ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಕೆಲವೇ ದಿನಗಳ ಅಂತರದಲ್ಲಿ ಮದುವೆಯಾಗಿದ್ದಾರೆ. ಮೊನ್ನೆಯಷ್ಟೇ ಚೈತ್ರಾ ಕುಂದಾಪುರ ಅವರ ಮದುವೆ ನಡೆಯಿತು, ಈಗ ರಂಜಿತ್ ಅವರ ಮದುವೆ ನಡೆದಿದೆ. ಇವರಿಬ್ಬರ ಮದುವೆಗೆ ಬಿಗ್ ಬಾಸ್ ಸ್ಪರ್ಧಿಗಳೆಲ್ಲರು ಬಂದು ಹರಸಿದ್ದಾರೆ. ಇನ್ನು ಮುಂದೆ ಮದುವೆಯಾಗೋ ಲಿಸ್ಟ್ ನಲ್ಲಿ ಹನುಮಂತ ಇದ್ದಾರೆ, ಅನುಷಾ ರೈ ಇದ್ದಾರೆ, ಧರ್ಮ ಕೀರ್ತಿ ರಾಜ್ ಇದ್ದಾರೆ, ಇನ್ನು ಕೆಲವು ಸ್ಫರ್ಧಿಗಳು ಇದ್ದಾರೆ. ಅದರಲ್ಲೂ ವಿಶೇಷವಾಗಿ ಅನುಷಾ ರೈ ಅವರಿಗೆ ಮದುವೆ ಮಾಡುವ ಪ್ರಯತ್ನ ನಡೆಯುತ್ತಿದ್ದು, ಹುಡುಗನನ್ನ ಹುಡುಕುತ್ತಿದ್ದಾರಂತೆ. ಇವರಿಗೆ ಹುಡುಗನನ್ನ ಹುಡುಕೋ ಜವಾಬ್ದಾರಿಯನ್ನ ಗೋಲ್ಡ್ ಸುರೇಶ್ ಅವರು ತೆಗೆದುಕೊಂಡಿದ್ದು, ಈ ಬಗ್ಗ ಮಾತನಾಡಿದ್ದಾರೆ..

ಮೊನ್ನೆಯಷ್ಟೇ ಚೈತ್ರಾ ಕುಂದಾಪುರ ಅವರ ಮದುವೆ ನಡೆಯಿತು. ಚೈತ್ರಾ ಅವರು ತಾವು ಇಷ್ಟಪಟ್ಟ ಹುಡುಗ ಶ್ರೀಕಾಂತ್ ಕಶ್ಯಪ್ ಅವರೊಡನೆ ಮದುವೆಯಾಗಿದ್ದಾರೆ. ಶ್ರೀಕಾಂತ್ ಹಾಗೂ ಚೈತ್ರಾ ಅವರದ್ದು 12 ವರ್ಷಗಳ ಲವ್ ಸ್ಟೋರಿ. ಕಾಲೇಜು ದಿನಗಳಿಂದ ಇಷ್ಟಪಡುತ್ತಿರುವ ಈ ಜೋಡಿ, ಇದೀಗ ಮದುವೆಯಾಗಿದ್ದಾರೆ. ಇವರ ಮದುವೆಗೆ ಬಿಗ್ ಬಸ್ ಸ್ಪರ್ಧಿಗಳು ಬಂದು ವಿಶ್ ಮಾಡಿ, ಹೊಸ ಜೋಡಿಗೆ ಹರಸಿ ಹಾರೈಸಿದ್ದಾರೆ. ರಜತ್ ಅವರು ಅಣ್ಣನ ಸ್ಥಾನದಲ್ಲಿ ನಿಂತು ಚೈತ್ರಾ ಅವರ ಮದುವೆಯನ್ನು ನಡೆಸಿಕೊಟ್ಟಿರುವುದು ವಿಶೇಷವಾಗಿತ್ತು. ಇನ್ನು ಉಗ್ರಂ ಮಂಜು ಅವರು ಮದುವೆಯಾದ ಮರುದಿನ ಚೈತ್ರಾ ಅವರ ಮನೆಗೆ ಹೋಗಿ, ಗಿಫ್ಟ್ ಕೊಟ್ಟಿದ್ದಾರೆ. ಹೀಗೆ ಎಲ್ಲರೂ ಇವರ ಮದುವೆಗೆ ಜೊತೆಯಾಗಿ ಸೇರಿದರು.

ಚೈತ್ರಾ ಕುಂದಾಪುರ ಅವರ ಮದುವೆ ಸರಳವಾಗಿ ದೇವಸ್ಥಾನದಲ್ಲಿ ನಡೆಯಿತು. ಇದರ ಜೊತೆಗೆ ಬಿಗ್ ಬಾಸ್ ನ ಮತ್ತೊಬ್ಬ ಸ್ಪರ್ಧಿ ರಂಜಿತ್ ಅವರ ಮದುವೆ ಸಹ ನಡೆದಿದೆ. ಇವರದ್ದು ಅಪ್ಪಟ ಲವ್ ಮ್ಯಾರೇಜ್, ಮಾನಸ ಅವರನ್ನು ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ರಂಜಿತ್ ಅವರು ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಗೆ ಕೂಡ ಬಿಗ್ ಬಾಸ್ ಸ್ಪರ್ಧಿಗಳೆಲ್ಲರು ಬಂದು ವಿಶ್ ಮಾಡಿದ್ದಾರೆ. ಇವರ ಎಂಗೇಜ್ಮೆಂಟ್ ನಡೆದಾದ ಸಹ ಎಲ್ಲರೂ ಜೊತೆಯಾಗಿ ಸೇರಿದ್ದರು. ಈಗ ಮದುವೆಗೂ ಅದೇ ರೀತಿ ಸೇರಿ ವಿಶ್ ಮಾಡಿದ್ದಾರೆ. ಚೈತ್ರಾ ಕುಂದಾಪುರ ಮತ್ತು ರಂಜಿತ್ ಇಬ್ಬರ ಮದುವೆ ಸಹ ಈ ರೀತಿ ಕೆಲ ದಿನಗಳ ಅಂತರದಲ್ಲೇ ನಡೆಯಿತು. ಇನ್ನು ಮುಂದಿನ ಮದುವೆ ಯಾರದ್ದು ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಗೋಲ್ಡ್ ಸುರೇಶ್ ಅವರನ್ನು ಕೇಳಲಾಗಿದೆ.

ಗೋಲ್ಡ್ ಸುರೇಶ್ ಅವರು ಕಳೆದ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ಬಂದಿದ್ದವರು, ಸೋಷಿಯಲ್ ಮೀಡಿಯಾದಲ್ಲಿ ಸಹ ಇವರಿಗೆ ಬಹಳ ಬೇಡಿಕೆ ಇದೆ. ಬಿಗ್ ಬಾಸ್ ಮನೆಯ ಹೆಣ್ಣುಮಕ್ಕಳ ಪಾಲಿಗೆ ಅಣ್ಣನಾಗಿ ಇದ್ದವರು ಗೋಲ್ಡ್ ಸುರೇಶ್, ಎಲ್ಲರ ಜೊತೆಗೆ ಬಹಳ ಚೆನ್ನಾಗಿ ಮಾತನಾಡುತ್ತಾ ಇದ್ದರು. ಎಲ್ಲರೂ ಇವರನ್ನು ಅಣ್ಣನ ಹಾಗೆ ಗೌರವಿಸುತ್ತಿದ್ದರು. ಎಲ್ಲರೊಡನೆ ಆತ್ಮೀಯರಾಗಿ ಇದ್ದರು ಗೋಲ್ಡ್ ಸುರೇಶ್. ರಂಜಿತ್ ಅವರ ಮದುವೆಗೆ ಬಂದಿದ್ದ ಇವರನ್ನು ಮಾಧ್ಯಮದವರು ಒಂದೆರಡು ಪ್ರಶ್ನೆಗಳನ್ನು ಕೇಳಿದ್ದು ಅನುಷಾ ಅವರ ಮದುವೆ ಬಗ್ಗೆ ಸಹ ಮಾತನಾಡಿದ್ದಾರೆ. ಮೊದಲಿಗೆ ರಂಜಿತ್ ಅವರಿಗೆ ವಿಶ್ ಮಾಡಿ, ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಗೋಲ್ಡ್ ಸುರೇಶ್ ಅವರು ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ರಂಜಿತ್ ಅವರು ಗೋಲ್ಡ್ ಸುರೇಶ್ ಅವರ ಜೊತೆಗಾಗಲಿ ಅಥವಾ ಇನ್ಯಾವುದೇ ಸ್ಪರ್ಧಿಗಳ ಜೊತೆಗೆ ತಾವು ಲವ್ ಮಾಡುತ್ತಿರುವ ವಿಷಯವನ್ನ ಚರ್ಚೆ ಮಾಡಿರಲಿಲ್ಲವಂತೆ. ರಂಜಿತ್ ಅವರು ಬಿಗ್ ಬಾಸ್ ಮನೆಯ ಒಳಗೆ ಹೆಚ್ಚು ದಿನಗಳ ಕಾಲ ಇರಲಿಲ್ಲ, ಹಾಗಾಗಿ ಬಿಗ್ ಬಾಸ್ ಪಯಣ ಇದ್ದಷ್ಟು ದಿವಸ ಯಾರಿಗೂ ಈ ವಿಷಯ ಗೊತ್ತಿರಲಿಲ್ಲ. ಈಗ ರಂಜಿತ್ ಅವರು ತಾವು ಪ್ರೀತಿಸಿದ ಹುಡುಗಿ ಜೊತೆಗೆ ಮದುವೆಯಾಗಿದ್ದಾರೆ. ಇನ್ನು ಗೋಲ್ಡ್ ಸುರೇಶ್ ಅವರಿಗೆ ಮುಂದೆ ಯಾರ ಮದುವೆ ಮಾಡಿಸುವ ಪ್ಲಾನ್ ಇದೆ ಎಂದು ಕೇಳಲಾಗಿದ್ದು, ಚೈತ್ರಾ ಮದುವೆ ಮಾಡಿಸಿದ್ದು ಆಗಿದೆ. ಹನುಮಂತನ ಮದುವೆಯ ಪ್ಲಾಜ್ ನಡೀತಿದೆ, ಹನುಮಂತನ ಮದುವೆಯನ್ನು ಮಾಡಿಸುತ್ತೇನೆ ಎಂದಿದ್ದಾರೆ.
ಇನ್ನು ಅನುಷಾ ರೈ ಮದುವೆ ವಿಚಾರ ಸಹ ಬಂದಿದ್ದು, ಅವರಿಗೆ ಹುಡುಗನನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ ಗೋಲ್ಡ್ ಸುರೇಶ್. ಅನುಷಾ ರೈ ಅವರಿಗೆ ಡಿಬಾಸ್ ಅವರಂಥ ಹುಡುಗ ಬೇಕು ಎಂದು ಆಸೆ ಇದ್ದು, ಅವರಿಗೆ ಡಿಬಾಸ್ ಅಂಥ ಹುಡುಗನನ್ನೇ ಹುಡುಕುತ್ತಿರಾ ಎಂದು ಕೇಳಿದ್ದಕ್ಕೆ ಉತ್ತರ ಕೊಟ್ಟಿರುವ ಗೋಲ್ಡ್ ಸುರೇಶ್, ಡಿಬಾಸ್ ಅವರಂಥ ಹುಡುಗ ಬೇಕು ಅಂತ ಅನುಷಾ ಆಸೆ, ಡಿಬಾಸ್ ಗೆ ಡಿಬಾಸ್ ಸಾಟಿ ಅವರ ಥರ ಇನ್ನೊಬ್ಬರು ಇರೋದಕ್ಕೆ ಸಾಧ್ಯವಿಲ್ಲ, ಅವರ ಥರ ಹುಡುಗ ಸಿಗೋದು ಇಲ್ಲ, ಡಿಬಾಸ್ ಗೆ ಹತ್ತಿರ ಅನ್ನಿಸುವಂಥ ಹುಡುಗನನ್ನ ಅನುಷಗೊಸ್ಕರ ಹುಡುಕಿ, ಖಂಡಿತ ಮದುವೆ ಮಾಡ್ತೀನಿ ಎಂದು ಹೇಳಿದ್ದಾರೆ ಗೋಲ್ಡ್ ಸುರೇಶ್. ಒಟ್ಟಿನಲ್ಲಿ ಅನುಷಾ ಅವರಿಗೋಸ್ಕರ ಭರ್ಜರಿ ಪ್ಲಾನ್ ನಡೀತಿದೆ ಅನ್ನೋದರಲ್ಲಿ ಸಂಶಯವಿಲ್ಲ.

ಇನ್ನು ಅನುಷಾ ರೈ ಅವರು ಮೊದಲಿನಿಂದ ಕೂಡ ಡಿಬಾಸ್ ಅವರ ದೊಡ್ಡ ಫ್ಯಾನ್. ಹಲವು ಸಾರಿ ಅದನ್ನು ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಾರಿ ಡಿಬಾಸ್ ಬಗ್ಗೆ ಪೋಸ್ಟ್ ಮಾಡಿದ್ದಾರೆ, ಡಿಬಾಸ್ ಪರವಾಗಿ ನಿಂತಿದ್ದಾರೆ. ದರ್ಶನ್ ಅವರು ಸಹ ಅನುಷಾ ರೈ ಅವರನ್ನು ತಮ್ಮ ಸ್ವಂತ ತಂಗಿಯ ಹಾಗೆ ನೋಡಿಕೊಳ್ಳುತ್ತಾರೆ. ಕೆಲವು ಸಾರಿ ದರ್ಶನ್ ಅವರನ್ನು ಮೀಟ್ ಮಾಡಿದ್ದಾರೆ ಅನುಷಾ. ತಾವು ಮದುವೆ ಆಗುವ ಹುಡುಗ ದರ್ಶನ್ ಅವರ ಹಾಗೆಯೇ ಇರಬೇಕು ಎಂದು ಅನುಷಾ ಅವರು ಕೆಲವು ಸಂದರ್ಶನಗಳಲ್ಲಿ ಮಾತನಾಡಿದಾಗ ಹೇಳಿದ್ದರು. ಈಗ ಅವರಿಗೆ ದರ್ಶನ್ ಅವರನ್ನು ಹೋಲುವಂಥ ಹುಡುಗನನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಅನುಷಾ ರೈ ಅವರಿಗೆ ಇಷ್ಟ, ಆಗುವಂಥ, ಸರಿ ಹೊಂದುವಂಥ ಹುಡುಗನೇ ಸಿಗಲಿ..



