ಚಂದನವನದ ದೇವರು, ಚಂದನವನದ ದಂತಕಥೆ ಎಂದೇ ಹೆಸರುವಾಸಿ ಆಗಿರುವವರು ಡಾ. ರಾಜ್ ಕುಮಾರ್. ಇವರ ಬಗ್ಗೆ ಹೇಳುತ್ತಾ ಹೋದರೆ, ಪುಟಗಳೇ ಸಾಕಾಗೋದಿಲ್ಲ. ಡಾ. ರಾಜ್ ಕುಮಾರ್ ಅವರು ತಮ್ಮ ನಟನೆಯ ಮೂಲಕ ಮಾತ್ರ ಅಭಿಮಾನಿಗಳನ್ನು ಹೊಂದಿರಲಿಲ್ಲ, ಅವರಲ್ಲಿರುವ ಒಳ್ಳೇತನ, ಸರಳತೆ, ಅಭಿಮಾನಿಗಳನ್ನು ದೇವರು ಎಂದು ಭಾವಿಸಿದ ಅವರ ವ್ಯಕ್ತಿತ್ವ ಇದೆಲ್ಲವೂ ಸಹ ಅವರನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯಿತು. ಆದರೆ ರಾಜ್ ಕುಮಾರ್ ಅವರು ಮಾತ್ರ ಸರಳತೆ ಇಂದಲೇ ಇದ್ದವರು. ಡಾ. ರಾಜ್ ಕುಮಾರ್ ಅವರಿಗೆ ಇರುವ ಅಭಿಮಾನಿ ಬಳಗ ಹೇಗಿತ್ತು ಎಂದು ಗೊತ್ತೇ ಇದೆ. ಇದೀಗ ಇವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.

ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವವರು ಡಾ. ರಾಜ್ ಕುಮಾರ್. ಡಾ. ರಾಜ್ ಕುಮಾರ್ ಅವರ ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿತ್ತು, ಜನರಿಗೆ ಬದುಕಿನ ಪಾಠ ಕಲಿಸುತ್ತಿತ್ತು, ಈ ಕಾರಣಕ್ಕೆ ಅವರ ಸಿನಿಮಾಗಳು ಜನರ ಮೇಲೆ ಅಷ್ಟು ಪರಿಣಾಮ ಬೀರುತ್ತಿತ್ತು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಡಾ. ರಾಜ್ ಕುಮಾರ್ ಅಂದರೆ ಅಭಿಮಾನಿಗಳಿಗೆ ಹುಚ್ಚು ಅಭಿಮಾನ, ರಾಜ್ ಅವರಿಗೂ ಅಷ್ಟೇ ಅಭಿಮಾನಿಗಳು ಅಂದ್ರೆ ಅಷ್ಟೇ ಪ್ರೀತಿ ಮತ್ತು ವಿಶ್ವಾಸ. ಅಭಿಮಾನಿಗಳಲ್ಲಿ ದೇವರನ್ನು ಕಂಡ ಮೊದಲ ಕಲಾವಿದ ಡಾ. ರಾಜ್ ಕುಮಾರ್ ಅವರು ಎಂದು ಹೇಳಿದರೂ ತಪ್ಪಲ್ಲ. ಅಭಿಮಾನಿಗಳನ್ನು ದೇವರು ಎಂದೇ ಕರೆಯುತ್ತಿದ್ದರು. ಎಲ್ಲರನ್ನು ಒಂದೇ ರೀತಿ ಕಾಣುತ್ತಿದ್ದರು.
ಡಾ. ರಾಜ್ ಕುಮಾರ್ ಅವರು ಕನ್ನಡ ಕಂಡ ಅಪ್ರತಿಮ ಕಲಾವಿದ. ಅವರ ಬಗ್ಗೆ ಹಲವು ವಿಶೇಷತೆಗಳು, ವೈಶಿಷ್ಟ್ಯತೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಅಣ್ಣಾವ್ರು ಎಂಥಾ ಅದ್ಭುತವಾದ ನಟ ಎಂದು ನಮಗೆಲ್ಲ ಗೊತ್ತೇ ಇದೆ. ಡಾ. ರಾಜ್ ಕುಮಾರ್ ಅವರು ಎಲ್ಲಾ ಥರದ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದವರು. ಸಾಮಾಜಿಕ ಪಾತ್ರಗಳು, ಐತಿಹಾಸಿಕ ಪಾತ್ರಗಳು, ಪೌರಾಣಿಕ ಪಾತ್ರಗಳು ಎಲ್ಲದರಲ್ಲೂ ನಟಿಸಿ, ಸೈ ಎನ್ನಿಸಿಕೊಂಡಿರುವವರು. ಆಡು ಮುಟ್ಟದ ಸೊಪ್ಪಿಲ್ಲ ರಾಜಣ್ಣ ಮಾಡದ ಪಾತ್ರವೇ ಇಲ್ಲ ಎಂದು ಹಲವರು ಹೇಳಿದ್ದಾರೆ. ಡಾ. ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಇದ್ದಷ್ಟು ಸಮಯ, ಇಲ್ಲಿನ ಸಿನಿಮಾಗಳು ಬಹಳ ಚೆನ್ನಾಗಿದ್ದವು. ಈಗ ಕನ್ನಡ ಚಿತ್ರರಂಗ ಯಜಮಾನ ಇಲ್ಲದ ಮನೆಯಾಗಿದೆ ಎಂದು ಹೇಳಿದರೆ ತಪ್ಪಲ್ಲ. ಇದೆಲ್ಲವೂ ಒಂದು ಕಡೆಯಾದರೆ, ಅಣ್ಣಾವ್ರ ಸಿನಿಮಾ ಬಗ್ಗೆ ಮಾತನಾಡುವುದಾದರೆ..

ಡಾ. ರಾಜ್ ಕುಮಾರ್ ಅವರ ಒಂದೊಂದು ಸಿನಿಮಾಗಳು ಕೂಡ ವಿಭಿನ್ನವಾಗಿ ಇರುತ್ತಿದ್ದವು. ಹಲವು ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಂಥ ಸಿನಿಮಾ ಆಗಿರುತ್ತಿತ್ತು. ಅಣ್ಣಾವ್ರ ಸಿನಿಮಾಗಳು ಬಹಳಷ್ಟು ಭಾಷೆಗಳಿಗೆ ಡಬ್ ಆಗಿವೆ. ಅಲ್ಲಿನ ಕಲಾವಿದರು ನಾವು ಡಾ. ರಾಜ್ ಕುಮಾರ್ ಅವರ ಹಾಗೆ ಅಭಿನಯಿಸೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದಿದೆ. ಅಂಥ ಶ್ರೇಷ್ಠ ಅಭಿನಯ ಇವರದ್ದು. ಡಾ. ರಾಜ್ ಕುಮಾರ್ ಅವರನ್ನು ಸೀನಿಯರ್ ಎನ್.ಟಿ.ಆರ್, ಎ.ಎನ್.ಆರ್, ಶಿವಾಜಿ ಗಣೇಶನ್, ಎಂ.ಜಿ.ಆರ್ ಎಲ್ಲರೂ ಹೊಗಳುತ್ತಿದ್ದರು. ಇಂಥ ಕಲಾವಿದರ ಬಗ್ಗೆ ಇದೀಗ ನಿರ್ದೇಶಕ ಆರ್ಜಿವಿ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ, ಸಂದರ್ಶನ ಒಂದರಲ್ಲಿ ಏನನ್ನೋ ಮಾತನಾಡಿದ್ದಾರೆ ಆರ್ಜಿವಿ. ಇದರಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು 70 ಮತ್ತು 80ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ, ಹಿಟ್ ಗಳಿಸುತ್ತಿದ್ದರು. ಚಿರಂಜೀವಿ, ರಜನಿಕಾಂತ್, ರಾಜ್ ಕುಮಾರ್ ಎಲ್ಲರೂ ಇದೇ ರೀತಿ ಮಾಡುತ್ತಾ ಇದ್ದಿದ್ದು. 90ರ ದಶಕದಲ್ಲಿ ನಂತರ ಬದಲಾಯ್ತು, ಬಾಲಿವುಡ್ ನಲ್ಲಿ ಮೈನೆ ಪ್ಯಾರ್ ಕಿಯಾ ಅಂಥ ಮ್ಯೂಸಿಕಲ್ ಸಿನಿಮಾಗಳನ್ನು ಮಾಡುವುದಕ್ಕೆ ಶುರು ಮಾಡಿದರು, ಆದರೆ ದಕ್ಷಿಣದಲ್ಲಿ ಬದಲಾಗಲಿಲ್ಲ, ಒಂದೇ ರೀತಿಯ ಮಸಾಲ ಸಿನಿಮಾಗಳನ್ನೇ ಮಾಡುತ್ತಾ ಬಂದರು. ಅಲ್ಲಿ ಈಗಲೂ ಹಾಗೆ ಇದೆ, ಯಾವುದು ಬದಲಾಗಿಲ್ಲ. ಬಾಲಿವುಡ್ ಸಿನಿಮಾಗಳ ಹಾಗೆ ಮುಂದುವರೆದಿಲ್ಲ ಎಂದು ಅಸಂಬದ್ಧ ಹೇಳಿಕೆಯನ್ನು ಆರ್ಜಿವಿ ಅವರು ನೀಡಿದ್ದು, ಇದರಿಂದ ಕನ್ನಡಿಗರು ಅಣ್ಣಾವ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಮಿತಾಬ್ ಬಚ್ಚನ್ ಅವರ ಸಿನಿಮಾವನ್ನು ರಿಮೇಕ್ ಮಾಡುವ ಅವಶ್ಯಕತೆ ಡಾ.ರಾಜ್ ಕುಮಾರ್ ಅವರಿಗೆ ಯಾವತ್ತಿಗೂ ಬಂದಿರಲಿಲ್ಲ, ಅಣ್ಣಾವ್ರ ಸಿನಿಮಾಗಳನ್ನು ಬಚ್ಚನ್ ರಿಮೇಕ್ ಮಾಡಿದ್ದಾರೆ. ಶಂಕರ್ ಗುರು ಸಿನಿಮಾವನ್ನು ಮಹಾನ್ ಹೆಸರಿನಲ್ಲಿ ರಿಮೇಕ್ ಮಾಡಿದರು. ಬೇರೆ ಸಿನಿಮಾಗಳನ್ನು ಅವರು ರಿಮೇಕ್ ಮಾಡಿದ್ದಾರೆ, ಆದರೆ ಅಣ್ಣಾವ್ರು ಅಮಿತಾಬ್ ಅವರ ಸಿನಿಮಾವನ್ನ ರಿಮೇಕ್ ಮಾಡಿಲ್ಲ. ಅಣ್ಣಾವ್ರು ಚಿತ್ರರಂಗಕ್ಕೆ ಬಂದಿದ್ದು 1954ರಲ್ಲಿ ಅಮಿತಾಬ್ ಅವರು ಬಂದಿದ್ದು 1969ರಲ್ಲಿ, ಕಂಪೇರ್ ಮಾಡುವುದಕ್ಕೆ ಕೂಡ ಆಗೋದಿಲ್ಲ. ಎಂದು ಅಣ್ಣಾವ್ರ ಅಭಿಮಾನಿಗಳು ಆರ್ಜಿವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರ್ಜಿವಿ ಅವರು ಗೊತ್ತಿಲ್ಲದೇ ತಿಳಿದುಕೊಳ್ಳದೇ ಏನೇನೋ ಮಾತನಾಡಬಾರದು ಎನ್ನುತ್ತಿದ್ದಾರೆ ಕನ್ನಡಿಗರು. ಈ ವಿಚಾರ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಆಡಿದ ಮಾತು, ಎಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ, ಅವರ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗದ ಹಾಗೆ ಮಾಡಿದೆ, ಇನ್ನು ಇವರಿಗೆ ಏನು ಮಾಡಬೇಕು ಎಂದು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವರು ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದೇ, ಮಾತನಾಡಿದರೆ ಏನೆಲ್ಲಾ ಆಗುತ್ತದೆ ಎನ್ನುವುದನ್ನ ನಾವು ಇಂಥ ಘಟನೆಗಳಿಂದ ಅರ್ಥ ಮಾಡಿಕೊಳ್ಳಬೇಕು.



