೀಕ್ ಎಲಿಮಿನೇಷನ್ ಇದ್ದೆ ಇರುತ್ತದೆ.ಇದೀಗ ಮನೆ ಮಂದಿ ಮಿಡ್ ವೀಕ್ ಎಲಿಮಿನೇಷನ್ ಭಯದಲ್ಲಿ ಇದ್ದಾರೆ.
ಬಿಗ್ ಬಾಸ್ ಮನೆ ಪ್ರವೇಶ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಈ ಮನೆ ಪ್ರವೇಶದ ಟಿಕೆಟ್ ಪಡೆದುಕೊಳ್ಳಲು ಆ ವ್ಯಕ್ತಿಗಳು ಸಮಾಜದಲ್ಲಿ ಗೌರವ ಹಾಗೂ ತನ್ನದೇ ಆದ ರೀತಿಯಲ್ಲಿ ಜಗತ್ತಿಗೆ ಪರಿಚಿತರಾಗಿರಬೇಕು.ಹೀಗಿದ್ದರೆ ಮಾತ್ರ ಇಲ್ಲಿ ಪ್ರವೇಶ ಪಡೆಯಲು ಸಾಧ್ಯ.ಹಾಗೂ ಈ ಮನೆಗೆ ಕೇವಲ ಒಂದೇ ಬಾರಿ ಮಾತ್ರ ಆಹ್ವಾನ ತಮಗೆ ಸಿಕ್ಕ ಅವಕಾಶ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೆ ಇದ್ದರೆ ಅದು ಅವರ ಜೀವನಕ್ಕೆ ಮಾಡಿಕೊಂಡ ದೊಡ್ಡ ನಷ್ಟ ಎಂದರೆ ತಪ್ಪಾಗಲಾರದು. ಹಾಗಾಗಿ ಬಿಗ್ ಬಾಸ್ ಮಂದಿ ತಮಗೆ ನೀಡಿರುವ ಟಾಸ್ಕ್ ಗಳಲ್ಲಿ ಟಪ್ ಕಂಪಿಟೇಶನ್ ಕೊಡುತ್ತಾರೆ.
ಸದ್ಯದಲ್ಲಿ ಬಿಗ್ ಬಾಸ್ ನಲ್ಲಿ ಹೈಪ್ ಪಡೆದುಕೊಂಡಿರುವ ವಿಚಾರ ಎಂದರೆ ಅದು ವೈಲ್ಡ್ ಕಾರ್ಡ್.ಈ ಬಾರಿ ಮಧ್ಯಂತರದಲ್ಲಿ ಯಾವ ಸ್ಪರ್ದಿಗಳು ಬರಬಹುದು ಎಂಬ ಕುತೂಹಲದ ಜೊತೆಗೆ ಒಂದಷ್ಟು ಹೆಸರುಗಳು ಕೂಡ ಕೇಳಿ ಬಂದಿತ್ತು.ಎರಡು ವಾರಗಳ ಹಿಂದೆ ಮನೆಯಿಂದ ಹೊರಬಿದ್ದ “ಸಾನಿಯಾ” ಹಾಗೂ “ನೇಹಾ ಮತ್ತು ಸೋನು ಶ್ರೀನಿವಾಸ್ ಗೌಡ” ಸೇರಿದಂತೆ ಸಾಕಷ್ಟು ಹೆಸರಗಳು ಕೇಳಿ ಬಂತು.ಆದರೆ ಇದೀಗ ಕನ್ಫರ್ಮ್ ಆಗುವ ಮಹಿತಿಯೊಂದಿಗೆ ನಾವು ವೈಲ್ಡ್ ಕಾರ್ಡ್ ಕಂಟೇಸ್ಟೇಟೆಂಟ್ ಯಾರು ಎಂಬ ಸುದ್ದಿ ನಾವು ಹೊತ್ತು ತಂದಿದ್ದೇವೆ. ಯಾರು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಬಿಗ್ ಬಾಸ್ ನ ಓಟಿಟಿ ಸೀಸನ್ ನಲ್ಲಿ ಫೈನಲ್ಸ್ ವರೆಗೂ ಬಂದಿದ್ದ “ಸೋನು ಶ್ರೀನಿವಾಸ್ ಗೌಡ” ಅವರು ಈ ಬಾರಿ ಸೀಸನ್ 9ರ ವೈಲ್ಡ್ ಕಾರ್ಡ್ ಆಗಿ ಬರಲಿದ್ದಾರೆ.ಈ ಬಾರಿ ಬಿಗ್ ಬಾಸ್ ನಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕೆಂದು ಎರಡು ಲಕ್ಷದ ವರೆಗೂ ಶಾಪಿಂಗ್ ಮಾಡಿದ್ದಾರಂತೆ. ಆದರೆ ಇದೀಗ ಸೋನು ಅವರ ಆರೋಗ್ಯ ಹದಗೆತ್ತಿದ್ದರಿಂದ ಬಿಗ್ ಬಾಸ್ ಸೀಸನ್ 9ರ ವೈಲ್ಡ್ ಕಾರ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ ಅಥವಾ ಇಲ್ಲವಾ ಎಂಬ ಗೊಂದಲದಲ್ಲೇ ಅವರೇ ಇದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.ಇನ್ನೆರಡು ವಾರಗಳಲ್ಲಿ ಬಿಗ್ ಬಾಸ್ ಸೀಸನ್9ರ ಮಧ್ಯಂತರ ಸ್ಪರ್ದಿ ಯಾರು ಎಂದು ತಿಳಿಯುವ ವರೆಗೂ ನಾವು ಕಾದು ನೋಡಬೇಕಿದೆ.