ರಮ್ಯಾ ಕಮ್ ಬ್ಯಾಕ್ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಈಗ ಈ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಬಂದಿದ್ದು, ರಮ್ಯಾ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿಲ್ಲ.
ಹೌದು. ನಟಿ ರಮ್ಯಾ ಸಿನಿಮಾದಿಂದ ಔಟ್ ಆಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗುವುದಿತ್ತು. ಸಿಂಗಲ್ ಶೆಡ್ಯೂಲ್ ನಲ್ಲಿ ಸಿನಿಮಾ ಶೂಟಿಂಗ್ ನಡೆಯಲಿತ್ತು. ಮಧ್ಯೆ ಎರಡೇ ದಿನ ಮಾತ್ರ ಗ್ಯಾಪ್ ಕೊಡಲಾಗಿತ್ತು. ಊಟಿ ಹಾಗೂ ಮೈಸೂರಿನಲ್ಲಿ ಶೂಟಿಂಗ್ ಲೊಕೇಷನ್ ಕೂಡಾ ನಿಗದಿಯಾಗಿತ್ತು. ಆದರೆ ಇನ್ನೇನು ಶೂಟಿಂಗ್ ಆರಂಭವಾಗಲು ಕೆಲವೇ ದಿನ ಇದ್ದಾಗ ನಟಿ ರಮ್ಯಾ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.
ಸಿನಿಮಾ ಮಾತ್ರ ಈಗಾಗಲೇ ನಿಗದಿಪಡಿಸಿದಂತೆ ಶೂಟಿಂಗ್ ಆರಂಭಿಸಲಿದೆ. ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದ ಸಿನಿಮಾ ‘ಸಕುಟುಂಬ ಸಮೇತ’ದಲ್ಲಿ ಹೀರೋಯಿನ್ ಆಗಿದ್ದ ನಟಿ ಈ ಸಿನಿಮಾದಲ್ಲಿ ರಮ್ಯಾ ಪ್ಲೇಸ್ಗೆ ಬರಲಿದ್ದಾರೆ ಎನ್ನಲಾಗಿದೆ. ನಟಿ ಸಿರಿ ರವಿಕುಮಾರ್ ಅವರು ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಅವರಿಗೆ ಜೋಡಿಯಾಗಲಿದ್ದಾರೆ.
ನಟಿ ರಮ್ಯಾ ಹೀರೋಯಿನ್ ಆಗಿ ಸಿನಿಮಾದಿಂದ ಹೊರಗೆ ಬಂದಿದ್ದರೂ ರಮ್ಯಾ ಈ ಸಿನಿಮಾದ ನಿರ್ಮಾಪಕಿಯಾಗಿ ಮುಂದುವರಿಯಲಿದ್ದಾರೆ. ನಟಿ ಇತ್ತೀಚೆಗಷ್ಟೇ ತಮ್ಮ ನಿರ್ಮಾಣ ಸಂಸ್ಥೆ ಆಯಪಲ್ ಬಾಕ್ಸ್ ಅನ್ನು ಎನೌನ್ಸ್ ಮಾಡಿದ್ದರು. ಇದು ರಮ್ಯಾ ಅವರ ಮೊದಲ ಪ್ರೊಡಕ್ಷನ್ ಸಿನಿಮಾ.