ಅಶ್ವಯುಜ ಅಮಾವಾಸ್ಯೆಯಂದು ಸೂರ್ಯಗ್ರಹಣ ಆಗಮಿಸಿದ್ದು ಭಾರತ ಸಹಿತ ಏಷ್ಯಾ ಖಂಡದ ಮಧ್ಯ ಮತ್ತು ಪಶ್ಚಿಮದ ಪ್ರದೇಶ, ಸಂಪೂರ್ಣ ಯುರೋಪ್ ಖಂಡ, ಆಫ್ರಿಕಾ ಖಂಡದ ಪೂರ್ವೋತ್ತರ ಪ್ರದೇಶಗಳಲ್ಲಿ ಗ್ರಹಣ ಗೋಚರಿಸಲಿದೆ. ಭಾರತದಲ್ಲಿ ಸಂಜೆ 4.29ರಿಂದ ಆರಂಭವಾಗುವ ಗ್ರಹಣವು ಸೂರ್ಯಾಸ್ತದೊಂದಿಗೆ ಮುಕ್ತಾಯವಾಗಲಿದೆ. ಬೆಂಗಳೂರಿನಲ್ಲಿ ಸಂಜೆ 5.12ರಿಂದ 5.56ರವರೆಗೆ ಅಂದರೆ 44 ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದೆ.
ಗ್ರಹಣ ಪರ್ವಕಾಲದಲ್ಲಿ, ಎಂದರೆ ಗ್ರಹಣ ಸ್ಪರ್ಶದಿಂದ ಸೂರ್ಯಾಸ್ತದವರೆಗಿನ ಕಾಲಾವಧಿಯಲ್ಲಿ ನೀರು ಕುಡಿಯುವುದು, ಮಲಮೂತ್ರ ವಿಸರ್ಜನೆ ಮತ್ತು ನಿದ್ದೆ ಈ ಕರ್ಮಗಳು ನಿಷಿದ್ಧವಾಗಿರುವುದರಿಂದ ಅವುಗಳನ್ನು ಮಾಡಬಾರದು. ಮಧ್ಯಾಹ್ನ 12 ಗಂಟೆಯ ಒಳಗೆ ಆಹಾರ ಸೇವಿಸಬೇಕು ಮತ್ತು ಗ್ರಹಣ ಮೋಕ್ಷದ ಬಳಿಕ ಸ್ನಾನ ಮಾಡಿ, ಪೂಜೆ ಪೂರೈಸಿ, ಆಹಾರ ಸಿದ್ಧಪಡಿಸಿಕೊಂಡು ತಿನ್ನಬಹುದಾಗಿದೆ.
ಬರಿಗಣ್ಣಿನಿಂದ ಗ್ರಹಣ ವೀಕ್ಷಿಸಬೇಡಿ. ನೇರವಾಗಿ ಗ್ರಹಣ ವೀಕ್ಷಿಸುವುದು ಕಣ್ಣಿಗೆ ಅಪಾಯಕಾರಿ ಎಂದು ಹೇಳಲಾಗಿದೆ.
ರಾಶಿಯ ಪ್ರಕಾರ ಗ್ರಹಣದ ಫಲ ಗಮನಿಸಿದರೆ ಶುಭ ಫಲ: ವೃಷಭ, ಸಿಂಹ, ಧನು ಮತ್ತು ಮಕರ ರಾಶಿಯವರಿಗೆ ಇರಲಿದೆ.
ಅಶುಭ ಫಲ: ಕರ್ಕ, ತುಲಾ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಇರಲಿದೆ.
ಮಿಶ್ರ ಫಲ: ಮೇಷ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರಿಗೆ ಇರಲಿದೆ.