ಬ್ರಿಟನ್ನ ನೂತನ ಪ್ರಧಾನಿ ರಿಷಿ ಸುನಾಕ್ ಭಾರತೀಯ ಮೂಲದವ್ರು ಅಂತ ಇತ್ತ ಭಾರತ ಸೇರಿದಂತೆ ಇಡೀ ಪ್ರಪಂಚ ಹೇಳ್ತಿದ್ರೆ, ಅತ್ತ ಪಾಕಿಸ್ತಾನ ಕೂಡ ರಿಷಿ ನಮ್ಮವ ಅಂತ ಹೇಳ್ತಿದೆ. ಪಾಕಿಸ್ತಾನದಲ್ಲಿ ಈ ವಿಚಾರ ಟ್ರೆಂಡಿಂಗನಲ್ಲಿದೆ. ರಿಷಿ ಕೇವಲ ಭಾರತೀಯ ಮೂಲವನ್ನ ಹೊಂದಿಲ್ಲ, ಪಾಕ್ ಮೂಲವನ್ನ ಹೊಂದಿದ್ದಾರೆ ಅಂತ ಕೆಲವು ಪಾಕ್ ಮಾದ್ಯಮಗಳು, ಸೋಷಿಯಲ್ ಮೀಡಿಯಾ ಬಳಕೆದಾರರು ಪೋಸ್ಟ್ ಹಾಕ್ತಿದ್ದಾರೆ.
ರಿಷಿ ಅಜ್ಜ-ಅಜ್ಜಿ ಈಗಿನ ಪಾಕ್ನ ಪಂಜಾಬ್ ಪ್ರಾಂತ್ಯದ ಗುಜ್ರನ್ವಾಲಾ ನಗರದಲ್ಲಿ ಹುಟ್ಟಿ ಬೆಳೆದಿದ್ದಾರೆ. ಸೋ ರಿಷಿ ಮೇಲೆ ಪಾಕ್ಗೆ ಹಕ್ಕಿದೆ, ಅಂದ್ರೆ ಅವರು ನಮ್ಮವರು ಅಂತ ಟ್ವಿಟರ್ನಲ್ಲಿ ಪಾಕ್ ಯುಸರ್ ಒಬ್ಬ ಬರೆದಿದ್ದಾರೆ. ಇನ್ನೊಬ್ಬ ಯುಸರ್ ಅಂತೂ, ಪಾಕಿಸ್ತಾನಿ ಒಬ್ರು ಇಂಗ್ಲೆಂಡ್ನ ಅತ್ಯುನ್ನತ ಹುದ್ದಗೆ ಆಯ್ಕೆಯಾಗಿದ್ದಾರೆ ಅಂತಲೇ ಬರೆದುಕೊಂಡಿದ್ದಾರೆ.
ರಿಷಿ ಸನಕ್ (Rishi Sunak) ಅವರು ಇಂಗ್ಲೆಂಡ್ನ ಮೊದಲ ಭಾರತೀಯ ಮೂಲದ ಹಾಗೂ ಹಿಂದು ಪ್ರಧಾನಿಯಾಗಿದ್ದಾರೆ. ಅವರು ಅಧಿಕಾರ ಸ್ವೀಕರಿಸುವ ವೇಳೆ, ಹಿಂದೂ ಸಂಪ್ರದಾಯದ ಪವಿತ್ರ ದಾರವನ್ನು ಕಲಾವಾವನ್ನು ಕಟ್ಟಿಕೊಂಡಿರುವುದು ಕಂಡು ಬಂತು. 10 ಡೌನಿಂಗ್ ಸ್ಟ್ರೀಟ್ನಲ್ಲಿ ಅವರು ಮಾತನಾಡುವಾಗ ಅವರ ಕೈಯಲ್ಲಿದ್ದ ಪವಿತ್ರ ದಾರವು ಕ್ಯಾಮೆರಾ ಕಣ್ಣುಗಳಿಗೆ ಕಂಡಿದೆ.