ಡಾಲಿ ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವ ‘ಹೆಡ್ ಬುಷ್’ ಸಿನಿಮಾ ಬಿಡುಗಡೆ ಆಗಿದ್ದು, ಅದೇ ಮಾಧ್ಯಮದಲ್ಲಿ ಡಾಲಿ ಧನಂಜಯ್ಗೆ ನರೇಂದ್ರ ಮೋದಿ, ರಾಹುಲ್ ಗಾಂಧಿಯ ಬಗ್ಗೆ ಅಭಿಪ್ರಾಯ ಕೇಳಿದಾಗ ಹಾಗು ರಾಜ್ಯಕ್ಕೆ ಯಾರು ಉತ್ತಮ ಸಿಎಂ? ಧನಂಜಯ್ ಯಾವ ಪಂಥ ಎಂದು ಕೇಳಿದಾಗ ಏನು ಉತ್ತರಿಸಿದ್ದಾರೆ ಗೊತ್ತೆ?ನರೇಂದ್ರ ಮೋದಿ ಬಗ್ಗೆ ಕೇಳಿದಾಗ ಸರಳವಾಗಿ ‘ಪ್ರಧಾನ ಮಂತ್ರಿಗಳು’ ಎಂದು ಉತ್ತರಿಸಿರುವ ಡಾಲಿ ಧನಂಜಯ್, ರಾಹುಲ್ ಗಾಂಧಿ ಎಂದು ಕೇಳಿದಾಗ ‘ವಿರೋಧ ಪಕ್ಷದ ಮುಖಂಡ’ ಎಂದಿದ್ದಾರೆ. ಇಬ್ಬರನ್ನೂ ಹೊಗಳಿಲ್ಲ, ಅಥವಾ ಯಾವೊಬ್ಬ ನಾಯಕನ ಪರವಾಗಿರುವಂತೆ ತೋರಿಸಿಕೊಂಡಿಲ್ಲ. ‘ನಿಮ್ಮ ಪ್ರಕಾರ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಲ್ಲಿ ಉತ್ತಮ ಸಿಎಂ ಯಾರು?’ ಎಂದಾಗ ಮೂವರು ಸಹ ಒಳ್ಳೆಯ ಮಾಸ್ ಲೀಡರ್ಗಳೇ ಎಂದರು.

ಬಡವರ ಮ ಕ್ಳು ಬೆಳೀಬೇಕು’ ಎಂದು ಧನಂಜಯ್ ಹುಟ್ಟುಹಾಕಿರುವ ಅಭಿಯಾನದ ಬಗ್ಗೆಯೂ ಧನಂಜಯ್ಗೆ ಪ್ರಶ್ನೆ ಎದುರಾಗಿದ್ದು, ‘ಬಡವರ ಮಕ್ಳು ಬೆಳೀಬೇಕು’ ಎಂದು ಧನಂಜಯ್ ಹೇಳಿರುವುದು ಚಿತ್ರರಂಗದವರಿಗಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲ, ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲ ಕ್ಷೇತ್ರದಲ್ಲಿಯೂ ಬೆಳೆಯಬೇಕು ಎಂದು ಉತ್ತರಿಸಿದ್ದಾರೆ ಧನಂಜಯ್. ‘ಹಾಗಿದ್ದರೆ, ಬಡವರ ಮಕ್ಕಳು ಎಂದು ರಿಯಾಯಿತಿ ಕೊಡಬೇಕ?’ ಎಂಬ ಪ್ರಶ್ನೆಗೆ ಬಡವರ ಮಕ್ಕಳು ಎಂದು ರಿಯಾಯಿತಿ ಕೊಡಬೇಡಿ, ಜಾಗ ಕೊಡಿ, ಅವಕಾಶ ಕೊಡಿ’ ಎಂದಿದ್ದಾರೆ ಧನಂಜಯ್.
ಧನಂಜಯ್ ಬಲಪಂಥಿಯ ಅಥವಾ ಎಡಪಂಥೀಯ ಎಂದು ಕೇಳಿದ ಪ್ರಶ್ನೆಗೆ ಧನಂಜಯ್ ಕಲಾವಿದ. ಕಲಾವಿದರ ವಿಷಯದಲ್ಲಿ ಈ ರೀತಿಯ ಬಣ ರಾಜಕೀಯ ಇರಬಾರದು’ ಎಂದಿದ್ದಾರೆ. ನಿಮ್ಮ ವಿರೋಧಿಗಳು ಯಾರು ಎಂದು ಕೇಳಿದ ಪ್ರಶ್ನೆಗೆ ನನಗೂ ಗೊತ್ತಿಲ್ಲ ಆದರೆ ನಾನು ಅವರನ್ನೂ ಕೂಡ ಖಂಡಿತವಾಗಿ ಮೆಚ್ಚಿಸುತ್ತೇನೆ ಎಂದಿದ್ದಾರೆ.
ಅಗ್ನಿ ಶ್ರೀಧರ್ ಜೊತೆ ಸಿನಿಮಾ ಮಾಡಬಾರದು ಅಂತಾ ಅನಿಸಿರೋದು ಇದೆಯಾ ಎಂಬ ಪ್ರಶ್ನೆಗೆ, ಅಗ್ನಿ ಶ್ರೀಧರ್ ಒಬ್ಬ ರೈಟರ್ ಆಗಿ ನನಗೆ ತುಂಬಾ ಇಷ್ಟ ಎಂದು ಧನಂಜಯ್ ಹೇಳಿದ್ದಾರೆ. ಮತ್ತೆ ಚಿತ್ರ ನಿರ್ಮಾಣಗಳನ್ನು ಮುಂದುವರೆಸುತ್ತಿರಾ ಎಂದು ಕೇಳಿದ್ದಕ್ಕೆ, ಮತ್ತೆ ಚಿತ್ರ ನಿರ್ಮಾಣಗಳನ್ನು ಮುಂದುವರೆಸುತ್ತೇನೆ. ಆದರೆ ನನ್ನ ಸಿನಿಮಾಗಳಿಗಿಂತ ಕಟೆಂಟ್ ಓರಿಯಂಟೆಡ್ ಸಿನಿಮಾಗಳು ಮತ್ತು ಹೊಸ ಪ್ರತಿಭೆಗಳ ಜೊತೆ ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.